ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಸೋಮವಾರ ಸಂಜೆ ಶ್ರಾವಣ ಮಾಸದಂಗವಾಗಿ ಹತ್ತರಕಿಹಾಳ, ಮುದ್ದೇಬಿಹಾಳ, ಕಗ್ಗೋಡ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು ೬೦-೭೦ ಯುವ ಭಕ್ತರು ಶ್ರಾವಣ ಮಾಸದಂಗವಾಗಿ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಶರಣ ದೀಕ್ಷೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸ ಬಹಳ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಶರಣ ದೀಕ್ಷೆ ಪಡೆದುಕೊಂಡ ಯುವಕರು ಯಾವುದೇ ದುಶ್ಚಟಗಳನ್ನು ಮಾಡಬಾರದು. ತಮ್ಮ ಕಾಯಕದೊಂದಿಗೆ ಸದಾ ಶಿವನಾಮಸ್ಮರಣೆ ಮಾಡುತ್ತಾ ಗುರುವಿನ ಸೇವೆ ಮಾಡಬೇಕು. ಪ್ರತಿನಿತ್ಯ ಬೆಳಗ್ಗೆ, ಸಂಜೆ ಸ್ನಾನಾದಿ ಮಾಡಿಕೊಂಡು ಲಿಂಗಪೂಜೆ ಮಾಡಿಕೊಳ್ಳಬೇಕು. ತಮ್ಮ ಜೀವನವನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿಕೊಳ್ಳಬೇಕು. ನೀವು ಸನ್ಮಾರ್ಗದಲ್ಲಿ ನಡೆಯಲು ಶರಣ ದೀಕ್ಷೆ ಪಡೆದುಕೊಂಡಿದ್ದು ಶ್ಲಾಘನೀಯ. ನಿಮಗೆ ಭಗವಂತನ ಕೃಪಾಶೀರ್ವಾದ ಸದಾ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಶರಣಯ್ಯ ಮಠಪತಿ, ಸಂತೋಷ ಕೊಟ್ಲಿಪ್ರಭು ಹಾದಿಮನಿ, ವಿರೇಶ ಉಣ್ಣಿಭಾವಿ, ಶಂಕರ ಕವಾಡಗಿ, ದುಂಡು ನರಲೆ, ಶೇಖು ಹಾವಿನಾಳ, ಸಂಗು ಹುಕ್ಕೇರಿ, ಶರಣು ಮುಕಾರ್ತಿಹಾಳ, ಶ್ರೀಶೈಲ ಕೊಟ್ಲಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

