ಬಸವನಬಾಗೇವಾಡಿ: ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ 12ನೇ ಶತಮಾನದ ಕಾಯಕಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಭಾನುವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಶಿವಾನಂದ ಮಂಗಾನವರ, ಹಡಪದ ಅಪ್ಪಣ್ಣನವರು 12ನೇ ಶತಮಾನದ ಕಾಯಕ ಶರಣದಲ್ಲಿ ಪ್ರಮುಖರಾದವರು. ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕಲ್ಯಾಣದಲ್ಲಿ ನಡೆದ ಅನುಭವ ಮಂಟಪದಲ್ಲಿ ಸಮಾಜದಲ್ಲಿರುವ ಓರೆ ಕೋರೆಗಳನ್ನು ತಿದ್ದಲು ತಮ್ಮ ಹರಿತವಾದ ಲೆಕ್ಕಣಿಕೆಯಿಂದ 250 ಸರಳವಾದ ವಚನಗಳನ್ನು ಬರೆದಿದ್ದಾರೆ. ಅವರು ಬರೆದಂತೆ ನಡೆದುಕೊಂಡವರು. ಇವರ ಸಂದೇಶ ಅರಿತುಕೊಂಡು ಮುನ್ನಡೆಯಬೇಕೆಂದರು.ಈ ಸಂದರ್ಭದಲ್ಲಿ ಶರಣು ಮಾತಾಳಿ, ಮಲ್ಲಿಕಾರ್ಜುನ ಹಡಪದ,ಶಿವು ಮಂಗಾನವರ, ಶಿವಲಿಂಗಪ್ಪ ಬಾಲಪ್ಪಗೋಳ, ಶರಣಯ್ಯ ಹಿರೇಮಠ, ಗ್ರಾಮಸ್ಥರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

