ಇಂಡಿ: ಪಟ್ಟಣದಲ್ಲಿ ಮಕ್ಕಳ ಸಾಹಿತ್ಯ ಸಂಗಮ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಅಗಸ್ಟ್ 6 ಮಧ್ಯಾಹ್ನ 2:30 ಕ್ಕೆ ರಮಾಬಾಯಿ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯುತ್ತಿದೆ ಎಂದು ಮಕ್ಕಳ ಸಾಹಿತ್ಯ ಸಂಗಮ ತಾಲೂಕು ಘಟಕದ ನೂತನ ಅಧ್ಯಕ್ಷ, ಉಪನ್ಯಾಸಕ ಸದಾನಂದ ಈರನಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿವ್ಯ ಸಾನಿಧ್ಯೆ ಪ.ಪೂ ಡಾ.ಸ್ವರೂಪನಾಂದ ಸ್ವಾಮೀಜಿ, ಅಧ್ಯಕ್ಷತೆ ಸುಖದೇವ ಮೂರಮನ, ಉದ್ಘಾಟನೆ ಹ.ಮ. ಪೂಜಾರಿ, ಮುಖ್ಯ ಅತಿಥಿ ಎ ಆರ್ ಹೆಗ್ಗನದೊಡ್ಡಿ, ಎಸ್ ಎಸ್ ಸಾತಿಹಾಳ, ಎನ್ ಎಮ್ ಕಾಳೆ, ಡಿ ಎನ್ ಅಕ್ಕಿ, ಆಯ್ ಬಿ ಸುರಪುರ, ಎ ಬಿ ಪಾಟೀಲ, ರಾಘವೇಂದ್ರ ಕುಲಕರ್ಣಿ, ಖಾಜು ಸಿಂಗೆಗೋಳ ಉಪಸ್ಥಿತರಿರುವರು ಎಂದು ತಿಳಿಸಿದರು. ಹಾಗಾಗಿ ಸಾಹಿತ್ಯ ಅಭಿರುಚಿ, ಆಸಕ್ತಿವುಳ್ಳ ಅಭಿಮಾನಿಗಳು ಅದಲ್ಲದೇ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮ ಯಶಸ್ವಿಗೊಳಿಸಿಸುವುದರ ಜೊತೆಗೆ ಸಾಹಿತ್ಯ ಸಂಗಮ ಕಟ್ಟೊಣ ಬನ್ನಿ ಎಂದು ಮನವಿ ಮಾಡಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment
