ಇಂಡಿ: ಸಾರ್ವಜನಿಕವಾಗಿ ದುಷ್ಟರನ್ನು, ಗುಂಡಾಗಳನ್ನು ಪೋಷಿಸುತ್ತಿರುವ ಹೊರ್ತಿ ಠಾಣಾ ಪಿ ಎಸ್ ಐ ಅವರನ್ನು ಅಮಾನತಿಗೆ ಆಗ್ರಹಿಸಿ ರೈತ ಮುಖಂಡ ಅಣ್ಣಪ್ಪ ಖೈನೂರ ಅವರ ನೇತೃತ್ವದಲ್ಲಿ ನೂರಾರು ಜನರು ಸೇರಿ ಪೋಲೀಸ್ ಠಾಣೆಯ ಆವರಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಪೋಲಿಸ್ ಠಾಣೆ ನೊಂದವರ, ಬೆಂದವರ ನ್ಯಾಯ ಒದಗಿಸುವ ದೇವಾಲಯ ಆಗಬೇಕಾಗಿತ್ತು. ಆದರೆ ಠಾಣಾ ಪಿಎಸ್ಐ ಹಣದ ದಾಹದಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಸುಮಾರು 22 ಹಳ್ಳಿಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿದ್ದು, ಈ ಬಾಗದಲ್ಲಿ ಕೆಟ್ಟ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರೈತ ಮುಖಂಡ ಅಣ್ಣಪ್ಪ ಖೈನೂರ ಆರೋಪಿಸಿ ಮಾತನಾಡಿದರು.
ಪ್ರತಿ ಹಳ್ಳಿ, ಗ್ರಾಮದಲ್ಲಿ ಗುಂಡಾಗಳನ್ನು ತಯಾರಿಸುವುದು, ಕಿರಾಣಿ ಅಂಗಡಿ ಹಾಗೂ ಪಾನಶಾಪ್ ಗಳಲ್ಲಿ ಮದ್ಯ ಮಾರುವುದು, ಹಾಗೆ ಒಸಿ, ಮಟಕಾ ಇಸ್ಪೆಟ್ ಅಡ್ಡೆಗಳಂತಹ ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿ ದುಷ್ಟರ ಜೊತೆಯಲ್ಲಿ ಕೈ ಗೂಡಿಸುವ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಅದರಂತೆ ಚಡಚಣ ಗ್ರಾಮದಂತೆ, ಹೊರ್ತಿ ಗ್ರಾಮದಲ್ಲಿಯೂ ಕೆಟ್ಟ ವಾತಾವರಣ ಸೃಷ್ಟಿಸುವ, ಗ್ರಾಮದ ಹೆಸರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ನಿಂಗಪ್ಪ ಸಿದರಾಯ ದೇಗಿನಾಳ ಎಂಬ ವ್ಯಕ್ತಿ, ಮುಗ್ದರ ಮೇಲೆ ಹಲ್ಲೆ ಮಾಡಿದವನು, ಅಂತಹ ವ್ಯಕ್ತಿಯ ರಕ್ಷಣೆ ನೀಡುವುದು, ಅವನ ಜೊತೆಯಲ್ಲಿ ಸೇರಿ ಕೆಟ್ಟ ಕೆಲಸದಲ್ಲಿ ಪಿಎಸ್ಐ ಪಾಲ್ಗೊಳ್ಳುತ್ತಿದ್ದಾರೆ. ಆ ನಿಂಗಪ್ಪ ದೇಗಿನಾಳರನ್ನು ಗುಂಡಾಕಾಯ್ದೆಯಡಿ ಬಂದಿಸಿ ರೌಡಿ ಶೀಟರ್ ಪ್ರಕರಣ ದಾಖಲಿಸಬೇಕು. ಹಾಗೆ ಪಿಎಸ್ಐ ಅಮಾನತು ಮಾಡಲು ಆಗ್ರಹಿಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ರಮಾಕಾಂತ ಬಿರಾದಾರ, ಎಸ್ ಎಸ್ ಶೀವೂರ, ಗಂಗಾರಾಮ ಸಿದ್ದಪ್ಪ ಭೊಸಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಹೊರ್ತಿ ಠಾಣೆ ಪಿಎಸೈ ಅಮಾನತಿಗೆ ಆಗ್ರಹಿಸಿ ಸಾರ್ವಜನಿಕರ ಪ್ರತಿಭಟನೆ
Related Posts
Add A Comment

