ಮುದ್ದೇಬಿಹಾಳ: ಮೂಡಾ ಹಗರಣದ ಹಿನ್ನೆಲೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ನೀಡಿದ ಮೆಟಾ ಸನ್ ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲೆಯ ಅಹಿಂದ ಒಕ್ಕೂಟದಿಂದ ಆ.೬ ರಂದು ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸುತ್ತಿದ್ದು ಈ ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲ ಅಹಿಂದ ಒಕ್ಕೂಟದವರು ಭಾಗಿಯಾಗುವಂತೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ ಮನವಿ ಮಾಡಿಕೊಂಡರು.
ಪಟ್ಟಣದ ಖಾಸಗಿ ಹೋಟಲವೊಂದರಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ನೊಟೀಸಿನ ಕುರಿತು ರಾಜ್ಯಪಾಲರೇನಾದರೂ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಇಡೀ ರಾಜ್ಯದಲ್ಲಿ ಅಲ್ಲೋಲ-ಕಲ್ಲೋಲವಾಗಲಿದೆ. ಮುಖ್ಯ ಮಂತ್ರಿಗಳ ಏಳ್ಗೆಯನ್ನು ಸಹಿಸಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ನವರ ಪಾದಯಾತ್ರೆ ಷಡ್ಯಂತ್ರದಿಂದ ಕೂಡಿದೆ. ಹಾಗಾಗಿ ಎಲ್ಲ ಅಹಿಂದ ಒಕ್ಕೂಟದವರು ಹೆಚ್ವಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದರು.
ಪಿಎಲ್‌ಡಿ ಬ್ಯಾಂಕ ಅಧ್ಯಕ್ಷ ಬಿ.ಕೆ.ಬಿರಾದಾರ,
ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ಕಾಂಗ್ರೇಸ್ ಮುಖಂಡ ದಾದಾ ಎತ್ತಿಮನಿ, ಸಂತೋಷ ನಾಯ್ಕೋಡಿ ಮತ್ತೀತರರು ಮಾತನಾಡಿ, ನಿಷ್ಕಳಂಕ ರಾಜಕಾರಣಿಯಾಗಿರುವ ಸಿದ್ಧರಾಮಯ್ಯನವರ ಮೇಲೆ ಹೊರಿಸಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಅವರಿಗೆ ರಾಜ್ಯಪಾಲರು ನೀಡಿರುವ ನೊಟೀಸನ್ನು ಕೂಡಲೇ ಹಿಂಪಡೆಯಬೇಕು. ಇಲ್ದಿದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳುವದಾಗಿ ತಿಳಿಸಿದರು..
ಈ ವೇಳೆ ಬಿ.ಎಸ್.ಶಿರೋಳ, ಹಣಮಂತ ಮೇಟಿ, ಬಾಬಾ ಯಕೀನ, ಸಂಗಣ್ಣ ಮೇಲಿನಮನಿ, ಮುನ್ನಾ ಸಗರ, ಎಸ್.ಕೆ.ಹಳೇಮನಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

