ಸಿಂದಗಿ: ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನ ನಿವೃತ್ತ ದೈಹಿಕ ಉಪನ್ಯಾಸಕ ಕೆ.ಎಚ್. ಸೋಮಾಪೂರ ಬರೆದ ಬಯಕೆಗಳ ಬೆನ್ನೇರಿ ಕಾದಂಬರಿ ಹಾಗೂ ಬಳಗಾನೂರ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ, ಸಾಹಿತಿ ರಾಚೂ ಕೊಪ್ಪ ಸೀಸದ ಕಡ್ಡಿ ಕವನ ಸಂಕಲನಕ್ಕೆ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕಡಣಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಸಿದ್ದಾರೆ.
ಅಭಿನಂದನೆ: ಪಿಇಎಸ್ ಕಾಲೇಜಿನ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಐ.ಬಿ.ಬಿರಾದಾರ, ಪ್ರಾಚಾರ್ಯ ಜಿ.ಎಸ್.ಕಡಣಿ, ರವಿ ಗೋಡಕರ, ನಿವೃತ್ತ ಉಪನ್ಯಾಸಕ ಪಿ.ಎಂ.ಮಡಿವಾಳರ, ಎಸ್.ವಾಯ್.ಬೀಳಗಿ, ಕಾನಿಪ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಸಿದ್ದಲಿಂಗ ಕಿಣಗಿ, ಮಹಾಂತೇಶ ನೂಲಾನವರ ಹರ್ಷ ವ್ಯಕ್ತಪಡಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಬಯಕೆಗಳ ಬೆನ್ನೇರಿ & ಸೀಸದ ಕಡ್ಡಿ ಕೃತಿಗಳಿಗೆ ಜಿಲ್ಲಾ ದತ್ತಿ ಪ್ರಶಸ್ತಿ
Related Posts
Add A Comment

