Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ಸೋಮವಾರ ಶ್ರಾವಣ ಮಾಸದಂಗವಾಗಿ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕೆಲವರು ಒಂದು ತಿಂಗಳ ಕಾಲ ಶರಣವೃತ ಸ್ವೀಕರಿಸಿದರು.ಬೆಳಗ್ಗೆ ೬ ಗಂಟೆಗೆ ವಿವಿಧ ಶರಣ-ಶರಣೆಯರು ಶ್ರೀಗಳ ಸಾನಿಧ್ಯದಲ್ಲಿ ಲಿಂಗಪೂಜೆ, ವಚನಗಾಯನ, ಅನುಭಾವದೊಂದಿಗೆ ಶರಣ ವೃತ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಪವಿತ್ರವಾದ ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ಪ್ರತಿಯೊಬ್ಬರೂ ಆಲಿಸುವ ಜೊತೆಗೆ ದೇಹ,ಮನಸ್ಸು ಪ್ರಸನ್ನವಾಗಿಟ್ಟುಕೊಳ್ಳುವ ಮೂಲಕ ತಮ್ಮ ಜೀವನ ಪಾವನ ಮಾಡಿಕೊಳ್ಳಬೇಕು. ಶ್ರಾವಣ ಮಾಸದಲ್ಲಿ ಶರಣ ವೃತ ಸ್ವೀಕರಿಸುವ ಮೂಲಕ ಬಸವಾದಿ ಪ್ರಮಥರ ವಚನ ಸಾಹಿತ್ಯದ ಓದು, ವಚನ ಗಾಯನ, ವಚನ ಸಾಹಿತ್ಯದ ಅನುಭಾವ ಮಾಡಿಕೊಂಡರೆ ಬದುಕಿಗೆ ದಾರಿ ದೀಪವಾಗುತ್ತದೆ ಎಂದರು.ಡಾ.ಮಹಾಂತೇಶ ಮಡಿಕೇಶ್ವರ ಅವರು ಅನುಭಾವ ಹಂಚಿಕೊಂಡರು. ಶರಣು ಬಸ್ತಾಳ ಅವರು ವಚನ ಗಾಯನ ಮಾಡಿದರು.ಈ ಸಂದರ್ಭದಲ್ಲಿ ಎಸ್.ಎಸ್.ಝಳಕಿ, ಎಚ್.ಎಸ್.ಬಿರಾದಾರ, ಸಂಗನಗೌಡ ಚಿಕ್ಕೊಂಡ, ಶಿವಪುತ್ರ ಕೆಂಭಾವಿ, ಸಿ.ಟಿ,ಮಾದರ, ವಿವೇಕಾನಂದ ಕಲ್ಯಾಣಶೆಟ್ಟಿ, ಎಂ.ಜಿ.ಆದಿಗೊಂಡ, ಎಚ್.ಬಿ.ಬಾರಿಕಾಯಿ, ಶಿವರುದ್ರಯ್ಯ ಹಿರೇಮಠ, ವೈ.ಎನ್.ಮಿಣಜಗಿ, ಪ್ರಭಾಕರ ಖೇಡದ, ಕೊಟ್ರೇಶ ಹೆಗ್ಡಾಳ, ಸುಭಾಸ ಹಡಪದ, ಬಿ.ಎಸ್.ಧನಶೆಟ್ಟಿ, ಮಹಾದೇವಿ ಬಿರಾದಾರ,…

Read More

ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಸೋಮವಾರ ಸಂಜೆ ಶ್ರಾವಣ ಮಾಸದಂಗವಾಗಿ ಹತ್ತರಕಿಹಾಳ, ಮುದ್ದೇಬಿಹಾಳ, ಕಗ್ಗೋಡ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು ೬೦-೭೦ ಯುವ ಭಕ್ತರು ಶ್ರಾವಣ ಮಾಸದಂಗವಾಗಿ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಶರಣ ದೀಕ್ಷೆ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸ ಬಹಳ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಶರಣ ದೀಕ್ಷೆ ಪಡೆದುಕೊಂಡ ಯುವಕರು ಯಾವುದೇ ದುಶ್ಚಟಗಳನ್ನು ಮಾಡಬಾರದು. ತಮ್ಮ ಕಾಯಕದೊಂದಿಗೆ ಸದಾ ಶಿವನಾಮಸ್ಮರಣೆ ಮಾಡುತ್ತಾ ಗುರುವಿನ ಸೇವೆ ಮಾಡಬೇಕು. ಪ್ರತಿನಿತ್ಯ ಬೆಳಗ್ಗೆ, ಸಂಜೆ ಸ್ನಾನಾದಿ ಮಾಡಿಕೊಂಡು ಲಿಂಗಪೂಜೆ ಮಾಡಿಕೊಳ್ಳಬೇಕು. ತಮ್ಮ ಜೀವನವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿಕೊಳ್ಳಬೇಕು. ನೀವು ಸನ್ಮಾರ್ಗದಲ್ಲಿ ನಡೆಯಲು ಶರಣ ದೀಕ್ಷೆ ಪಡೆದುಕೊಂಡಿದ್ದು ಶ್ಲಾಘನೀಯ. ನಿಮಗೆ ಭಗವಂತನ ಕೃಪಾಶೀರ್ವಾದ ಸದಾ ಇರುತ್ತದೆ ಎಂದರು.ಈ ಸಂದರ್ಭದಲ್ಲಿ ಶರಣಯ್ಯ ಮಠಪತಿ, ಸಂತೋಷ ಕೊಟ್ಲಿಪ್ರಭು ಹಾದಿಮನಿ, ವಿರೇಶ ಉಣ್ಣಿಭಾವಿ, ಶಂಕರ ಕವಾಡಗಿ, ದುಂಡು ನರಲೆ, ಶೇಖು ಹಾವಿನಾಳ, ಸಂಗು ಹುಕ್ಕೇರಿ,…

Read More

ಬಸವನಬಾಗೇವಾಡಿ: ರಾಜ್ಯದಲ್ಲಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಪಿ.ನಾಗಾವಿ, ಕಾರ್ಯದರ್ಶಿ ಸಿ.ಬಿ.ಪಾಟೀಲ ಹಾಗೂ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಮಂಗಾನವರ ಸೋಮವಾರ ಸಲ್ಲಿಸಿದರು.ಈ ಸಂದರ್ಭದಲ್ಲಿ ಶಿವಾನಂದ ಮಂಗಾನವರ ಮಾತನಾಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಎಲ್ಲ ನೌಕರ ಬಾಂಧವರಿಗೆ ಏಳನೇ ವೇತನ ಆಯೋಗ ಯಥಾವತ್ತಾಗಿ ಜಾರಿಗೆ ತರಲು ಮುಂದಾಗಿರುವದು ಸಮಸ್ತ ನೌಕರ ಬಾಂಧವರಿಗೆ ಹರ್ಷ ತಂದಿದೆ. ಇಂತಹ ನಿರ್ಣಯ ತೆಗೆದುಕೊಂಡ ಸಿಎಂ ಸೇರಿದಂತೆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು ಇದೀಗ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಮೂಲಕ ಅವರಿಗೂ ನ್ಯಾಯ ಸಿಗುವಂತೆ ಸರ್ಕಾರ ಮಾಡಬೇಕು. ಅವರ ಬೇಡಿಕೆಗಳಾದ ೨೦೧೭ ರವರೆಗೆ ನೇಮಕವಾದ ಶಿಕ್ಷಕರನ್ನು ೧ ರಿಂದ ೭…

Read More

ಮುದ್ದೇಬಿಹಾಳ: ಮೂಡಾ ಹಗರಣದ ಹಿನ್ನೆಲೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿದ ಮೆಟಾ ಸನ್ ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲೆಯ ಅಹಿಂದ ಒಕ್ಕೂಟದಿಂದ ಆ.೬ ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸುತ್ತಿದ್ದು ಈ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲ ಅಹಿಂದ ಒಕ್ಕೂಟದವರು ಭಾಗಿಯಾಗುವಂತೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಮನವಿ ಮಾಡಿಕೊಂಡರು.ಪಟ್ಟಣದ ಖಾಸಗಿ ಹೋಟಲವೊಂದರಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ನೊಟೀಸಿನ ಕುರಿತು ರಾಜ್ಯಪಾಲರೇನಾದರೂ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಇಡೀ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲವಾಗಲಿದೆ. ಮುಖ್ಯ ಮಂತ್ರಿಗಳ ಏಳ್ಗೆಯನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ನವರ ಪಾದಯಾತ್ರೆ ಷಡ್ಯಂತ್ರದಿಂದ ಕೂಡಿದೆ. ಹಾಗಾಗಿ ಎಲ್ಲ ಅಹಿಂದ ಒಕ್ಕೂಟದವರು ಹೆಚ್ವಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ,ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ಕಾಂಗ್ರೇಸ್ ಮುಖಂಡ ದಾದಾ ಎತ್ತಿಮನಿ, ಸಂತೋಷ ನಾಯ್ಕೋಡಿ ಮತ್ತೀತರರು ಮಾತನಾಡಿ, ನಿಷ್ಕಳಂಕ ರಾಜಕಾರಣಿಯಾಗಿರುವ ಸಿದ್ಧರಾಮಯ್ಯನವರ ಮೇಲೆ ಹೊರಿಸಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರಿಗೆ ರಾಜ್ಯಪಾಲರು ನೀಡಿರುವ ನೊಟೀಸನ್ನು ಕೂಡಲೇ…

Read More

ಸಿಂದಗಿ: ಯಾವುದೇ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಬೇಕಾದರೆ ವಿದ್ಯಾರ್ಥಿಗಳ ಸಹಕಾರ, ಉಪನ್ಯಾಸಕರ ಕಾರ್ಯಕ್ಷಮತೆ ಮುಖ್ಯವಾಗಿರುತ್ತದೆ ಎಂದು ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ ಹೇಳಿದರು.ಪಟ್ಟಣದ ಶ್ರೀಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪಪೂರ ಕಾಲೇಜಿನಲ್ಲಿ ಪಠ್ಯಪೂರಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿನಿಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನ ಅಚ್ಚುಕಟ್ಟುತನ ವಿದ್ಯಾರ್ಥಿಗಳ ಶಿಸ್ತು ಉಪನ್ಯಾಸಕರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಜರುಗುತ್ತಾ ಇರುವುದು ನೋಡಿದರೆ ನನಗೆ ಸಂತಸ ತಂದಿದೆ. ಉಳಿದ ವಿದ್ಯಾರ್ಥಿಗಳಿಗೆ ಪ್ರೇರಣೆದಾಯಕವಾಗಲಿ. ಶಾಲೆಯ ಕೀರ್ತಿಯನ್ನು ಬೆಳಗಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಸ್ಪೂರ್ತಿದಾಯಕವಾಗಿದೆ. ತಂದೆ ತಾಯಿಗಳು ಮಾಡಿದ ಶ್ರಮಕ್ಕೆ, ದುಡಿಮೆಗೆ ಮಕ್ಕಳು ಮಾಡುವ ಸಾಧನೆ ಹೆಮ್ಮೆತರುವಂತಹದ್ದಾಗಿರಬೇಕು. ಸಮಾಜದಲ್ಲಿ ನಮ್ಮ ಮನೆತನದ ಸಂಸ್ಕೃತಿ, ನಾಗರೀಕತೆ ಬೆಳೆಯಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿ, ಪಾಠ ಕಲಿಸಿದ ಗುರುವಿಗೆ ಮೋಸ ಮಾಡಬಾರದು. ಯಾವಾಗಲೂ ವಿದ್ಯಾರ್ಥಿಗಳು ಅಕ್ಷಯ ಪಾತ್ರೆಯಂತಿರಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಂಸ್ಕಾರ ಸಂಸ್ಕೃತಿ, ಸಂಪ್ರದಾಯ,…

Read More

ಸಿಂದಗಿ: ಕನಕದಾಸರ ಸಾಹಿತ್ಯ ಶ್ರೇಷ್ಠವಾದುದ್ದು ಮತ್ತು ಅದರಲ್ಲಿ ಅತ್ಯಂತ ಮಹತ್ತರವಾದ ಸೃಜನಶೀಲತೆಯಿದೆ. ಆದರೆ ಇಂದಿನ ಸಮಾಜದಲ್ಲಿ ಅದರ ಬಗ್ಗೆ ಅಧ್ಯಯನವಾಗಲಿ, ಚರ್ಚೆಯಾಗಲಿ, ಚಿಂತನೆಯಾಗಲಿ ಮಾಡುತ್ತಿಲ್ಲ ಇದರಿಂದ ಆ ಸಾಹಿತ್ಯ ಸೊರಗುತಿದೆ ಎಂದು ಉಕ್ಕುಂಡಿ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ವಿಷಾದ ವ್ಯಕ್ತ ಪಡಿಸಿದರು.ಅವರು ಪಟ್ಟಣದ ಬಂದಾಳ ರಸ್ತೆಯಲ್ಲಿನ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಶ್ರೀ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಬೆಂಗಳೂರು ಮತ್ತು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಶ್ರೀಕನಕ ಸಾಹಿತ್ಯ ಸಂವತ್ಸರ ರಜತ ಉಪನ್ಯಾಸ ಹಾಗೂ ರಕ್ಷಿಸು ನಮ್ಮನ್ನು ಅನವರತ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ನಾನು, ನನ್ನಿಂದಲೇ ಎಂಬ ಭಾವನೆ ಮೇಳೈಸುತ್ತಿದ್ದು, ನಾನು ಎಂಬ ಅಹಂ ತೊಲಗಿ ಆ ಜಾಗದಲ್ಲಿ ನಾವು ಎಂಬ ಭಾವನೆ ಬೆಳೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಆ ಆದರ್ಶ ಅನುಷ್ಠಾನವಾಗಬೇಕಾದರೆ ಕನಕದಾಸರ ಸಾಹಿತ್ಯ ಅತ್ಯಂತ ಪ್ರಸ್ತುತ ಎಂದರು.ಕಾರ್ಯಕ್ರಮವನ್ನು ಪುರಸಭೆಯ ಮಾಜಿ…

Read More

ಸಿಂದಗಿ: ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನ ನಿವೃತ್ತ ದೈಹಿಕ ಉಪನ್ಯಾಸಕ ಕೆ.ಎಚ್. ಸೋಮಾಪೂರ ಬರೆದ ಬಯಕೆಗಳ ಬೆನ್ನೇರಿ ಕಾದಂಬರಿ ಹಾಗೂ ಬಳಗಾನೂರ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ, ಸಾಹಿತಿ ರಾಚೂ ಕೊಪ್ಪ ಸೀಸದ ಕಡ್ಡಿ ಕವನ ಸಂಕಲನಕ್ಕೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಡಣಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಸಿದ್ದಾರೆ.ಅಭಿನಂದನೆ: ಪಿಇಎಸ್ ಕಾಲೇಜಿನ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಐ.ಬಿ.ಬಿರಾದಾರ, ಪ್ರಾಚಾರ್ಯ ಜಿ.ಎಸ್.ಕಡಣಿ, ರವಿ ಗೋಡಕರ, ನಿವೃತ್ತ ಉಪನ್ಯಾಸಕ ಪಿ.ಎಂ.ಮಡಿವಾಳರ, ಎಸ್.ವಾಯ್.ಬೀಳಗಿ, ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಸಿದ್ದಲಿಂಗ ಕಿಣಗಿ, ಮಹಾಂತೇಶ ನೂಲಾನವರ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ೨೦೨೪-೨೫ನೆಯ ಸಾಲಿನ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆ, ಶಾಲಾ ಸಂಘಗಳ ಉದ್ಘಾಟನೆ ಸಿಂದಗಿ: ಪ್ರತಿ ಮಗುವನ್ನು ಕಲಿಕೆಯಲ್ಲಿ ತೊಡಗಿಸುವುದು. ಮಕ್ಕಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ನಿರಂತರ ಅಧ್ಯಯನ ಮಾಡಿ ಮಗುವನ್ನು ಧನಾತ್ಮಕವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಎಚ್.ಜಿ.ಪ್ರೌಢಶಾಲೆಯ ಮುಖ್ಯಗುರು ಎಸ್.ಬಿ.ಕುಲಕರ್ಣಿ ಹೇಳಿದರು.ಶನಿವಾರದಂದು ಪಟ್ಟಣದ ಹೊರವಲಯದ ರಾಂಪುರ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರಾಢಶಾಲೆಯಲ್ಲಿ ೨೦೨೪-೨೫ನೆಯ ಸಾಲಿನ ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆ, ಶಾಲಾ ಸಂಘಗಳ ಉದ್ಘಾಟನೆ ಹಾಗೂ ಶಾಲಾ ಸಂಸತ್ತು ಪದಾಧಿಕಾರಿಗಳ ಪ್ರತಿಜ್ಞಾವಿಧಿ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರ ಮಾರ್ಗದರ್ಶನದಲ್ಲಿ ಕಲಿಕೆಯನ್ನು ಮುಂದುವರಿಸಬೇಕು. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯ ಚಟುವಟಿಕೆಗಳೊಂದಿಗೆ ಇನ್ನಿತರ ಪಠ್ಯಪೂರಕ ಚಟುವಟಿಕೆಗಳೂ ಅಗತ್ಯ. ಸಂಸ್ಥೆಯ ಅಧ್ಯಕ್ಷ ಆರ್.ಡಿ. ಕುಲಕರ್ಣಿ, ಆಡಳಿತ ಮಂಡಳಿ ಹಾಗೂ ಮುಖ್ಯಗುರುಗಳು, ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹೀಗಾಗಿಯೇ…

Read More

ಇಂಡಿ:‌ ಪಟ್ಟಣದಲ್ಲಿ ಮಕ್ಕಳ ಸಾಹಿತ್ಯ ಸಂಗಮ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಅಗಸ್ಟ್ 6 ಮಧ್ಯಾಹ್ನ 2:30 ಕ್ಕೆ ರಮಾಬಾಯಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯುತ್ತಿದೆ ಎಂದು ಮಕ್ಕಳ ಸಾಹಿತ್ಯ ಸಂಗಮ ತಾಲೂಕು ಘಟಕದ ನೂತನ ಅಧ್ಯಕ್ಷ, ಉಪನ್ಯಾಸಕ ಸದಾನಂದ ಈರನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ದಿವ್ಯ ಸಾನಿಧ್ಯೆ ಪ.ಪೂ ಡಾ.ಸ್ವರೂಪನಾಂದ ಸ್ವಾಮೀಜಿ, ಅಧ್ಯಕ್ಷತೆ ಸುಖದೇವ ಮೂರಮನ, ಉದ್ಘಾಟನೆ ಹ.ಮ. ಪೂಜಾರಿ, ಮುಖ್ಯ ಅತಿಥಿ ಎ ಆರ್ ಹೆಗ್ಗನದೊಡ್ಡಿ, ಎಸ್ ಎಸ್ ಸಾತಿಹಾಳ, ಎನ್ ಎಮ್ ಕಾಳೆ, ಡಿ ಎನ್ ಅಕ್ಕಿ, ಆಯ್ ಬಿ ಸುರಪುರ, ಎ ಬಿ ಪಾಟೀಲ, ರಾಘವೇಂದ್ರ ಕುಲಕರ್ಣಿ, ಖಾಜು ಸಿಂಗೆಗೋಳ ಉಪಸ್ಥಿತರಿರುವರು ಎಂದು ತಿಳಿಸಿದರು. ಹಾಗಾಗಿ ಸಾಹಿತ್ಯ ಅಭಿರುಚಿ, ಆಸಕ್ತಿವುಳ್ಳ ಅಭಿಮಾನಿಗಳು ಅದಲ್ಲದೇ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿಸುವುದರ ಜೊತೆಗೆ ಸಾಹಿತ್ಯ ಸಂಗಮ‌ ಕಟ್ಟೊಣ ಬನ್ನಿ ಎಂದು ಮನವಿ ಮಾಡಿಕೊಂಡರು.

Read More

ಸಿಂದಗಿ: ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ವಿಜಯಪುರ, ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಪಪೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ೨೦೨೪-೨೫ನೆಯ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಅ.೦೬ರಂದು ಬೆಳಿಗ್ಗೆ ೯ಗಂಟೆಗೆ ಆರ್.ಬಿ.ಬೂದಿಹಾಳ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ ಎಂದು ಸಂಯೋಜಕ, ಪ್ರಾಚಾರ್ಯ ಎಮ್,ಎಸ್.ಹೈಯಾಳಕರ ತಿಳಸಿದ್ದಾರೆ.ಉದ್ಘಾಟನಾ ಸಮಾರಂಭದ ಪಾವನ ಸಾನಿಧ್ಯವನ್ನು ಸಾರಂಗಮಠದ ಡಾ,ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಶಾಸಕ ಅಶೋಕ ಮನಗೂಳಿ ನೇರವೇರಿಸುವರು. ಅತಿಥಿಗಳಾಗಿ ವಿಜಯಪುರ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ಉಪ ನಿರ್ದೇಶಕ ಡಾ.ಸಿ.ಕೆ.ಹೊಸಮನಿ, ಅಧ್ಯಕ್ಷತೆಯನ್ನು ಪ್ರಾಚಾರ್ಯ ಎಮ್,ಎಸ್.ಹೈಯಾಳಕರ ವಹಿಸುವರು. ಸಾಯಂಕಾಲ ೪ಗಂಟೆಗೆ ಪಾರಿತೋಷಕ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪಾವನ ಸಾನಿಧ್ಯವನ್ನು ಸಾರಂಗಮಠದ ಡಾ,ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳುವರು. ಸಿಂದಗಿ ಪಿಎಸ್‌ಐ ಆರೀಫ್ ಮುಷಾಪುರಿ ಪಾರಿತೋಷಕ ವಿತರಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಎಮ್,ಎಸ್.ಹೈಯಾಳಕರ ವಹಿಸುವರು. ಅತಿಥಿಗಳಾಗಿ ಆರ್.ಡಿ.ಪಾಟೀಲ ಕಾಲೇಜನ ನಿವೃತ್ತ ಶಿಕ್ಷಕ ಕೆ.ಹೆಚ್.ಸೋಮಾಪೂರ, ಜಿ.ಪಿ.ಪೋರವಾಲ ಹಾಗೂ ವ್ಹಿ.ವ್ಹಿ.ಸಾಲಿಮಠ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿ ಗೋಲಾ ಇರಲಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿ ದೈಹಿಕ…

Read More