Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಮುಧೋಳದಲ್ಲಿ ಜುಲೈ ೨೧ ರಂದು ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಕಮತಗಿ ಇವರ ವತಿಯಿಂದ ಜರುಗಿದ “ಕವಿ ಚಕ್ರವರ್ತಿ ರನ್ನ ಸಾಹಿತ್ಯ ಸಂಭ್ರಮ” ಕಾರ್ಯಕ್ರಮದಲ್ಲಿ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಪ್ರೊ. ಸಿದ್ದು ಸಾವಳಸಂಗ ಇವರಿಗೆ “ಕವಿಚಕ್ರವರ್ತಿ ರನ್ನ ಪ್ರಶಸ್ತಿ” ಯನ್ನು ಪ್ರದಾನ ಮಾಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ ಹಾಗೂ ಇತರ ಸಾಹಿತಿಗಳು ಉಪಸ್ಥಿತರಿದ್ದರು.
ಇಂಡಿ: ಸಾರ್ವಜನಿಕವಾಗಿ ದುಷ್ಟರನ್ನು, ಗುಂಡಾಗಳನ್ನು ಪೋಷಿಸುತ್ತಿರುವ ಹೊರ್ತಿ ಠಾಣಾ ಪಿ ಎಸ್ ಐ ಅವರನ್ನು ಅಮಾನತಿಗೆ ಆಗ್ರಹಿಸಿ ರೈತ ಮುಖಂಡ ಅಣ್ಣಪ್ಪ ಖೈನೂರ ಅವರ ನೇತೃತ್ವದಲ್ಲಿ ನೂರಾರು ಜನರು ಸೇರಿ ಪೋಲೀಸ್ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಪೋಲಿಸ್ ಠಾಣೆ ನೊಂದವರ, ಬೆಂದವರ ನ್ಯಾಯ ಒದಗಿಸುವ ದೇವಾಲಯ ಆಗಬೇಕಾಗಿತ್ತು. ಆದರೆ ಠಾಣಾ ಪಿಎಸ್ಐ ಹಣದ ದಾಹದಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಸುಮಾರು 22 ಹಳ್ಳಿಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದು, ಈ ಬಾಗದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಅಣ್ಣಪ್ಪ ಖೈನೂರ ಆರೋಪಿಸಿ ಮಾತನಾಡಿದರು.ಪ್ರತಿ ಹಳ್ಳಿ, ಗ್ರಾಮದಲ್ಲಿ ಗುಂಡಾಗಳನ್ನು ತಯಾರಿಸುವುದು, ಕಿರಾಣಿ ಅಂಗಡಿ ಹಾಗೂ ಪಾನಶಾಪ್ ಗಳಲ್ಲಿ ಮದ್ಯ ಮಾರುವುದು, ಹಾಗೆ ಒಸಿ, ಮಟಕಾ ಇಸ್ಪೆಟ್ ಅಡ್ಡೆಗಳಂತಹ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿ ದುಷ್ಟರ ಜೊತೆಯಲ್ಲಿ ಕೈ ಗೂಡಿಸುವ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಅದರಂತೆ ಚಡಚಣ ಗ್ರಾಮದಂತೆ, ಹೊರ್ತಿ ಗ್ರಾಮದಲ್ಲಿಯೂ…
ಬಸವನಬಾಗೇವಾಡಿ: ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ 12ನೇ ಶತಮಾನದ ಕಾಯಕಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಭಾನುವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಶಿವಾನಂದ ಮಂಗಾನವರ, ಹಡಪದ ಅಪ್ಪಣ್ಣನವರು 12ನೇ ಶತಮಾನದ ಕಾಯಕ ಶರಣದಲ್ಲಿ ಪ್ರಮುಖರಾದವರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಲ್ಯಾಣದಲ್ಲಿ ನಡೆದ ಅನುಭವ ಮಂಟಪದಲ್ಲಿ ಸಮಾಜದಲ್ಲಿರುವ ಓರೆ ಕೋರೆಗಳನ್ನು ತಿದ್ದಲು ತಮ್ಮ ಹರಿತವಾದ ಲೆಕ್ಕಣಿಕೆಯಿಂದ 250 ಸರಳವಾದ ವಚನಗಳನ್ನು ಬರೆದಿದ್ದಾರೆ. ಅವರು ಬರೆದಂತೆ ನಡೆದುಕೊಂಡವರು. ಇವರ ಸಂದೇಶ ಅರಿತುಕೊಂಡು ಮುನ್ನಡೆಯಬೇಕೆಂದರು.ಈ ಸಂದರ್ಭದಲ್ಲಿ ಶರಣು ಮಾತಾಳಿ, ಮಲ್ಲಿಕಾರ್ಜುನ ಹಡಪದ,ಶಿವು ಮಂಗಾನವರ, ಶಿವಲಿಂಗಪ್ಪ ಬಾಲಪ್ಪಗೋಳ, ಶರಣಯ್ಯ ಹಿರೇಮಠ, ಗ್ರಾಮಸ್ಥರು ಇದ್ದರು.
ಬಸವನಬಾಗೇವಾಡಿ: ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಮೀಸಲಾತಿ ಮಸೂದೆಯನ್ನು ಹಿಂದೆ ಪಡೆದಿರುವುದು ರಾಜ್ಯ ಸರ್ಕಾರದ ದೌರ್ಬಲ್ಯದ ಸಂಕೇತವಾಗಿದೆ. ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡುವ ರಾಜ್ಯ ಸರ್ಕಾರ ಪಟ್ಟ ಭದ್ರತಾ ಶಕ್ತಿಗಳ ಒತ್ತಡದಿಂದಾಗಿ ತಾತ್ಕಾಲಿಕವಾಗಿ ಹಿಂದೆ ಪಡೆದಿರುವುದಾಗಿ ಹೇಳಿರುವುದು ದುರಂತದ ಸಂಗತಿ ಆಗಿದೆ. ಬೆಂಗಳೂರಿನಲ್ಲಿ ಈಗಾಗಲೇ ಅನ್ಯ ರಾಜ್ಯದ ಜನ ಹೆಚ್ಚಾಗತೊಡಗಿದ್ದರಿಂದ ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದಾರೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಸರೋಜಿನಿ ವರದಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಲೋಚಿಸಬೇಕು. ಮಾತೆತ್ತಿದರೆ ನುಡಿದಂತೆ ನಡೆಯುತ್ತೇವೆ ಎಂದು ಹೇಳುವ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಕನ್ನಡಿಗರಿಗೆ ನ್ಯಾಯ ಒದಗಿಸಬೇಕು. ಕನ್ನಡ ಅಶ್ಮಿತೆ ಬಗ್ಗೆ ಮಾತನಾಡುವ ಎಲ್ಲಾ ಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಕನ್ನಡಿಗರಿಗೆ ನ್ಯಾಯ ಸಿಗುವಂತಾಗಲು ಒತ್ತಾಯಿಸಬೇಕೆಂದು ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವನಬಾಗೇವಾಡಿ: ಹಡಪದ ಅಪ್ಪಣ್ಣ ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಮಾನವ ಜನಾಂಗಕ್ಕೆ ಸಂದೇಶ ನೀಡಿದ್ದಾರೆ. ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶವನ್ನು ನಮ್ಮ ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರುಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವ ಸೈನ್ಯದಿಂದ ಭಾನುವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ 890ನೇ ಜಯಂತೋತ್ಸವದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶರಣ ಹಡಪದ ಅಪ್ಪಣ್ಣನವರು ಜಾತಿ, ಧರ್ಮ, ವರ್ಣರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.ಶರಣರ ಕಾಯಕ, ಬದುಕು ಯುವ ಪೀಳಿಗೆಗೆ ದಾರಿ ದೀಪವಾಗಬೇಕು. ಶರಣರು ಮಾಡಿದ ಹೋರಾಟದ ಉದ್ದೇಶದ ಬಗ್ಗೆ ತಿಳಿದುಕೊಳ್ಳಬೇಕಿದೆ.ಅದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಅವರ ವಚನವನ್ನು ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಇವೆಲ್ಲವೂ ಸಾಧ್ಯ ಎಂದರು.ಇಂದಿನ ದಿನಗಳಲ್ಲಿ ಹೆಜ್ಜೆ ಹೆಜ್ಜೆಗೂ ಮೋಸ ವಂಚನೆ ನಡೆಯುತ್ತಿವೆ. 12ನೇ ಶತಮಾನದಲ್ಲಿ ಶರಣರಿಗೂ ಕೂಡಾ ಮೋಸವಾಗಿತ್ತು. ಈಗಲೂ ಸಮಾಜದಲ್ಲಿ ಅನ್ಯಾಯಗಳು…
ಬಸವನಬಾಗೇವಾಡಿ: ಪಟ್ಟಣದ ಹಿರೇಮಠದಲ್ಲಿ ಭಾನುವಾರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ಪಾಟೀಲ, ನೂತನ ನಿರ್ದೇಶಕರಾಗಿ ಆಯ್ಕೆಯಾದ ರವಿ ರಾಠೋಡ, ಬಸವೇಶ್ವರ ಜಾತ್ರಾಮಹೋತ್ಸವದ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಗುರಲಿಂಗಪ್ಪ(ಮುದುಕು) ಬಸರಕೋಡ, ಉಪಾಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಅಳ್ಳಗಿ ಅವರನ್ನು ಶ್ರೀಮಠದಿಂದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಭಾನುವಾರ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಬಸವರಾಜ ಶೆಂಡೆ, ಸಂಕನಗೌಡ ಪಾಟೀಲ, ವಿಶ್ವ ಹಿಂದು ಪರಿಷತ್ತಿನ ಕಾರ್ಯಕರ್ತರು ಇತರರು ಇದ್ದರು.
ಬಸವನಬಾಗೇವಾಡಿ: ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ಭಾನುವಾರ ತಾಲೂಕಾಡಳಿತದಿಂದ ಶರಣ ಹಡಪದ ಅಪ್ಪಣ್ಣ ಜಯಂತಿಯಂಗವಾಗಿ ಶರಣ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಹಡಪದ ಅಪ್ಪಣ್ಣ ಜಯಂತಿ ಆಚರಿಸಲಾಯಿತು.ಗ್ರೇಡ್-೨ ತಹಸೀಲ್ದಾರ ಜೆ.ಎಸ್.ನಾಯಕ ಅವರು ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಮಾತನಾಡಿ, ೧೨ ನೇ ಶತಮಾನದ ಬಸವಾದಿ ಶರಣರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರಾಗಿದ್ದಾರೆ. ಇವರು ಬಸವನಾಡಿನ ಮಸಬಿನಾಳ ಗ್ರಾಮದಲ್ಲಿ ಜನಿಸಿರುವದು ನಮ್ಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಹಡಪದ ಅಪ್ಪಣ್ಣನವರು ಬಸವೇಶ್ವರರ ಆಪ್ತಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ನಾವೆಲ್ಲರೂ ಬಸವಾದಿ ಶರಣರ ಸಂದೇಶಗಳನ್ನು ಅರಿತುಕೊಂಡು ಅದರಂತೆ ನಡೆಯುವಂತಾಗಬೇಕೆಂದರು.ಜಯಂತಿ ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಎಸ್.ಅವಟಿ, ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಮಂಜು ಹಳ್ಳೂರ, ರಾಮಚಂದ್ರ ಘಾಟಗೆ, ಹಡಪದ ಸಮಾಜ ಬಾಂಧವರಾದ ಗುರುಲಿಂಗಪ್ಪ ಹಡಪದ,ಅಶೋಕ ಬಾಗೇವಾಡಿ, ಸುಭಾಸ ಹಡಪದ, ಮುತ್ತಪ್ಪ ಇವಣಗಿ, ಮಲ್ಲು ಇವಣಗಿ, ಪ್ರಲ್ಹಾದ ಹಡಪದ, ಶಿವಾನಂದ ಹಡಪದ, ಚನ್ನು ಹಡಪದ,…
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಡ್ಲಿಗಾರ ಹುಣ್ಣಿಮೆಯಂಗವಾಗಿ ಭಾನುವಾರ ಮಹಿಳೆಯರು ತಮ್ಮ ಹತ್ತಿರವಿರುವ ಭಾವಿ, ಬೋರವೆಲ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಗಂಗಾಮಾತೆಗೆ ನಮನ ಸಲ್ಲಿಸಿದರು. ಪಟ್ಟಣದ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಬಸವತೀರ್ಥ ಬಾವಿಗೆ ಆಗಾಗ್ಗೆ ಬರುತ್ತಿದ್ದ ಜಿಟಿ ಜಿಟಿ ಮಳೆಯಲ್ಲಿಯೇ ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ತೆರಳಿ ಬಾವಿಗೆ ಪೂಜೆ ಸಲ್ಲಿಸಿ ಮುತ್ತೈದೆಯರಿಗೆ ಉಡಿ ತುಂಬಿದರು. ಕೆಲವರು ಬೋರವೆಲ್ಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಡ್ಲಿಗಾರ ಹುಣ್ಣಿಮೆ ಆಚರಿಸಿದರು.ಮಣ್ಣೆತ್ತಿನ ಅಮವಾಸ್ಯೆಯ ನಂತರ ಬರುವ ಕಡ್ಲಿಗಾರ ಹುಣ್ಣಿಮೆಯಂದು ಉತ್ತರ ಕರ್ನಾಟಕದ ಜನರು ಗಂಗಾಮಾತೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಈ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತ ಬಾಂಧವರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ನಿನ್ನೆಯಿಂದ ಆಗಾಗ್ಗೆ ಜಿಟಿ ಜಿಟಿ ಮಳೆ ಬರುವ ಮೂಲಕ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ. ಬಿತ್ತನೆ ಮಾಡಿದ ಬೆಳೆಗೆ ಉತ್ತಮ ಮಳೆಯಾಗಬೇಕಿದೆ. ಮಹಿಳೆಯರು ಉತ್ತಮ ಮಳೆ-ಬೆಳೆ ಬರಲಿ, ಎಲ್ಲರೂ ಸುಖ-ಶಾಂತಿಯಿಂದ ಇರಲೆಂದು ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಇಂದು ಗುರುಪೂರ್ಣಿಮೆಯೆಂದು ಆಚರಣೆ…
ವಿಜಯಪುರ: ಗುಮ್ಮಟ ನಗರಿ ವಿಜಯಪುರದ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ಉಪ ಸಂಪಾದಕ ಚಲನಚಿತ್ರ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಕರುನಾಡು ಕಿರುಚಿತ್ರೋತ್ಸವದಲ್ಲಿ “ಬೆಸ್ಟ್ ಆಕ್ಟರ್” ಅವಾರ್ಡ್ ದೊರೆತಿದೆ.ಜು.21ರಂದು ಕೊಪ್ಪಳದ ಜೆ.ಕೆ.ಎಸ್ ಹೊಟೇಲ್ ನಲ್ಲಿ ಕವಿತಾ ಮೀಡಿಯಾ ಸೋರ್ಸ ಪ್ರೈ.ಲಿ ಹೈಬ್ರೀಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಆಯೋಜಿಸಿದ “ಕರುನಾಡ ಕಿರುಚಿತ್ರೋತ್ಸವ” ದಲ್ಲಿ ವಿಶ್ವಪ್ರಕಾಶ ಟಿ ಮಲಗೊಂಡ ಅವರ ಸಿನಿಮಾ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಕರುನಾಡ ಕಿರುಚಿತ್ರೋತ್ಸವದಲ್ಲಿ “ಸಿನಿ ಸಿರಿ” ಅವಾರ್ಡ್ ಪ್ರಶಸ್ತಿ ನೀಡಿ ಗೌರವಿಸಿದೆ.ಕರುನಾಡ ಕಿರುಚಿತ್ರೋತ್ಸವ (Short Film Festival) ಸ್ಪರ್ಧೆಯಲ್ಲಿ “ತುಷಾರ್” ಚಿತ್ರವೂ ಸಹ ಭಾಗವಹಿಸಿತ್ತು. ಚಿತ್ರದಲ್ಲಿನ ನಾಯಕನ ಅಭಿನಯಕ್ಕೆ “ಬೆಸ್ಟ್ ಆಕ್ಟರ್ ಅವಾರ್ಡ್” ನೀಡಿ ಗೌರವಿಸಿದೆ.ಕಿರುಚಿತ್ರೋತ್ಸವದಲ್ಲಿ ರಾಜ್ಯದ ಹಲವು ಕಿರುಚಿತ್ರಗಳು ಭಾಗವಹಿಸಿದ್ದವು. ಬೆಸ್ಟ್ ಶಾರ್ಟ ಫಿಲಂ, ಬೆಸ್ಟ್ ಸ್ಟೋರಿ, ಹೀಗೆ ಒಟ್ಟು ಹತ್ತು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ.ಅದರಲ್ಲಿ “2024 ಅತ್ಯುತ್ತಮ ನಟ ಬೆಸ್ಟ್ ಆಕ್ಟರ್” ಎಂದು ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಅವಾರ್ಡ್ ನೀಡಲಾಗಿದೆ.ಕಿರುಚಿತ್ರೋತ್ಸವದಲ್ಲಿ ಹಿರಿಯ…
ಯಾದಗಿರಿ: ಯಾದಗಿರಿ ತಾಲೂಕಿನ ಮುದ್ನಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸಣ್ಣ ತಾಂಡಾದ ರೈತ ರಾಮು ರಾಥೋಡ್ ಜಮೀನಿನಲ್ಲಿ ಕಟ್ಟಿಕೊಂಡಿರುವ ಮನೆಯನ್ನ ಅಧಿಕಾರಿಗಳು ಒತ್ತುವರಿ ಆರೋಪದ ಮೇಲೆ ದ್ವಂಸ ಮಾಡಿದ್ದಾರೆ.ಸುರಿಯುತ್ತಿರುವ ಮಳೆಯಲ್ಲಿ ರೈತನಿಗೆ ಸಮಯಾವಕಾಶ ನೀಡದೇ ಅಧಿಕಾರಿಗಳು ಮನೆ ದ್ವಂಸ ಮಾಡಿದ್ದು ಖಂಡನೀಯ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.ಇದೇ ಮುದ್ನಾಳ ಗ್ರಾಮದ ಗ್ರಾಮ ಪಂಚಾಯತ್ ಉಪಾಧ್ಯಕ್ಷನೊಬ್ಬ ಸರ್ಕಾರಿ ಜಾಗೆಯಲ್ಲಿ ಬೃಹತ್ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ನಿರ್ಮಾಣ ಹಂತದಲ್ಲಿರುವಾಗಲೇ ಸಾಮಾಜಿಕ ಹೋರಾಟಗಾರ ದೂರು ನೀಡಿದ್ರು ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಗ್ರಾಮ ಪಂಚಾಯತ್ ಉಪಾಧ್ಯಕ್ಷನಿಗೆ ಶಾಮೀಲು ಆಗಿ ಉಪಾಧ್ಯಕ್ಷ ಯಾವುದೇ ನೋಟಿಸ್ ನೀಡದೇ ಗ್ರಾಮ ಪಂಚಾಯತ್ ಪಿಡಿಓ, ತಾಲೂಕು ಪಂಚಾಯತ್ ಇಒ ಬಸವರಾಜ ಶೆರಬೈ ಮನೆ ಕಟ್ಟಡ ಮುಗಿಯುವರೆಗೂ ಬೆಂಗಾವಲಾಗಿ ನಿಂತಿದ್ರು. ಆದರೇ ಸುಮಾರು ಹತ್ತು ವರ್ಷಗಳ ಹಿಂದೆ ಬಡ ರೈತ ನಿರ್ಮಿಸಿಕೊಂಡಿರುವ ಮನೆ ದ್ವಂಸ ಮಾಡಿರೋದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ.ಈ ಸಂದರ್ಭದಲ್ಲಿ ಚಂದ್ರು, ರಾಮು, ರಾಜು, ಶಂಕರ, ಜಯರಾಮ್,…
