ಕಾರ್ಗಿಲ್ ವಿಜಯ್ ದಿವಸ್ ಆಚರಣೆ | ಕಾರ್ಗಿಲ್ ವೀರ ಯೋಧ ಚನ್ನಬಸಪ್ಪ ಜಿಗಜೇವಣಿ ಸಮಾಧಿಗೆ ಪೂಜೆ ಸಲ್ಲಿಕೆ
ಚಡಚಣ: ಪ್ರತಿ ಭಾರತೀಯರು ಸ್ಮರಿಸಬೇಕಾದ ದಿನ. ಶತ್ರು ರಾಷ್ಟçದ ದಾಳಿಯಿಂದ ಸಂಕಷ್ಟದಲ್ಲಿದ್ದ ಭಾರತ ತನ್ನ ಕೆಚ್ಚೆದೆಯ ವೀರರತ್ಯಾಗ, ಬಲಿದಾನದ ಫಲವಾಗಿ ಸುರಕ್ಷಿತವಾಗಿತ್ತು. ಈ ಮಹತ್ವದ ದಿನಕ್ಕೆ ಈ ಸಲ ೨೫ನೇ ವರ್ಷ ತುಂಬುತ್ತದೆ. ನಮ್ಮ ಯೋಧರೇ ನಮ್ಮ ಹೆಮ್ಮೆ, ಆಸ್ತಿ ಎಂದು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಆರ್.ಎನ್.ಹತ್ತಳ್ಳಿಯವರು ಹೇಳಿದರು.
ಶುಕ್ರವಾರದಂದು ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಕಾರ್ಗಿಲ್ ವೀರ ಯೋಧ ಚನ್ನಬಸಪ್ಪ ಜಿಗಜೇವಣಿಯವರ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು. ಈ ದಿನವು ಭಾರತದ ಇತಿಹಾಸದಲ್ಲಿ ದೇಶದ ಸೇನೆಯ ಶೌರ್ಯ ಮತ್ತು ಧೈರ್ಯದ ಕಥೆಯನ್ನು ನಮಗೆ ನೆನಪಿಸುತ್ತದೆ. ೧೯೯೯ರಲ್ಲಿ, ಪಾಕಿಸ್ತಾನಿ ಸೇನೆಯು ಭಾರತದ ಭೂಪ್ರದೇಶದೊಳಗೆ ನುಗ್ಗಿತು ಮತ್ತು ಕಾರ್ಗಿಲ್‌ನ ಎತ್ತರದ ಸ್ಥಳಗಳನ್ನು ವಶಪಡಿಸಿಕೊಂಡಿತು. ಈ ಪ್ರದೇಶವನ್ನು ಭಾರತೀಯ ಸೈನಿಕರು ಆಪರೇಷನ್ ವಿಜಯ್ ನಡೆಸುವ ಮೂಲಕ ವಶಪಡಿಸಿಕೊಂಡರು. ಈ ದಿನವನ್ನು ದೇಶದಲ್ಲಿ ವಿಜಯ್ ದಿವಸ್ ಎಂದೇ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಶಿಕ್ಷಕ ಎಸ್.ಡಿ.ಆದಿಗೊಂಡೆಯವರು ಮಾತನಾಡುತ್ತ. ಹೌದು ಯಾವ ಭಾರತೀಯರೂ ಕಾರ್ಗಿಲ್ ಯದ್ಧವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಯುದ್ಧದಲ್ಲಿ ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿತನ್ನದೇಶದಘನತೆ, ಸಾಹಸವನ್ನುಎತ್ತಿ ಹಿಡಿದಿದ್ದರು. ಇವರತ್ಯಾಗ, ಬಲಿದಾನ, ದೇಶಪ್ರೇಮಖಂಡಿತಾಎಲ್ಲಾ ಭಾರತೀಯರಿಗೂ ಸ್ಪೂರ್ತಿ, ದಾರಿದೀಪ. ತಾಯಿ ನೆಲ ಸಂಕಷ್ಟದಲ್ಲಿದ್ದಾಗ ಸಾವಿಗೂ ಅಂಜದೆ ಹೋರಾಡಿದಯೋಧರನ್ನು ಸ್ಮರಿಸೋಣ. ದೇಶಕ್ಕಾಗಿ ಪ್ರಾಣಾರ್ಪಣೆಗೈದಕೆಚ್ಚೆದೆಯ ವೀರರತ್ಯಾಗ ಎಂದಿಗೂ ಅಮರ.ಓ ವೀರರೇ ನಿಮ್ಮ ಸಾಹಸ ಸೂರ್ಯಚಂದ್ರರಿರುವತನಕಶಾಶ್ವತಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಬಿ.ಎಚ್.ಪೂಜಾರಿಯವರು ಮಾತನಾಡುತ್ತ. ಕಾರ್ಗಿಲ್ ಯದ್ಧ ಅಂತ್ಯವಾಗಿ ವಿಜಯೋತ್ಸವ ಆಚರಿಸಿದ ಕೆಲ ತಿಂಗಳುಗಳ ನಂತರವೂ ಪಾಪಿ ಪಾಕಿಸ್ತಾನ ಸೈನಿಕರ ಕೃತ್ಯಗಳು ನಿಂತಿರಲಿಲ್ಲ. ಈ ನಮ್ಮ ಯೋಧ ಚನ್ನಬಸಪ್ಪ ಜಿಗಜೇವಣಿಯವರು ಬಂಕರ್ ಚಾಲಕರಾಗಿದ್ದು, ಏ.೧೧.೨೦೦೦ ರಲ್ಲೇ ಲಡಾಕ್ ಮಾರ್ಗವಾಗಿ ತೆರಳುತ್ತಿರುವಾಗ ಪಾಕಿಸ್ತಾನದ ಸೈನಿಕರು ಬಂಕರ್‌ಗಳ ಮೇಲೆ ದಾಳಿ ನಡೆಸಿದರು. ಆಗ ಚನ್ನಬಸಪ್ಪನ ತೆಲೆಗೆ ವೈರಿಗಳ ಗುಂಡು ತಗುಲಿ ಕೊನೆಯುಸಿರೆಳೆದಿದ್ದರು. ಇದೇ ಅವರ ಅಂತ್ಯ ಸಂಸ್ಕಾರದ ಸ್ಥಳ ಇದು ಎಂದು ಹೇಳಿದರು.
ಈ ವೇಳೆಯಲ್ಲಿ ಎಸ್.ಜೆ.ಬಿಜ್ಜರಗಿ, ಪಿ.ಎ.ವಾಲಿಕಾರ, ಎಂ.ಕೆ.ಬಗಲಿ, ಎ.ಎಚ್.ಬಗಲಿ, ಎನ್.ಎಸ್.ಘೊಡೇಸವಾರ, ಎಂ.ಎಸ್.ಶೇಖ, ಹೀನಾ ಸೈಯದರವರುಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

