Author: editor.udayarashmi@gmail.com

ವಿಜಯಪುರದ ಡಿಡಿಪಿಯು ಡಾ. ಸಿ.ಕೆ.ಹೊಸಮನಿ ಆರ್.ಡಿ.ಪಾಟೀಲ ಪಿಯು ಕಾಲೇಜಿಗೆ ಅನಿರೀಕ್ಷಿತ ಭೇಟಿ ಸಿಂದಗಿ: ಕಾಲೇಜು ಅಭಿವೃದ್ಧಿ ಕೆಲಸ ಕಾರ್ಯ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೇ ನಮಗೆಲ್ಲ ಮುಖ್ಯ ಧ್ಯೇಯವಾಗಬೇಕು ಎಂದು ವಿಜಯಪುರದ ಡಿಡಿಪಿಯು ಡಾ. ಸಿ.ಕೆ.ಹೊಸಮನಿ ಹೇಳಿದರು.ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಅನಿರೀಕ್ಷಿತ ಭೇಟಿ ನೀಡಿ ಆಡಳಿತಾತ್ಮಕ ದಾಖಲೆಗಳನ್ನು ಪರೀಶೀಲಿಸಿ ಅವರು ಮಾತನಾಡಿದರು.ಏಕಾಗ್ರತೆಯಿಂದ ಪಾಠ, ಪ್ರವಚನಗಳಿಗೆ ಹೆಚ್ಚಿನ ಒತ್ತು ಗುರುವೃಂದ ನೀಡಿದಾಗ ವಿದ್ಯಾರ್ಥಿಗಳು ಸಾಧನೆಯ ನಡೆಯಲ್ಲಿ ಹೆಜ್ಜೆಯಿರಿಸಲು ಸಾಧ್ಯ. ಗುರಿಸಾಧನೆಗೆ ಏಕಚಿತ್ತದ ಹಂಬಲ ಇರಬೇಕು ಅಂದಾಗ ಭವಿಷ್ಯತ್ತಿನ ಗುರಿ ತಲುಪಲು ಯುವ ಪೀಳಿಗೆಗೆ ಸಾಧ್ಯ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಭವಿಷ್ಯಕ್ಕೆ ಕಾರಣಕರ್ತರಾಗಬೇಕು. ಆ ನಿಟ್ಟಿನಲ್ಲಿ ಪಿಯು ಕಾಲೇಜ ಉಪನ್ಯಾಸಕರು ಹೃದಯದಿಂದ ಶ್ರಮಿಸಬೇಕು. ಶೈಕ್ಷಣಿಕ ಪ್ರಗತಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯೊಂದಿಗೆ ಜೊತೆಯಾಗಿ ನಿಂತು ಸಹಕರಿಸಬೇಕು ಎಂದರು.ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ವಿಶೇಷ ಪಾಠ, ಯೋಜನಾ ಕ್ರಮಗಳ ಮಾಹಿತಿ ಪಡೆದರು. ಫಲಿತಾಂಶ…

Read More

ಚಿಮ್ಮಡ ಗಾಪಂ | ನಿನ್ನೆ ಕಾಂಗ್ರೆಸ್ ಇಂದು ಬಿಜೆಪಿ | ಗ್ರಾಂ.ಪಂ. ಸದಸ್ಯನ ಜಿಗಿದಾಟ – ಇಲಾಹಿ ಇ. ಜಮಖಂಡಿಚಿಮ್ಮಡ: ರಬಕವಿ- ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ನಡುವೆ ತೀವ್ರ ಹಗ್ಗ ಜಗ್ಗಾಟ ಶುರುವಾಗಿದ್ದು ಅಂತಿಮವಾಗಿ ಯಾರ ಕೈ ಮೇಲಾಗುವುದೋ ಕಾಯ್ದು ನೋಡಬೇಕಾಗಿದೆ.ಇಲ್ಲಿನ ಗ್ರಾಮ ಪಂಚಾಯತಿಗೆ ಹಾಲಿ ಅಧ್ಯಕ್ಷರಾಗಿರುವ ಶ್ರೀಮತಿ ಮಾಲಾ ಅಶೋಕ ಮೋಟಗಿ ತಮ್ಮ ಬೆಂಬಲಿಗ ಸದಸ್ಯರ ನಡುವೆ ಮಾಡಿಕೊಂಡ ಒಪ್ಪಂದದಂತೆ ಕಳೆದ ಹದಿನೈದು ದಿನಗಳ ಹಿಂದೆ ಜಮಖಂಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೊಂಡ ರವರಿಗೆ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು.ನಂತರ ನಡೆದ ಬೆಳವಣಿಗೆಯಲ್ಲಿ ರಾಜಿನಾಮೆಯನ್ನು ಹಿಂಪಡೆದು ಪತಿ ಅಶೋಕ ಮೋಟಗಿಯವರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು.ಇಪ್ಪತ್ತೆಂಟು ಸದಸ್ಯಬಲದ ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕಳೆದ ಹನ್ನೊಂದು ತಿಂಗಳ ಹಿಂದೆ ಬಿಜೆಪಿ ಬೆಂಬಲಿತ ೧೯ ಸದಸ್ಯರ ಬೆಂಬಲದೊಂದಿಗೆ ಶ್ರೀಮತಿ ಮಾಲಾ ಅಶೋಕ ಮೋಟಗಿ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು. ೧೯/೯ ಪರ, ವಿರೋಧ ಬಲವಿರುವ ಇಲ್ಲಿನ ಪಂಚಾಯತಿಯಲ್ಲಿ ದಿನಕ್ಕೊಂದು…

Read More

ರೇವತಗಾಂವ: ಮೊಹರಂ ಉತ್ತರ ಕರ್ನಾಟಕ ಭಾಗದಲ್ಲಿ ಭಾವೈಕ್ಯತೆಯ ಸೇತುವೆಯಾಗಿದೆ. ಮುಸ್ಲಿಮರ ಹೊಸ ವರ್ಷದ ಹಬ್ಬ ಮೊಹರಂ. ಇಲ್ಲಿ ಕೇವಲ ಮುಸ್ಲಿಂ ಬಾಂಧವರ ಹಬ್ಬವಾಗಿರದೇ ಹಿಂದೂ ಮುಸಲ್ಮಾನರು ಒಟ್ಟಾಗಿ ಮೊಹರಂ ಆಚರಿಸಿ ಭಾವೈಕ್ಯತೆಯ ಹಬ್ಬವನ್ನಾಗಿ ಆಚರಣೆ ಮಾಡುತ್ತಾರೆ.ಮೊಹರಂ ಕೊನೆಯ ದಿನವಾದ ಬುಧವಾರದಂದು ನಸುಕಿನ ಜಾವ ೫ ಗಂಟೆಗೆ ಹಸೇನ್ ಹಾಗೂ ಹುಸೇನ್ ದೇವರು ಬೇಬಿ ಫಾತೀಮಾ ದೇವರ ಡೋಲಿಯೊಂದಿಗೆ ಸಂಪ್ರದಾಯದ ಪ್ರಕಾರ ಗ್ರಾಮದ ಅಣ್ಣಾರಾಯ ಸಿದ್ಧನಗೌಡ ಪಾಟೀಲರ ಮನೆಗೆ ಭೇಟಿ ನೀಡಿ ಆದರಾತಿಥ್ಯವನ್ನು ಸ್ವೀಕರಿಸಿದ ನಂತರ, ಲಾಲಸಾಬ ದೇವರ ಡೋಲಿಯನ್ನು ಮಸೀದಿಯಲ್ಲಿ ಕುಳ್ಳರಿಸಿ ನಂತರ ಗ್ರಾಮದ ಎಲ್ಲ ಭಕ್ತರ ಮನೆ-ಮನೆಗಳಿಗೆ ಹಸೇನ್-ಹುಸೇನ್ ದೇವರು ಭೇಟಿ ನೀಡಿ ಪೂಜೆಯನ್ನು ಸ್ವೀಕರಿಸಿ ಮಸೀದಿಗೆ ಮರುಳಿದರು.ನಂತರ ಸಾಯಂಕಾಲ ೪ ಗಂಟೆಗೆ ಭಕ್ತರಿಂದ ಚೌಂಕಿ ನೇವೈದ್ಯ ಅರ್ಪಿಸಲಾಯಿತು. ಸಾಯಂಕಾಲ ೪:೩೦ ಗಂಟೆಗೆ ರಿವಾಯತ್ ಪದಗಳು, ಕರಬಲ್, ಕರಡಿ ಕುಣಿತ ಆಟಗಳು ಜರುಗಿದವು. ಸಾಯಂಕಾಲ ೫ ಗಂಟೆಗೆ ಹಸನ್ ಹಾಗೂ ಹುಸೇನ್ ದೇವರು ಗ್ರಾಮದ ಭಕ್ತರ ಮನೆ ಮನೆಗೆ ತೆರಳಿ…

Read More

ಇಂಡಿ: ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ಸಂಸೋಧನೆ ನಿರಂತರ ನಡೆಯುತ್ತಿದ್ದು ಆ ಸಂಶೋಧನೆಗಳು ರೈತರ ಬೇಡಿಕೆ ಅನುಗುಣವಾಗಿ ನಡೆಯುತ್ತವೆ ಎಂದು ಕೃಷಿ ವಿವಿ ಧಾರವಾಡದ ಗೌರವಾನ್ವಿತ ಕುಲಪತಿಗಳಾದ ಡಾ. ಪಿ.ಎಲ್ ಪಾಟೀಲ ಹೇಳಿದರು.ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಕೃಷಿ ವಿವಿ ಧಾರವಾಡ,ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಶ್ರೀ ಶಿವಯೋಗೀಶ್ವರ ದೇವಸ್ಥಾನ ಸಾಲೋಟಗಿ, ನಿಂಬೆ ಅಭಿವೃದ್ದಿ ಮಂಡಳಿ ಇಂಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇಂಡಿ ಇವರ ಸಹಯೋಗದಲ್ಲಿ ಕೃಷಿ ವಿಜ್ಞಾನಿಗಳ ನಡೆ ರೈತರ ಕಡೆಗೆ ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗೀಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡ ನಿಂಬೆ ಮತ್ತು ಕಬ್ಬು ಬೆಳೆಗಳ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಿದ್ದರು.ಮುಂಗಾರು – ಹಿಂಗಾರು ಮತ್ತು ದೀರ್ಘಾವಧಿ ಬೆಳೆಗಳ ಕುರಿತು ಸಂಶೋಧನೆ ನಡೆಯುತ್ತಿವೆ.ಬೆಳೆಗಳಿಗೆ ಯಾವ ಹಂತದಲ್ಲಿ ಗೊಬ್ಬರ, ಕೀಟನಾಶಕ, ರೋಗ ನಿವಾರಕ ಕೊಡಬೇಕು ಕುರಿತು ಸಂಶೋಧನೆ ನಡೆಯುತ್ತಿವೆ. ಆ ಎಲ್ಲ ಸಂಶೋಧನೆಗಳ ವಿಚಾರ ಸಂಕೀರಣ ಕೂಡ ನಡೆಯುತ್ತದೆ. ಅವುಗಳನ್ನು ರೈತರಿಗೆ ಪ್ರಾತ್ಯಕ್ಷಿತೆ ಮೂಲಕ ನೀಡಲಾಗುತ್ತದೆ ಎಂದರು.ರೈತರ ಮಕ್ಕಳಿಗೆ ಎಲ್ಲ ಕೃಷಿ…

Read More

ಮುದ್ದೇಬಿಹಾಳ: ಕೃಷಿ ಅಗತ್ಯತೆಗಳನ್ನು ಸಗಟು ರೂಪದಲ್ಲಿ ತರುವ ಮತ್ತು ಬೆಳೆದ ಉತ್ಪನ್ನಗಳನ್ನು ಚಿಲ್ಲರೆ ರೂಪದಲ್ಲಿ ಮಾರುವ ಕೌಶಲ್ಯ ತಂದು ಕೊಡುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಿ ಸುಸ್ಥಿರತೆಯ ಪರಿಸರ ನಿರ್ಮಿಸಲು ರೈತ ಉತ್ಪಾದಕ ಕಂಪನಿಗಳು ಉತ್ತಮ ಭೂಮಿಕೆಯಾಗಿದ್ದು ಕೃಷಿ ನಿರಾಸಕ್ತ ಹೊಸ ಪೀಳಿಗೆಯಲ್ಲಿ ಸಕಾರಾತ್ಮಕತೆ ತರಲು ಎಫ್.ಪಿ.ಓಗಳು ಸಹಕಾರಿಯಾಗಿವೆ ಎಂದು ಬಾಗಲಕೋಟೆಯ ಪಶು ಸಂಗೋಪನೆ ಹಾಗೂ ಪಶು ವೈಧ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಶಿವಾನಂದ ಕರಡಿಗುಡ್ಡ ಹೇಳಿದರು.ಪಟ್ಟಣದ ವಿದ್ಯಾನಗರದಲ್ಲಿರುವ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯಲ್ಲಿ ಏರ್ಪಡಿಸಲಾಗಿದ್ದ ರೈತ ಉತ್ಪಾದಕ ಕಂಪನಿ ಕೈಪಿಡಿ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮ ಮಟ್ಟದಲ್ಲಿ ರೈತರನ್ನು ಒಗ್ಗೂಡಿಸಿ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳನ್ನು ಉತ್ತಮಪಡಿಸಬೇಕೆಂಬ ಆಲೋಚನೆಯಿಂದ ಹುಟ್ಟಿ ಬಂದ ರೈತ ಉತ್ಪಾದಕ ಕಂಪನಿಯ ಮೂಲ ಆಶಯವನ್ನು ಎತ್ತಿ ಹಿಡಿಯಲು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದರು.ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ವ್ಯಾಪ್ತಿಯ…

Read More

– ಎಚ್.ಎಸ್.ನಡುವಿನಮನಿತಾಳಿಕೋಟಿ: ತಾಲ್ಲೂಕಿನ ತಮದಡ್ಡಿ ಗ್ರಾಮದಲ್ಲಿ ಮೂಹರಂ ಕೊನೆಯ ದಿನದಂದು ಸರ್ವ ಧರ್ಮೀಯರು ಪಾಲ್ಗೊಂಡು ಅತ್ಯಂತ ವಿಜ್ರಂಭಣೆಯಿಂದ ಅರ್ಥ ಪೂರ್ಣವಾಗಿ ಮೊಹರಂ ಆಚರಿಸಲಾಯಿತು.ಈ ಸಂದರ್ಭದಲ್ಲಿ ರಾಜೇಸಾ ಮುಲ್ಲಾ ಇಬ್ರಾಹಿಂ ಮುಲ್ಲಾ, ನಬೀಸಾ ಮುಲ್ಲಾ, ದಸಗೀರ ಮುಲ್ಲಾ ಮೈನೂ, ಸಲಿಮ್ ಮುಲ್ಲಾ , ಸಾಹೇಬಗೌಡ ಯಾದಗಿರಿ, ಮಹಮ್ಮದ್ ಹಿರೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಬಿರಾದಾರ ಹಾಗೂ ಗ್ರಾಮದ ಮುಖಂಡರು ಹಾಗೂ ಯುವಜನ ಉಪಸ್ಥಿತರಿದ್ದರು.ಮೊಹರಂ ಹಿನ್ನೆಲೆ: ಏಳನೇ ಶತಮಾನದಲ್ಲಿ, ಮಹಮದ್ ಪೈಗಂಬರರ ಮೊಮ್ಮಕ್ಕಳಾದ ಹುಸೇನ್‍ ಹಾಗೂ ಅವರ ಸಂಗಡಿಗರು ಯಜೀದನೆಂಬುವವನ ವಿರುದ್ಧ, ಕರ್ಬಲಾ ಮೈದಾನದಲ್ಲಿ ಲಡಾಯಿ ಮಾಡುತ್ತ ಜೀವಬಿಟ್ಟರು. ಇದರ ಶೋಕಾಚರಣೆಯ ಭಾಗವಾಗಿ ಮೊಹರಂ ಆಚರಣೆ ಶುರುವಾಯಿತು. ಕರ್ಬಲಾ ವೀರರ ಸಾವು ದಾರುಣ ಸಂಗತಿಯಾಗಲು ಕಾರಣ, ಅವರ ತಲೆಕಡಿದು ಮೆರವಣಿಗೆ ಮಾಡಲಾಯಿತು. ಜತೆಯಿದ್ದ ಎಳೆಗೂಸುಗಳು ಕುಡಿಯಲು ನೀರಿಲ್ಲದೆ ಪರಿತಪಿಸುತ್ತ ಸತ್ತರು. ಮಹಿಳೆಯರು ದುಃಖದಿಂದ ಪರಿತಪಿಸಿದರು. ಇದನ್ನು ಜನಪದರು “ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಆರಾಣ್ಯಾದಾಗ ಅವರಾ ಕಾಣದ ಮೂರು ದಿವಸ ನೀರಾ, ಕುಡದಾರೋ…

Read More

ಆಲಮೇಲ: ಸಮಾಜದ ಬಗ್ಗೆ ಕಾಳಜಿ ಸಮಾಜದಲ್ಲಿ ಉನ್ನತವಾಗಿ ಮತ್ತು ಬಡಕುಟುಂಬಕ್ಕೆ ಒಳ್ಳೆಯದನ್ನೆ ಮಾಡುತ್ತಾ ವಕೀಲ ವೃತ್ತಿಯನ್ನು ಸಾಮಾನ್ಯರಂತೆ ಮಾಡುತ್ತಿರುವ ಇವರಿಗೆ ಉಪಾಧ್ಯಕ್ಷರಾಗಿ ಆಯ್ಕೆ ಆಗಿದಕ್ಕೆ ಮತ್ತು ನಮ್ಮ ಭಾಗದ ಹೆಸರನ್ನು ಇಡಿ ದೇಶಕ್ಕೆ ಮುಟ್ಟಿಸಿದ್ದಕ್ಕೆ ತಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೆವೆ ಎಂದು ಆಲಮೇಲದ ವೈದ್ಯರು, ದೇವರಗುಡ್ಡ ಗುರುಪೀಠದ ಒಡೆಯರಾದ ಡಾ.ಸಂದಿಪ ಪಾಟೀಲ ಹೇಳಿದರು.ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಲಮೇಲ ತಾಲೂಕು ಘಟಕ ಮತ್ತು ಗೆಳೆಯರ ಬಳಗ ಹಾಗೂ ಅಳ್ಳೊಳ್ಳಿಮಠ ಸೇವಾ ಸಮಿತಿ ವತಿಯಿಂದ ಅಖಿಲ ಭಾರತೀಯ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ ಟ್ರಸ್ಟ್(ರಿ) ನಾಶಿಕ ಉಪಾಧ್ಯಕ್ಷರಾಗಿ ಆಯ್ಕೆಯಾದ ನ್ಯಾಯವಾದಿ ಅಶೋಕ ಗಾಯಕವಾಡ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಪ್ರೋ.ಶಾಂತು ಹಿರೇಮಠ ಮಾತನಾಡಿದರು.ಸಾನಿದ್ಯವನ್ನು ಶ್ರೀಶೈಲಯ್ಯ ಸ್ವಾಮೀಜಿ ಅಳ್ಳೋಳ್ಳಿಮಠ, ನಿತ್ಯಾನಂದ ಶಿವಯೋಗಿಗಳು ಆರೂಡಮಠ ರಾಂಪೂರ, ಮುಖ್ಯ ಅತಿಥಿಗಳಾಗಿ ಎನ್ ಜಿ ಅಪನಾಯಕ, ರಿಯಾಜ ಬಿಳವಾರ, ಶಿವಶರಣ ಗುಂದಗಿ, ರಮೇಶ ಕತ್ತಿ, ಸುರೇಶ ಹಳ್ಳೂರ, ಸಿದ್ದುಗೌಡ ಕೊಳಾರಿ, ಮಹಿಬೂಬ ಮಸಳಿ, ಅಶೋಕ…

Read More

ಆಲಮಟ್ಟಿ: ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿ ರೈತರನ್ನು ಅಧಿಕಾರಿಗಳು ಹಾಳು ಮಾಡುತ್ತಿದ್ದು ಕೂಡಲೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಗುರುವಾರ ಅಖಂಡ ಕರ್ನಾಟಕ ರೈತ ಸಂಘದ ಸದಸ್ಯರು ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಗೆ ಮನವಿ ಸಲ್ಲಿಸಿದರು.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ ‘ಕಾಲುವೆ ಕಾಮಗಾರಿ ನೆಪದಲ್ಲಿ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ತಪ್ಪು ಸಂದೇಶ ನೀಡಿ ರೈತರನ್ನು ಹಾಳು ಮಾಡುತ್ತಿದ್ದು ಕೂಡಲೆ ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.ಜಿಟಿ.ಜಿಟಿ ಮಳೆ ಆದ ಕಾರಣ ರೈತರಿಂದ ನೀರಿನ ಬೇಡಿಕೆ ಇಲ್ಲವೆಂದು ಕಾಲುವೆಗೆ ನೀರು ಹರಿಸುವುದನ್ನು ಸ್ಥಗಿತ ಗೊಳಸಿದ್ದಾರೆ. ಈ ಅಧಿಕಾರಿಗಳ ಧೋರಣೆ ಸಂಪೂರ್ಣ ರೈತ ವಿರೋಧಿ ಆಗಿದೆ ಈ ಸದ್ಯ ಮುಂಗಾರು ಬೆಳೆಗೆ ತುರ್ತಾಗಿ ನೀರು ಅಗತ್ಯವಿದೆ. ಮುಂಗಾರು ಹಂಗಾಮಿನ ಮಳೆ ಮೊದಲು ಸಕಾಲಕ್ಕೆ ಆಯಿತು ಖುಷಿಯಿಂದ ರೈತರು ಬಿತ್ತನೆ ಮಾಡಿದ್ದಾರೆ. ನಂತರದಲ್ಲಿ ಮಳೆ ಮಾಯವಾಗಿದೆ. ಈ ಆಷಾಢ ಮಾಸದ ಗಾಳಿ…

Read More

ಆಲಮಟ್ಟಿ: ಎರಡು ವರ್ಷದಿಂದ ನಿರ್ವಹಣೆಯಾಗದ ಕಾಲುವೆಗಳ ಜಾಲಕ್ಕೆ ನೀರು ಹರಿಸುವ ಅವಧಿಯಲ್ಲಿಯೇ ಕ್ಲೋಸರ್ ಹಾಗೂ ವಿಶೇಷ ಕಾಮಗಾರಿ ನಿರ್ವಹಿಸಲು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ, ಕೆ.ಪಿ. ಮೋಹನರಾಜ ಸೂಚಿಸಿದ್ದಾರೆ. ಯಾವುದೇ ಹೊಸ ಕಾಮಗಾರಿಗೆ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕ್ಲೋಜರ್ ಅವಧಿ ಮತ್ತು ವಿಶೇಷ ದುರಸ್ಥಿ ಹಾಗೂ ವಾರ್ಷಿಕ ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಿಲ್ಲ.೦೨೩-೨೪ನೇ ಸಾಲಿನ ಕ್ಲೋಜರ್ ಅವಧಿ & ವಿಶೇಷ ದುರಸ್ಥಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೇ ಇರುವುದರಿಂದ ಕಾಲುವೆಯಲ್ಲಿ ಹೂಳು ತುಂಬಿದ್ದು, ಜಂಗಲ್ ಹೆಚ್ಚಾಗಿ ಬೆಳೆದಿರುವುದರಿಂದ ಮುಂಗಾರು/ಹಿಂಗಾರು ಸಮಯದಲ್ಲಿ ಕಾಲುವೆಯಲ್ಲಿ ನೀರು ಹರಿಸಿದಾಗ ನೀರು ಸರಾಗವಾಗಿ ಹರಿಯುವುದಿಲ್ಲ, ಆಗುವ ಸಂಭವ ಇರುತ್ತದೆ. ನೀರಾವರಿ ಸಲಹಾ ಸಮಿತಿ ನಿರ್ದೇಶನದಂತೆ ನಿಗಧಿತ ಅವಧಿಯಲ್ಲಿ ಸಮರ್ಪಕವಾಗಿ ಕಾಲುವೆಯಲ್ಲಿ ನೀರನ್ನು ಹರಿಸಲು ಅನುವಾಗುವಂತೆ ೨೦೨೪-೨೫ನೇ ಸಾಲಿಗೆ ಕ್ಲೋಜರ್ ಅವಧಿ ಮತ್ತು ವಿಶೇಷ ದುರಸ್ಥಿ ಕಾಮಗಾರಿಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದು ಅತೀ ಅವಶ್ಯವಾಗಿರುತ್ತದೆ ಎಂದು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ. ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಡಿಯಲ್ಲಿ ಬರುವ ನಾರಾಯಣಪೂರ ,ರಾಂಪೂರ, ಭೀಮರಾಯನಗುಡಿ, ಆಲಮಟ್ಟಿ…

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ಹೂಗಾರ ಸಮಾಜ ಬಾಂಧವರು ತಮ್ಮ ಸಮಾಜದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಗುರುವಾರ ಸಲ್ಲಿಸಿದರು.ಅವರು ಸಲ್ಲಿಸಿದ ಮನವಿಯಲ್ಲಿ ರಾಜ್ಯದಲ್ಲಿ ವಿವಿಧ ಉಪನಾಮಗಳಿಂದ ಕರೆಯಲ್ಪಡುವ ಹೂಗಾರ, ಜೀರ, ಪೂಜಾರ, ಪೂಲಾರಿ, ಮಾಲಿ, ಮಾಲಗಾರ, ಗರವ್, ಹೂವಾಡಿಗ, ಪುಷ್ಪದತ್ತ, ತಾಂಬೋಳಿ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ಸಮಾಜದ ಅಭಿವೃದ್ಧಿಗೆ ಕಳೆದ ೪೦ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಯಾವುದೇ ಸರ್ಕಾರ ಸಮಾಜದ ಹೋರಾಟಕ್ಕೆ ಸ್ಪಂದಿಸಿರಲಿಲ್ಲ. ೧೫.೦೭.೨೦೨೨ ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಾವಿರಾರು ಹೂಗಾರ ಸಮಾಜ ಬಾಂಧವರು ಬೃಹತ್ ಪ್ರತಿಭಟನೆ ಮಾಡಿದಾಗ ೨೧.೦೭.೨೦೨೩ ರಂದು ಸರ್ಕಾರವು ಅಧಿಕೃತವಾಗಿ ಕರ್ನಾಟಕ ಮಾಲಿ, ಮಾಲಗಾರ ಮತ್ತು ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿತ್ತು. ಆದರೆ ಕಳೆದ ಬಜೆಟ್ನಲ್ಲಿ ಈ ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನ ಮೀಸಲಿಟ್ಟಿರುವುದಿಲ್ಲ. ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಹೂಗಾರ ಸಮಾಜದ ಅಭಿವೃದ್ಧಿ ನಿಗಮಕ್ಕೆ ರೂ.೧೦೦ ಕೋಟಿ ಅನುದಾನ ಮೀಸಲಿಟ್ಟು ಹೂಗಾರ ಸಮಾಜದ…

Read More