ಬಸವನಬಾಗೇವಾಡಿ: ತಾಲೂಕಿನ ನಾಗವಾಡ ಗ್ರಾಮದಲ್ಲಿ ಸ್ನೇಹ ಮತ್ತು ಬಾತೃತ್ವದ ಸಂಕೇತವಾದ ಮೊಹರಂ ಆಚರಣೆಯ ಅಂಗವಾಗಿ ಮಂಗಳವಾರ ಖತಾಲ್ ರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಿಂದುಗಳು ಅಲಾಯಿ ದೇವರಿಗೆ ಮಾದಲಿ ಹಾಗೂ ಅಗ್ಗಿಗೆ ಕಟ್ಟಿಗೆ ಅರ್ಪಿಸಿ ಭಕ್ತಿ ಮೆರೆದರು. ಹಿಂದುಗಳ ಮನೆಯಲ್ಲಿ ಐದು ಜನ ಫಕೀರಗಳಿಗೆ ಅನಾದಿಕಾಲದ ಪರಂಪರೆಯಂತೆ ಖಿಚಡಿ ಉಣಿಸಿದರು. ರಾತ್ರಿ ವಿವಿಧ ವಾದ್ಯಗಳೊಂದಿಗೆ ಯುವಕರು, ಹಿರಿಯರು ಹೆಜ್ಜೆ ಆಡಿ ಸಂಭ್ರಮಿಸಿದರು.
ಗ್ರಾಮದ ಮೂಲ ದರ್ಗಾದಲ್ಲಿರುವ ಹನುಮಜಂಗ, ಬಿಬಿ ಫಾತಿಮಾ, ಮೌಲಾಲಿ, ಬಿಬಿ ಹನಿಪ್, ಕಾಶಿಮ್ ದುಲ್, ಅಲ್ಲರ್ ಮಮ್ಮದ್, ಭಾರಿ ಇಮಾಮ್, ಇಮಾಮ್ ಕಾಸಿಂ ದೇವರುಗಳಿಗೆ ಅಲ್ಲದೇ ಮಡ್ಡಿ ದರ್ಗಾಕ್ಕೆ ಗ್ರಾಮಸ್ಥರು ತೆರಳಿ ಮಾದಲಿ ಅರ್ಪಿಸಿ ನಮಸ್ಕರಿಸಿದರು.
ವಿವಿಧ ಊರುಗಳಲ್ಲಿ ನೆಲೆಸಿರುವ ಗ್ರಾಮಸ್ಥರು ಮೊಹರಂ ಹಬ್ಬ ಆಚರಣೆಗೆ ತಮ್ಮೂರಿಗೆ ಬರುವುದು ಈ ಗ್ರಾಮದ ವಿಶೇಷ. ಬುಧವಾರ ಸಂಜೆ ಮೆರವಣಿಗೆ ಮೂಲಕ ದೇವರುಗಳನ್ನು ಹೊಳೆಗೆ ಕಳುಹಿಸುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಹೆಜ್ಜೆ ಆಟದಲ್ಲಿ ಯಮನಪ್ಪಗೌಡ ಹಂಗರಗಿ, ಎಸ್.ವೈ.ಕೋಳೂರು, ರಾಮಚಂದ್ರ ಖೇಡದ, ಭೋಜು ಪವಾರ, ಸಿದ್ದನಗೌಡ ಬಿರಾದಾರ, ರಾಮನಗೌಡ ಬ ಬಿರಾದಾರ, ಪ್ರಭಾಕರ ಖೇಡದ ಕುತುಬು ಮುಜಾವರ, ಬುಡ್ಡೆಸಾಬ್ ಮುಜಾವರ, ಶಿವಾನಂದ ಮ್ಯಾಗೇರಿ, ಮಹದೇವ ಪವಾರ, ಗೌಡಪ್ಪ ಅಂಬಲಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

