ಯಾದಗಿರಿ: ಯಾದಗಿರಿ ತಾಲೂಕಿನ ಮುದ್ನಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸಣ್ಣ ತಾಂಡಾದ ರೈತ ರಾಮು ರಾಥೋಡ್ ಜಮೀನಿನಲ್ಲಿ ಕಟ್ಟಿಕೊಂಡಿರುವ ಮನೆಯನ್ನ ಅಧಿಕಾರಿಗಳು ಒತ್ತುವರಿ ಆರೋಪದ ಮೇಲೆ ದ್ವಂಸ ಮಾಡಿದ್ದಾರೆ.
ಸುರಿಯುತ್ತಿರುವ ಮಳೆಯಲ್ಲಿ ರೈತನಿಗೆ ಸಮಯಾವಕಾಶ ನೀಡದೇ ಅಧಿಕಾರಿಗಳು ಮನೆ ದ್ವಂಸ ಮಾಡಿದ್ದು ಖಂಡನೀಯ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.
ಇದೇ ಮುದ್ನಾಳ ಗ್ರಾಮದ ಗ್ರಾಮ ಪಂಚಾಯತ್ ಉಪಾಧ್ಯಕ್ಷನೊಬ್ಬ ಸರ್ಕಾರಿ ಜಾಗೆಯಲ್ಲಿ ಬೃಹತ್ ಮನೆ ನಿರ್ಮಿಸಿಕೊಂಡಿದ್ದಾರೆ. ಮನೆ ನಿರ್ಮಾಣ ಹಂತದಲ್ಲಿರುವಾಗಲೇ ಸಾಮಾಜಿಕ ಹೋರಾಟಗಾರ ದೂರು ನೀಡಿದ್ರು ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಗ್ರಾಮ ಪಂಚಾಯತ್ ಉಪಾಧ್ಯಕ್ಷನಿಗೆ ಶಾಮೀಲು ಆಗಿ ಉಪಾಧ್ಯಕ್ಷ ಯಾವುದೇ ನೋಟಿಸ್ ನೀಡದೇ ಗ್ರಾಮ ಪಂಚಾಯತ್ ಪಿಡಿಓ, ತಾಲೂಕು ಪಂಚಾಯತ್ ಇಒ ಬಸವರಾಜ ಶೆರಬೈ ಮನೆ ಕಟ್ಟಡ ಮುಗಿಯುವರೆಗೂ ಬೆಂಗಾವಲಾಗಿ ನಿಂತಿದ್ರು. ಆದರೇ ಸುಮಾರು ಹತ್ತು ವರ್ಷಗಳ ಹಿಂದೆ ಬಡ ರೈತ ನಿರ್ಮಿಸಿಕೊಂಡಿರುವ ಮನೆ ದ್ವಂಸ ಮಾಡಿರೋದು ಎಷ್ಟು ಸರಿ ಅಂತ ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಚಂದ್ರು, ರಾಮು, ರಾಜು, ಶಂಕರ, ಜಯರಾಮ್, ಅಶೋಕ, ಗೋವಿಂದ, ಮೋಹನ್, ಕಿಶನ್, ಕಮಲಿಬಾಯಿ, ಸಖಿಬಾಯಿ, ಜ್ಯೋತಿಬಾಯಿ, ಅಂಜುಬಾಯಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
” ಈ ನೆಲದ ಕಾನೂನು ಎಲ್ಲರಿಗೂ ಒಂದೆ ಇದೆ. ಉಳ್ಳವರಿಗೊಂದು, ಬಡವರಿಗೊಂದು ನ್ಯಾಯ ಅಂತಿಲ್ಲಾ. ಮನೆ ದ್ವಂಸಗೊಳಿಸುವುದಾದರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷನ ಮನೆಯನ್ನೂ ದ್ವಂಸ ಮಾಡಿ, ಇಲ್ಲದಿದ್ದರೆ ಬಡ ರೈತನ ಮನೆ ಪುನಃ ನಿರ್ಮಿಸಿ ಕೊಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಎದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಬೇಕಾಗುತ್ತೆ.”
– ಉಮೇಶ್ ಮುದ್ನಾಳ್
ಸಾಮಾಜಿಕ ಹೋರಾಟಗಾರ

