ಆಲಮಟ್ಟಿ: ಎರಡು ವರ್ಷದಿಂದ ನಿರ್ವಹಣೆಯಾಗದ ಕಾಲುವೆಗಳ
ಜಾಲಕ್ಕೆ ನೀರು ಹರಿಸುವ ಅವಧಿಯಲ್ಲಿಯೇ ಕ್ಲೋಸರ್ ಹಾಗೂ ವಿಶೇಷ ಕಾಮಗಾರಿ ನಿರ್ವಹಿಸಲು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕ, ಕೆ.ಪಿ. ಮೋಹನರಾಜ ಸೂಚಿಸಿದ್ದಾರೆ.
ಯಾವುದೇ ಹೊಸ ಕಾಮಗಾರಿಗೆ ಅನುಮೋದನೆ ನೀಡದ ಹಿನ್ನೆಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಕ್ಲೋಜರ್ ಅವಧಿ ಮತ್ತು ವಿಶೇಷ ದುರಸ್ಥಿ ಹಾಗೂ ವಾರ್ಷಿಕ ನಿರ್ವಹಣೆ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವುದಿಲ್ಲ.
೦೨೩-೨೪ನೇ ಸಾಲಿನ ಕ್ಲೋಜರ್ ಅವಧಿ & ವಿಶೇಷ ದುರಸ್ಥಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೇ ಇರುವುದರಿಂದ ಕಾಲುವೆಯಲ್ಲಿ ಹೂಳು ತುಂಬಿದ್ದು, ಜಂಗಲ್ ಹೆಚ್ಚಾಗಿ ಬೆಳೆದಿರುವುದರಿಂದ ಮುಂಗಾರು/ಹಿಂಗಾರು ಸಮಯದಲ್ಲಿ ಕಾಲುವೆಯಲ್ಲಿ ನೀರು ಹರಿಸಿದಾಗ ನೀರು ಸರಾಗವಾಗಿ ಹರಿಯುವುದಿಲ್ಲ, ಆಗುವ ಸಂಭವ ಇರುತ್ತದೆ. ನೀರಾವರಿ ಸಲಹಾ ಸಮಿತಿ ನಿರ್ದೇಶನದಂತೆ ನಿಗಧಿತ ಅವಧಿಯಲ್ಲಿ ಸಮರ್ಪಕವಾಗಿ ಕಾಲುವೆಯಲ್ಲಿ ನೀರನ್ನು ಹರಿಸಲು ಅನುವಾಗುವಂತೆ ೨೦೨೪-೨೫ನೇ ಸಾಲಿಗೆ ಕ್ಲೋಜರ್ ಅವಧಿ ಮತ್ತು ವಿಶೇಷ ದುರಸ್ಥಿ ಕಾಮಗಾರಿಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವುದು ಅತೀ ಅವಶ್ಯವಾಗಿರುತ್ತದೆ ಎಂದು ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆ.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯಾಪ್ತಿಯಡಿಯಲ್ಲಿ ಬರುವ ನಾರಾಯಣಪೂರ ,ರಾಂಪೂರ, ಭೀಮರಾಯನಗುಡಿ, ಆಲಮಟ್ಟಿ ಈ ವಲಯಗಳ ವ್ಯಾಪ್ತಿಯ ೨೦೨೪-೨೫ನೇ ಸಾಲಿನ ಕ್ಲೋಜರ್ ಅವಧಿಗೆ ಕಾಮಗಾರಿಗಳನ್ನು ನಿರ್ವಹಿಸಲು ರೂ.೨೫.೧೮ ಕೋಟಿ ಮತ್ತು ವಿಶೇಷ ದುರಸ್ಥಿ ರೂ.೨೫.೭೯ ಕೋಟಿಗಳನ್ನು ಕಾಮಗಾರಿಗಳಿಗಾಗಿ ಅನುದಾನ ನೀಡಲಾಗಿದೆ.
ಬುಧವಾರದಿಂದ ಕಾಲುವೆಗಳ ಜಾಲಕ್ಕೆ ನೀರು ಹರಿಸಲಾಗುತ್ತಿದೆ.
ಕಾಲುವೆಯಲ್ಲಿ ನೀರು ಹರಿಸಿದಾಗ ಕಾಲುವೆಗಳಲ್ಲಿನ ಹೂಳು ತೆಗೆಯಲು ಮತ್ತು ಜಂಗಲ್ ಕಟಾವ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕಾಲುವೆಯಲ್ಲಿನ ಒಳಭಾಗ ಬಿಟ್ಟು ಉಳಿದ ಕಾಲುವೆಯ ಸರ್ವಿಸ್ ರಸ್ತೆಯ ಮೇಲಿನ ಜಂಗಲ್ ತೆರವುಗೊಳಿಸಬೇಕು ಮತ್ತು ಬಾಕಿ ಉಳಿದ ಕಾಲುವೆಯಲ್ಲಿನ ಒಳಭಾಗದ ನಿರ್ವಹಣೆಯನ್ನು ಪ್ರಸಕ್ತ ಸಾಲಿನ ಮುಂಗಾರಿಗೆ ನೀರು ಪೂರೈಸುವ ಅವಧಿ ಮುಗಿದ ನಂತರ ಕೈಗೆತ್ತಿಕೊಳ್ಳುವಂತೆ ಎಂ.ಡಿ. ಮೋಹನರಾಜ್ ಸೂಚಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕಾಲುವೆಗಳ ಕ್ಲೋಸರ್ ಕಾಮಗಾರಿ ನಿರ್ವಹಿಸಲು ಎಂ.ಡಿ ಮೋಹನರಾಜಸೂಚನೆ
Related Posts
Add A Comment

