ಚಿಮ್ಮಡ: ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಪಿಕೆಪಿಎಸ್ ನಿರ್ದೆಶಕರಾದ ನಿಂಗಪ್ಪ ಪುಂಡಲಿಕಪ್ಪಾ ಪೊಜಾರಿ ಅವರು ಪ್ರಗತಿಪರ ರೈತ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಭಾರತೀಯ ಸಕ್ಕರೆ ತಂತ್ರಜ್ಞಾನ ಸಂಸ್ಥೆ ನೀಡುವ ಪ್ರತಿಷ್ಟತ ರಾಷ್ಠಮಟ್ಟದ ಪ್ರಗತಿಪರ ರೈತ ಪ್ರಶಸ್ತಿಯನ್ನು ಜುಲೈ ೩೦ ರಂದು ಜೈಪುರದಲ್ಲಿ ನಡೆಯಲಿರುವ ೮೨ನೇ ವಾರ್ಷಿಕ ಸಮ್ಮೇಳನ ಹಾಗೂ ಅಂತರಾಷ್ಟ್ರೀಯ ಸಕ್ಕರೆ ಎಕ್ಷಪೊ-೨೦೨೪ ಪ್ರತೀಷ್ಠಿತ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿಗೌರವಿಸಲಾಗುವುದೆಂದು ಸಂಸ್ಥೆ ಪ್ರಟಣೆಯಲ್ಲಿ ತಿಳಿಸಿದೆ. ಗ್ರಾಮದ ರೈತರ ಈ ಸಾದನೆಗೆ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು, ಗ್ರಾಮ ಪಂಚಾಯತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

