ಚಿಮ್ಮಡ: ಗ್ರಾಮದ ಆರಾಧ್ಯ ದೇವತೆ ದುರ್ಗಾದೇವಿಯ ಜಾತ್ರಾ ಮಹೋತ್ಸವದ ನಿಮಿತ್ಯ ಉಡಿ ತುಂಬುವ ಕಾರ್ಯಕ್ರಮ ಶುಕ್ರವಾರ ಮುಂಜಾನೆ ಸಕಲ ವಾದ್ಯ ವೃಂದಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.
ಮುಂಜಾನೆ ಆರು ಗಂಟೆಗೆ ನಡೆಯುವ ವಿಶೇಷ ಪೂಜೆಯೊಂದಿಗೆ ಪ್ರಾರಂಭಗೊಂಡ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ರೈತರು ತಮ್ಮ ವಾಹನಗಳಲ್ಲಿ ಸಮೀಪದ ಕೃಷ್ಣಾ ನದಿಯಿಂದ ಗಂಗಾಜಲ ತಂದು ಶ್ರೀ ದೇವಿಯ ಮೂರ್ತಿಗೆ ಗಂಗಾಭಿಷೇಕ ನೆರವೇರಿಸಿದರು. ನಂತರ ದೇವಿಯ ವಿಗ್ರಹ ಒಳಗೊಂಡ ಪಲ್ಲಕ್ಕಿಯನ್ನು ಸಕಲ ವಾದ್ಯ ವೃಂದಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಸಕಲ ವಿಧಿ ವಿಧಾನಗಳಿಂದ ಅಲಂಕರಿಸಲಾಗಿದ್ದ ಗ್ರಾಮದ ದ್ಯಾಮವ್ವದೇವಿ, ಎಲ್ಲಮ್ಮದೇವಿ, ಶ್ರೀ ಬನಶಂಕರಿದೇವಿಯ ಮೂರು ಮೂಖದವ್ವದೇವಿ, ಲಕ್ಷಿö್ಮದೇವಿ ದೇವಸ್ಥಾನಗಳಿಗೆ ನೈವೆದ್ದೆ ಅರ್ಪಿಸಿ ದೇವಿಯ ಉಡಿ ತುಂಬುವ ಮೂಲಕ ಗ್ರಾಮದ ಜನ ಜಾನುವಾರುಗಳಿಗೆ ಬರುವ ಕಂಟಕ, ಮಾರಣಾಂತಿಕ ಕಾಯಿಲೆ ನಿವಾರಣೆಗಾಗಿ ಕಳೆದ ಐದು ವಾರಗಳ ಕಾಲ ಗ್ರಾಮದಲ್ಲಿ ರೊಟ್ಟಿ ಮಾಡುವುದು, ಪದಾರ್ಥಗಳನ್ನು ಕರಿಯುವುದು, ತೆಂಗಿನಕಾಯಿ ಒಡೆಯುವುದು ಅಲ್ಲದೇ ಯಾವುದೇ ಶುಭಕಾರ್ಯಗಳಿಗೆ ವಿಧಿಸಲಾಗಿದ್ದ ಸ್ವಯಂ ಪ್ರೇರಿತ ನಿಷೇಧಗೊಳಿಸುವ ‘ದೇವಿಯ ವಾರ ಆಚರಣೆಯನ್ನು ಶುಕ್ರವಾರ ಶ್ರೀ ದೇವಿಯರ ಉಡಿ ತುಂಬುವ ಮೂಲಕ ತೆರೆ ಎಳೆಯಲಾಯಿತು. ಈ ಉಡಿ ತುಂಬುವ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ ರಾಮಪ್ಪಾ ಬಗನಾಳ, ಬಿ.ಎಸ್ ಪಾಟೀಲ, ಗುರಲಿಂಗಪ್ಪಾ ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಗುರಪ್ಪಾ ಬಳಗಾರ, ಗ್ರಾ.ಪಂ. ಮಾಜಿ ಅಧ್ಯಕ್ಷ ಪರಪ್ಪಾ ಪಾಲಭಾವಿ, ಅಶೋಕ ಧಡೂತಿ, ದುಂಡಪ್ಪಾ ಪಾಟೀಲ, ಬೀರಪ್ಪಾ ಹಳೆಮನಿ, ಬಸವರಾಜ ಕಂಚನೂರ ಸೇರಿದಂತೆ ಹಲವಾರು ಧುರೀಣರು ಭಾಗವಹಿಸಿದ್ದರು.
ತೆರಬಂಡಿ ಸ್ಪರ್ದೆ; ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದ ಜೈ ಆಂಜನೇಯ ಕುಸ್ತಿ ಕ್ರೀಢಾ ಸಂಘದಿಂದ ತೆರಬಂಡಿ ಸ್ಪರ್ದೆಗಳನ್ನು ಆಯೋಜಿಸಲಾಗಿದೆ.
ಜು ೨೬ರಂದು ಹಾಗೂ ೨೭ ಶನಿವಾರ ಹಾಗೂ ರವಿವಾರದಂದು ಗ್ರಾಮದ ಗುಡ್ಡದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಸಮೀಪವಿರುವ ಮೈದಾನದಲ್ಲಿ ನಡೆಯಲಿರುವ ಈ ಸ್ಪರ್ದೆಯಲ್ಲಿ ಬ್ರಹತ್ ಮೊತ್ತದ ಬಹುಮಾನಗಳನ್ನು ಘೋಷಿಸಲಾಗಿದ್ದು ಈ ಭಾಗದ ಕ್ರೀಢಾಪ್ರೇಮಿಗಳು, ತೆರಬಂಡಿ ಸ್ಪರ್ದಾಳುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘಟಣೆ ಮನವಿ ಮಾಡಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

