Author: editor.udayarashmi@gmail.com

ಆಲಮಟ್ಟಿ: ಮಹಾರಾಷ್ಟದ ಕೃಷ್ಣಾ ತೀರದಲ್ಲಿ ಮಹಾಪುರ ಸೃಷ್ಟಿಯಾಗುತ್ತಿದ್ದು, ಆಲಮಟ್ಟಿ ಜಲಾಶಯದಿಂದ ಈ ವರ್ಷದ ಅತ್ಯಧಿಕ ೩ ಲಕ್ಷ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.ಜಲಾಶಯದ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.ಒಳಹರಿವು ಮತ್ತಷ್ಟು ಹೆಚ್ಚುವ ಸಾಧ್ಯತೆಯಿದ್ದು, ಒಳಹರಿವು ಹೆಚ್ಚಿದರೇ ಹೊರಹರಿವನ್ನು ೩.೨೫ ಲಕ್ಷ ಕ್ಯುಸೆಕ್ ಗೆ ಹೆಚ್ಚುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಲಾಶಯದ ಎಲ್ಲಾ ೨೬ ಗೇಟ್ ಗಳ ಮೂಲಕ ನೀರು ಬಿಡಲಾಗುತ್ತಿದೆ. ಸಂಜೆ ೬ ಕ್ಕೆ ಜಲಾಶಯಕ್ಕೆ ೨,೦೯,೮೧೭ ಕ್ಯುಸೆಕ್ ಒಳಹರಿವು ಇದೆ. ಜಲಾಶಯದ ಮಟ್ಟ ೫೧೬.೬೮ಮೀ ಗೆ ಕಡಿಮೆಯಾಗಿದೆ. ಜಲಾಶಯದಲ್ಲಿ ೮೦ ಟಿಎಂಸಿ ನೀರು ಸಂಗ್ರಹವಾಗಿದೆ. ಇಷ್ಟೇ ಪ್ರಮಾಣದ ನೀರನ್ನು ನಾರಾಯಣಪುರ ಜಲಾಶಯದಿಂದಲೂ ಬಿಡಲಾಗುತ್ತಿದೆ,ಭಾರಿ ಮಳೆ;ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ.ಅನೇಕ ಕಡೆ ನಿತ್ಯ ೨೦ ಸೆಂ.ಮೀಗೂ ಅಧಿಕ ಮಳೆ ಸುರಿಯುತ್ತಿದೆ. ಮಹಾಬಲೇಶ್ವರದಲ್ಲಿ ಸೆಂ.ಮೀ ಸೋಮವಾರ ಆಗಿದೆ.ಕರ್ನಾಟಕಕ್ಕೆ ಬಂದು ಸೇರುವ ಕಳ್ಳೋಳ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು ೨.೧೦ ಲಕ್ಷ ಕ್ಯುಸೆಕ್ ಗೂ ಅಧಿಕ ವಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನ ಘಟಪ್ರಭಾ…

Read More

ವಿಜಯಪುರ: ದತ್ತಿ ನಿಧಿ ಗೋಷ್ಠಿಗಳು ಸಮಾಜ ಪರಿವತ೯ನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂದಿನ ಯುವ ಪೀಳಿಗೆ ಸಾಹಿತಿಕ ಮತ್ತು ಸಾಂಸ್ಕೃತಿಕಮೌಲ್ಯಗಳನ್ನು ಅಳವಡಿಸಿಕೊಳ್ಳುವದು ಅತ್ಯಗತ್ಯ, ಈ ನಿಟ್ಟಿನಲ್ಲಿ ಷರಿಷತ್ತಿನ ಕಾಯ೯ ಶ್ಲಾಘನೀಯ ಎಂದು ಮಹಿಳಾ ವಿಶ್ವವಿದ್ಯಾಲಯದ ಆಹಾರ ಮತ್ತು ಸಂಸ್ಕರಣ ವಿಭಾಗದ ಮುಖ್ಯಸ್ಥೆ ಡಾ.ರೇಣುಕಾ ಮೇಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾ,ತಾಲೂಕ ಹಾಗು ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ದತ್ತಿ ನಿಧಿ ಕಾರ್ಯಕ್ರಮ ದಿ ಮಳಿಸಿದ್ದಪ್ಪ ಶಿವಪ್ಪ ವಾಲಿ ದತ್ತಿ. ದತ್ತಿ ದಾನಿಗಳು ಡಾ.ಸೋಮಶೇಖರ ವಾಲಿ. ಹಾಗು ದಿ ಮಲ್ಲೇಶ್ವರ ಅಶೋಕಕುಮಾರ ಗಂಜಾಳ ದತ್ತಿ. ದತ್ತಿ ದಾನಿಗಳು ಅಶೋಕ ಗಂಜಾಳಇವರ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ನಾವೆಲ್ಲರೂ ಸಂಘಟಿತರಾಗುವ ಮೂಲಕ ಕನ್ನಡ ಭಾಷೆ,ಸಾಹಿತ್ಯವನ್ನು ನವ ಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡೋಣ ಎಂದರು.ದಿ ಮಳಿಸಿದ್ದಪ್ಪ ಶಿವಪ್ಪ ವಾಲಿ ದತ್ತಿ. ವಿಷಯ.ದಿ ಮಳಿಸಿದ್ದಪ್ಪ ಶಿವಪ್ಪ ವಾಲಿ ಹಾಗು ಸಾರವಾಡ ಯೋಧರ ಸ್ಮರಣೆ ಕುರಿತು ಉಪನ್ಯಾಸ ನೀಡಿದ ಸಾಹಿತಿ…

Read More

ಕಾರ್ಗಿಲ್ ವಿಜಯ್ ದಿವಸ್ ಆಚರಣೆ | ಕಾರ್ಗಿಲ್ ವೀರ ಯೋಧ ಚನ್ನಬಸಪ್ಪ ಜಿಗಜೇವಣಿ ಸಮಾಧಿಗೆ ಪೂಜೆ ಸಲ್ಲಿಕೆ ಚಡಚಣ: ಪ್ರತಿ ಭಾರತೀಯರು ಸ್ಮರಿಸಬೇಕಾದ ದಿನ. ಶತ್ರು ರಾಷ್ಟçದ ದಾಳಿಯಿಂದ ಸಂಕಷ್ಟದಲ್ಲಿದ್ದ ಭಾರತ ತನ್ನ ಕೆಚ್ಚೆದೆಯ ವೀರರತ್ಯಾಗ, ಬಲಿದಾನದ ಫಲವಾಗಿ ಸುರಕ್ಷಿತವಾಗಿತ್ತು. ಈ ಮಹತ್ವದ ದಿನಕ್ಕೆ ಈ ಸಲ ೨೫ನೇ ವರ್ಷ ತುಂಬುತ್ತದೆ. ನಮ್ಮ ಯೋಧರೇ ನಮ್ಮ ಹೆಮ್ಮೆ, ಆಸ್ತಿ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಆರ್.ಎನ್.ಹತ್ತಳ್ಳಿಯವರು ಹೇಳಿದರು.ಶುಕ್ರವಾರದಂದು ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಕಾರ್ಗಿಲ್ ವೀರ ಯೋಧ ಚನ್ನಬಸಪ್ಪ ಜಿಗಜೇವಣಿಯವರ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು. ಈ ದಿನವು ಭಾರತದ ಇತಿಹಾಸದಲ್ಲಿ ದೇಶದ ಸೇನೆಯ ಶೌರ್ಯ ಮತ್ತು ಧೈರ್ಯದ ಕಥೆಯನ್ನು ನಮಗೆ ನೆನಪಿಸುತ್ತದೆ. ೧೯೯೯ರಲ್ಲಿ, ಪಾಕಿಸ್ತಾನಿ ಸೇನೆಯು ಭಾರತದ ಭೂಪ್ರದೇಶದೊಳಗೆ ನುಗ್ಗಿತು ಮತ್ತು ಕಾರ್ಗಿಲ್‌ನ ಎತ್ತರದ ಸ್ಥಳಗಳನ್ನು ವಶಪಡಿಸಿಕೊಂಡಿತು. ಈ ಪ್ರದೇಶವನ್ನು ಭಾರತೀಯ ಸೈನಿಕರು ಆಪರೇಷನ್ ವಿಜಯ್ ನಡೆಸುವ…

Read More

ಕೊಲ್ಹಾರ: ಜಾನಪದ ಕಲೆಯು, ಜಾತಿ – ಮತಗಳ ಬೇಧ ತೊರೆದು ಸಮನ್ವಯ ಸಾಧಿಸುವ ಮೇರು ಸಂಸ್ಕೃತಿಯಾಗಿದೆ. ಎಲ್ಲ ಜನರನ್ನು ಬಾಂಧವ್ಯದ ಬೆಸುಗೆಯಲ್ಲಿ ಬದುಕುವಂತೆ ಕಲಿಸುವ ಶಕ್ತಿ ಜಾನಪದ ಸಂಪ್ರದಾಯಕ್ಕಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್ ಬಾಲಾಜಿ ಅಭಿಪ್ರಾಯಪಟ್ಟರು.ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದಲ್ಲಿ ಬೀಬೀ ಫಾತೀಮಾಳ ಹತ್ತು ದಿನಗಳ ಜಾರತ ಉತ್ಸವದ ನಿಮಿತ್ಯ, ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ತಾಲೂಕು ಘಟಕ ಕೊಲ್ಹಾರ ವತಿಯಿಂದ ಬಳೂತಿಯ ಭಾವಿ ಬಸವೇಶ್ವರ ಹೆಜ್ಜೆ ಮೇಳ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ” ಜಿಲ್ಲಾ ಮಟ್ಟದ ರಿವಾಯತ ಸಂಬ್ರಮ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಹಿಂದೂ – ಮುಸ್ಲಿಂ ಏಕತೆಯಿಂದ ದೇಶದಲ್ಲಿ ಶಾಂತಿ ನೆಲೆಸುತ್ತದೆ. ರಿವಾಯತ ಕಲೆಯ ಮೂಲಕ ಶಾಂತಿ – ಸಹಬಾಳ್ವೆಗೆ ಕಾರಣವಾದ ಬಳೂತಿ ಗ್ರಾಮ ಭಾವೈಕ್ಯತೆಯ ಕಾಶಿಯಾಗಿದೆ ಎಂದರು.ಸಾನಿಧ್ಯ ವಹಿಸಿ ಮಾತನಾಡಿದ, ನಾಗರದಿನ್ನಿ ಸದ್ಗುರು ಸದಾನಂದ ಮಠದ ತಪೋನಿಧಿ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು, ಧರ್ಮ ಯಾವುದಾದರೇನು ಕರ್ಮ ಮಾತ್ರ…

Read More

ಚಿಮ್ಮಡ: ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಪಿಕೆಪಿಎಸ್ ನಿರ್ದೆಶಕರಾದ ನಿಂಗಪ್ಪ ಪುಂಡಲಿಕಪ್ಪಾ ಪೊಜಾರಿ ಅವರು ಪ್ರಗತಿಪರ ರೈತ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಭಾರತೀಯ ಸಕ್ಕರೆ ತಂತ್ರಜ್ಞಾನ ಸಂಸ್ಥೆ ನೀಡುವ ಪ್ರತಿಷ್ಟತ ರಾಷ್ಠಮಟ್ಟದ ಪ್ರಗತಿಪರ ರೈತ ಪ್ರಶಸ್ತಿಯನ್ನು ಜುಲೈ ೩೦ ರಂದು ಜೈಪುರದಲ್ಲಿ ನಡೆಯಲಿರುವ ೮೨ನೇ ವಾರ್ಷಿಕ ಸಮ್ಮೇಳನ ಹಾಗೂ ಅಂತರಾಷ್ಟ್ರೀಯ ಸಕ್ಕರೆ ಎಕ್ಷಪೊ-೨೦೨೪ ಪ್ರತೀಷ್ಠಿತ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿಗೌರವಿಸಲಾಗುವುದೆಂದು ಸಂಸ್ಥೆ ಪ್ರಟಣೆಯಲ್ಲಿ ತಿಳಿಸಿದೆ. ಗ್ರಾಮದ ರೈತರ ಈ ಸಾದನೆಗೆ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಚಿಮ್ಮಡ: ಗ್ರಾಮದ ಆರಾಧ್ಯ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ಉಡಿ ತುಂಬುವ ಕಾರ್ಯಕ್ರಮ ಶುಕ್ರವಾರ ಮುಂಜಾನೆ ಸಕಲ ವಾದ್ಯ ವೃಂದಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.ಮುಂಜಾನೆ ಆರು ಗಂಟೆಗೆ ನಡೆಯುವ ವಿಶೇಷ ಪೂಜೆಯೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ರೈತರು ತಮ್ಮ ವಾಹನಗಳಲ್ಲಿ ಸಮೀಪದ ಕೃಷ್ಣಾ ನದಿಯಿಂದ ಗಂಗಾಜಲ ತಂದು ಶ್ರೀ ದೇವಿಯ ಮೂರ್ತಿಗೆ ಗಂಗಾಭಿಷೇಕ ನೆರವೇರಿಸಿದರು. ನಂತರ ದೇವಿಯ ವಿಗ್ರಹ ಒಳಗೊಂಡ ಪಲ್ಲಕ್ಕಿಯನ್ನು ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಸಕಲ ವಿಧಿ ವಿಧಾನಗಳಿಂದ ಅಲಂಕರಿಸಲಾಗಿದ್ದ ಗ್ರಾಮದ ದ್ಯಾಮವ್ವದೇವಿ, ಎಲ್ಲಮ್ಮದೇವಿ, ಶ್ರೀ ಬನಶಂಕರಿದೇವಿಯ ಮೂರು ಮೂಖದವ್ವದೇವಿ, ಲಕ್ಷಿö್ಮದೇವಿ ದೇವಸ್ಥಾನಗಳಿಗೆ ನೈವೆದ್ದೆ ಅರ್ಪಿಸಿ ದೇವಿಯ ಉಡಿ ತುಂಬುವ ಮೂಲಕ ಗ್ರಾಮದ ಜನ ಜಾನುವಾರುಗಳಿಗೆ ಬರುವ ಕಂಟಕ, ಮಾರಣಾಂತಿಕ ಕಾಯಿಲೆ ನಿವಾರಣೆಗಾಗಿ ಕಳೆದ ಐದು ವಾರಗಳ ಕಾಲ ಗ್ರಾಮದಲ್ಲಿ ರೊಟ್ಟಿ ಮಾಡುವುದು, ಪದಾರ್ಥಗಳನ್ನು ಕರಿಯುವುದು, ತೆಂಗಿನಕಾಯಿ ಒಡೆಯುವುದು ಅಲ್ಲದೇ ಯಾವುದೇ ಶುಭಕಾರ್ಯಗಳಿಗೆ ವಿಧಿಸಲಾಗಿದ್ದ ಸ್ವಯಂ ಪ್ರೇರಿತ ನಿಷೇಧಗೊಳಿಸುವ ‘ದೇವಿಯ ವಾರ ಆಚರಣೆಯನ್ನು…

Read More

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಜು. ೨೮ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಪೊಲೀಸ್ ಕವಾಯತು ಮೈದಾನ ಎದುರಿಗಿರುವ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಲಿದೆ.ಬೃಹತ್ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡುವರು.ಈ ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಆಗಮಿಸುವರು. ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಅಧ್ಯಕ್ಷತೆ ವಹಿಸುವರು.ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಯಶವಂತರಾಯಗೌಡ ಪಾಟೀಲ,…

Read More

ವಿಜಯಪುರ: ಇಲ್ಲಿಯ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಶುಭಶ್ರೀ ಹೊಟೆಲನಲ್ಲಿ ಲಘು, ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಪ್ರದರ್ಶನ ಮತ್ತು ಗ್ರಾಹಕರ ಸಭೆ ಗುರುವಾರ ಜರುಗಿತು.ಕಾರ್ಯಕ್ರಮವನ್ನು ಬೆಂಗಳೂರಿನ ಅಂಚಲೀಯ ಕಾರ್ಯಲಯದ ಸಹಾಯಕ ಮಹಾಪ್ರಬಂಧಕ ಅನೀಲಕುಮಾರ ಉದ್ಘಾಟಿಸಿದರು. ಕಲಬುರ್ಗಿಯ ಕ್ಷೇತ್ರಿಯ ಸಹಾಯಕ ಮಹಾಪ್ರಬಂಧಕ ಶ್ರೀಮತಿ ತೇಜಸ್ವಿನಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದ ನೇತೃತ್ವವನ್ನು ಮುಖ್ಯ ವ್ಯವಸ್ಥಾಪಕ ಶಿವಾನಂದ ರೆಡ್ಡಿ ಹಾಗೂ ಹಿರಿಯ ವ್ಯವಸ್ಥಾಪಕ ಸತೀಶ ಜೋಶಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಟಾಟಾ ಅಟೋಮೊಬೈಲ್‌ದ ಬಸವರಾಜ ಬಿಜ್ಜರಗಿ, ಉದ್ಯಮಿ ಸಜ್ಜನ, ಜಾಕೀರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಚ್.ಎಂ. ಬಾಗವಾನ, ಗಣ್ಯ ಗ್ರಾಹಕ ಅನಿಲ ಅಣೆಪ್ಪನವರ ಗುತ್ತಿಗೆದಾರ ಸೋಮಶೇಖರ ಬಂಡಿ, ಟ್ರಾನ್ಸ್ಪೋರ್ಟ ಮಾಲಿಕ ಅಶೋಕ ಉಪ್ಪಿನ ಹಾಗೂ ಡಾ|| ಎಸ್.ಬಿ. ಮುದನೂರ ಭಾಗವಹಿಸಿದ್ದರು.ಸತೀಶ ಜೋಶಿ ಸ್ವಾಗತಿಸಿ, ನಿರೂಪಿಸಿದರು. ಕಲಬುರ್ಗಿಯ ಮುಖ್ಯ ಪ್ರಬಂಧಕ ಮನೋಜ ಕುಲಕರ್ಣಿ ಕೊನೆಯಲ್ಲಿ ವಂದಿಸಿದರು.

Read More

ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ, ದೂ: ೯೭೪೨೮೮೪೧೬೦ ಮನುಷ್ಯನ ಆಲೋಚನೆಗಳು ನೂರಾರು ರೀತಿ ಇರುತ್ತವೆ. ಅವುಗಳನ್ನು ಪ್ರಮುಖವಾಗಿ ಸಕಾರಾತ್ಮಕ ಮತ್ತು ನಕಾರಾತ್ಮಕ ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಇದರಲ್ಲಿ ನಕಾತಾತ್ಮಕ ಚಿಂತನೆಗಳೆಂದರೆ ಎಲ್ಲರಿಗೂ ಭಯ. ನಕಾರಾತ್ಮಕ ಚಿಂತನೆಗಳು ಎಂದರೆ, ಮನುಷ್ಯನ ಆಲೋಚನೆಗಳು, ಅಭಿಪ್ರಾಯಗಳು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಮನಸ್ಸಿನಲ್ಲಿ ಉಂಟಾಗುವ ಗೊಂದಲದ ಸ್ಥಿತಿಯಾಗಿದೆ. ಮನಸ್ಸಿನಲ್ಲಿ ಇರುವ ನಕಾರಾತ್ಮಕತೆಯಿಂದ ಮನುಷ್ಯನ ಒಟ್ಟಾರೆ ಆರೋಗ್ಯವೂ ಹಾಳಾಗುತ್ತದೆ. ಇದೇ ರೀತಿ ವಿವಿಧ ಮನೋಭಾವದ ಜನರು ಎಲ್ಲೆಡೆ ಇರುತ್ತಾರೆ. ನಾವು ಕೆಲಸ ಮಾಡುವ ಕಂಪನಿ, ಕಾರ್ಖಾನೆ, ಉದ್ಯಮಗಳು ಇತ್ಯಾದಿ ಇರಬಹುದು ಕೆಲವೊಮ್ಮೆ ಅಲ್ಲಿನ ಉದ್ಯೋಗಿಗಳು ವಿವಿಧ ರೀತಿಯ ಮನೋಭಾವ ಹೊಂದಿರುತ್ತಾರೆ. ಒಬ್ಬರು ಸಿಡುಕರಾದರೆ ಇನ್ನೊಬ್ಬರು ಸದಾ ಹಸನ್ಮುಖಿ. ಕೆಲವರು ಉತ್ತಮರಾದರೆ ಒಂದಷ್ಟು ಮಂದಿ ಸದಾ ಇತರರಿಗೆ ಕೆಡುಕು ಬಯಸುವವರು. ಕೆಲವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಇನ್ನು ಕೆಲವರು ಯಾವ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಿದರೂ…

Read More

ಶಾಲಾ ಸಂಸತ್ತು | ನೂತನ ಮಂತ್ರಿ ಮಂಡಲ ರಚನೆ | ಖಾತೆ ಪ್ರಮಾಣ ಪತ್ರ ವಿತರಣೆ ಚಿಕ್ಕಪಡಸಲಗಿ: ಇಂದಿನ ಯುವಜನತೆ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಹಾಗೂ ಮತಹಕ್ಕು ಚಲಾಯಿಸುವ ಪಾವಿತ್ರ್ಯತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಶಾಲಾ ಸಂಸತ್ತು ಚುನಾವಣೆ ಸಹಕಾರಿಯಾಗಿದೆ ಆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಣಕು ಸಂಸತ್ ರಚನೆ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.ಸ್ಥಳೀಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ ಪ್ರಸಕ್ತ ಸಾಲಿನ ಶಾಲಾ ಸಂಸತ್ತು ಚುನಾವಣೆಯಲ್ಲಿ ಆಯ್ಕೆಯಾದ ಸಂಸತ್ತಿನ ನೂತನ ಮಂತ್ರಿ ಮಂಡಲದ ಸದಸ್ಯರಿಗೆ ಖಾತೆಗಳ ಹಂಚಿಕೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.ಪ್ರೌಢಶಾಲಾ ಹಂತದಲ್ಲೇ ಮಕ್ಕಳಿಗೆ ಗಟ್ಟಿ ಪ್ರಜಾಪ್ರಭುತ್ವದ ತಿರುಳು ತಿಳಿ ಹೇಳಬೇಕಾಗಿದೆ. ಮತದಾನದ ಮೌಲ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.ಒಂದೊಂದು ಮತವು ನಿಣಾ೯ಯಕ ಪಾತ್ರ ವಹಿಸುತ್ತದೆ ಎಂಬ ಪರಿಕಲ್ಪನೆ ಮೂಡಿಸಿ ಜನಪ್ರತಿನಿಧಿಗಳು ಹೇಗೆ ಆಯ್ಕೆಗೊಳ್ಳತ್ತಾರೆ,ಸರಕಾರ ಹೇಗೆ ರಚನೆಯಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ತಿಳಿಸಿ ಸಾರ್ವತ್ರಿಕ ಚುನಾವಣೆ ನಿಯಮಾವಳಿಗಳ ಮಾದರಿಯಲ್ಲಿ ಪಾರದರ್ಶಕತೆಯಿಂದ ಶಾಲೆಯಲ್ಲಿ ಚುನಾವಣೆ ನಡೆಸಲಾಗಿದೆ…

Read More