Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ನಗರದ ಗಾಂಧಿ ವೃತ್ತದ ರೇಡಿಯೋ ಮೈದಾನದಲ್ಲಿ ನಿರ್ಮಾಣಗೊಂಡ ಹೊಸ ಸಾರ್ವಜನಿಕ ಗ್ರಂಥಾಲಯಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.ನಿರ್ಮಿತಿ ಕೇಂದ್ರದ ವತಿಯಿಂದ ಸುಮಾರು ೯೦.೫ ಲಕ್ಷ ರೂಗಳಲ್ಲಿ ನಿರ್ಮಾಣಗೊಂಡ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ, ಮಕ್ಕಳಿಗೆ ಕಲ್ಪಿಸಿರುವ ಆಸನಗಳ ವ್ಯವಸ್ಥೆ ವಿಕ್ಷೀಸಿದರು.ಚುನಾವಣಾ ನೀತಿ ಸಂಹಿತೆ ಮುಗಿದ ಮೇಲೆ ಆದಷ್ಟು ಬೇಗ ಕಟ್ಟಡವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು ಎಂದು ಸೂಚನೆ ನೀಡಿದರು.ಈ ವೇಳೆ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಅಜಯಕುಮಾರ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.ಈ ವೇಳೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯಪುರ: ನಗರದ ಮನಗೂಳಿ ಅಗಸಿಯ ಎಸ್ಸಿ ಕಾಲೋನಿಗೆ ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂ ಭಾಲನ ಅವರು ಭೇಟಿ ನೀಡಿ ಪರಿಶಿಲಿಸಿ, ಅಲ್ಲಿನ ಎರಡು ಸಮುದಾಯದ ನಡುವೆ ಇರುವ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ, ಸಮಾಜ ಕಲ್ಯಾಣ ಇಲಾಖೆಯು ಉಪನಿರ್ದೇಶಕ ಪುಂಡಲೀಕ ಮಾನ್ವರ, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರುಡಗಿ ಇದ್ದರು
ಚಡಚಣ: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ನಂ-೨ ಮರಡಿ ಶಾಲೆಯಲ್ಲಿ 2024- 25 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಗುರುಗಳಾದ ಮಹಾಂತೇಶ ಉಮರಾಣಿಯವರು ವಹಿಸಿದ್ದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಕ ಬಸವರಾಜ ಕರಜಗಿ ಅವರು ನಮ್ಮ ಸರ್ಕಾರಿ ಶಾಲೆಯಲ್ಲಿ ದೊರೆಯುವ ಎಲ್ಲ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನದ ಮೂಲಕ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.ಶಿಕ್ಷಕ ಜಗದೀಶ ಚಲವಾದಿ ಮಾತನಾಡಿ, ಈ ವರ್ಷದ ಧ್ಯೇಯ ವಾಕ್ಯ ಶೈಕ್ಷಣಿಕ ಬಲವರ್ಧನೆಯ ಮೂಲಕ ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ ಸಾಮರ್ಥ್ಯವನ್ನು ಬೆಳೆಸುವುದು. ಮಕ್ಕಳಿಗೆ ಪಠ್ಯೇತರ ಚಟುವಟಿಗಳ ಮೂಲಕ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲಾಗುವುದೆಂದು ತಿಳಿಸಿದರು.ಮಕ್ಕಳ ಪೌಷ್ಟಿಕಾಂಶ ಕೊರತೆ ನೀಗಿಸಲು ಮೊಟ್ಟೆ, ಬಾಳೆಹಣ್ಣು, ಶೇಂಗಾ ಚೆಕ್ಕಿ ವಿತರಿಸಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಸುಧೀರ್ಘವಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಿದ ಶ್ರೀಮತಿ ರೇಣುಕಾ ಗೌರ ಗುರುಮಾತೆಯರಿಗೆ…
ವಿಜಯಪುರ: ನಗರದ ಮರಾಠಿ ವಿದ್ಯಾಲಯ 80 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಶಾಲೆಯಲ್ಲಿ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ನಗರದ ಮರಾಠಿ ಪ್ರಾಥಮಿಕ ಶಾಲೆಗಳಾದ ಶಿವಾಜಿ ಮರಾಠಿ ಶಾಲೆ, ಪಂಚಮಿತ್ರ ಮತ್ತು ದರ್ಬಾರ್ (ಬಡಿಕಾಮನ್) ಗಳನ್ನು ಆಹ್ವಾನಿಸಿ ಕೃತಜ್ಞತಾ ಕಾರ್ಯಕ್ರಮವನ್ನು ಪ್ರಥಮವಾಗಿ ಶಾಲೆಯ ವಜೆ ಸಭಾಂಗಣದಲ್ಲಿ ನಡೆಸಲಾಯಿತುಶಾಲೆಯ ಪ್ರಾಂಶುಪಾಲರಾದ ಶ್ರೀ.ಪ.ಜೋಶಿ ಮತ್ತು ಮೊದಲ ವಿದ್ಯಾರ್ಥಿ ಕಮಲಾಕರ್ ಮುದ್ಕವಿ ಅವರನ್ನು ಸ್ಮರಿಸಲಾಯಿತು.ವೇತನವಿಲ್ಲದೆ ದುಡಿದ ಅಂದಿನ ಶಿಕ್ಷಕರು, ಡೊನೇಷನ್ ಇಲ್ಲದೇ ನೇಮಕ ಮಾಡಿಕೊಂಡ ಸಂಸ್ಥೆಯ ಚಾಲಕರು ಹಾಗೂ ಶಾಲೆಯ ಯಾವುದೇ ಕೆಲಸ ಮಾಡಿದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.ಇಂತಹ ಚಾರಿಟಬಲ್ ಮರಾಠಿ ಮಾಧ್ಯಮ ಶಾಲೆಗಳ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ.. ಇದು ನಮ್ಮ ಅದೃಷ್ಟ ಎಂದು ಶಿಕ್ಷಕರು ತಮ್ಮ ಭಾವನೆ ವ್ಯಕ್ತಪಡಿಸಿದರು. ಮರಾಠಿ ಮಾಧ್ಯಮದ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯದಿಂದ ಹೃದಯ, ಮನಸ್ಸು ಮತ್ತು ಹಣದಿಂದ ಕೆಲಸ ಮಾಡಲು ನಿರ್ಧರಿಸಲಾಯಿತು. ಶಿಕ್ಷಣ ಪ್ರಸಾರಕ ಮಂಡಳಿಯ ಹಾಲಿ ಅಧ್ಯಕ್ಷ ಡಾ.ವಾಟ್ವೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕಿ ಹಿರೇಮಠ ಬಾಯಿ ಅಧ್ಯಕ್ಷತೆ ವಹಿಸಿದ್ದರು. ವಿ.ಪಾಟೀಲ್ ಸಂಚಾಲಕರಾಗಿದ್ದರು. ಶ್ರೀಮತಿ ಹಿಬಾರೆ ಧನ್ಯವಾದವಿತ್ತರು.
ಆಲಮೇಲ: ದೈಹಿಕ ಆರೋಗ್ಯಕ್ಕೆ ಯೋಗ, ಮಾನಸಿಕ ಆರೋಗ್ಯಕ್ಕೆ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನ, ಇವುಗಳಿಂದ ಆರೋಗ್ಯಯುತ ದೀರ್ಘಾಯುಷ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಯೋಗೋತ್ಸವ ಸಮಿತಿಯ ಮುಖ್ಯಸ್ಥ ಡಾ.ಶ್ರೀಶೈಲ ಪಾಟೀಲ ಹೇಳಿದರು.ಆಲಮೇಲ ಪಟ್ಟಣದ ಅಳ್ಳೊಳ್ಳಿ ಹಿರೇಮಠದಲ್ಲಿ ಮಹಿಳಾ ಶಿಬಿರಾರ್ಥಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಜೂನ್ 2 ರಿಂದ 21 ದಿನಗಳ ಪರ್ಯಂತರ ಜರುಗಲಿರುವ ಉಚಿತ ಯೋಗ ಶಿಬಿರ ಹಾಗೂ ಭಜನೆ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ಹಿಮಾಲಯದಲ್ಲಿ ಯೋಗ ಸಾಧನೆ ಮಾಡಿರುವ ಯೋಗ ಗುರು ಪರಮಪೂಜ್ಯ ನಿರಂಜನ ಶ್ರೀಗಳು ನಡೆಸಿಕೊಡಲಿದ್ದು ತಾವೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡರು.ಸಭೆಯಲ್ಲಿ ಶ್ರೀಶೈಲಯ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಲಕ್ಷ್ಮಿ ಗುಣಾರಿ, ಕಾವೇರಿ ಅವರಾದಿ, ನಿರ್ಮಲ ಭಾವಿಕಟ್ಟಿ, ನೀಲೇಶಾ, ಕಾಂಚನ ಘಟಕದೊಂಡ್, ಸುರೇಖಾ ಸಾಲಕ್ಕಿ, ಗಂಗೂಬಾಯಿ ಅಮಲ್ಜೇರಿ, ಅಶ್ವಿನಿ ಹೂಗಾರ, ವರದಾ ಉಪ್ಪಿನ, ಶ್ರೀಶೈಲ ಮಠಪತಿ, ಸಿದ್ದಲಿಂಗ ಗುಂದಗಿ, ಸುನಿಲ್ ನಾರಾಯಣಕರ, ಹಾಗೂ ಶಿವಶರಣ ಗುಂದಗಿ ಉಪಸ್ಥಿತರಿದ್ದರು.
ವಿಜಯಪುರ: ನಗರದಲ್ಲಿ ರಾಜಮಾತಾ ಅಹಲ್ಯಾಬಾಯಿ ಹೋಳ್ಕರ್ ೩೦೦ನೇ ಜಯಂತಿ ಅಂಗವಾಗಿ ಮಂಥನ ವಿಜಯಪುರ ಚಿಂತಕರ ಚಾವಡಿಯ ವತಿಯಿಂದ ವೀರ್ ಸಾವರ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಂಥನ ಸದಸ್ಯರಾದ ಈ ಸಂದರ್ಭದಲ್ಲಿ ಮಂಥನ ಸದಸ್ಯರಾದ ರಘೂತ್ತಮ ಅರ್ಜುಣಗಿ, ಸಂತೋಷ ಕಳ್ಳಿಗುಡ್ಡ, ಮನೀಷಾ ಕುಲಕರ್ಣಿ, ಶ್ರೀರಂಗ ಪುರಾಣಿಕ, ಸುರೇಶ್ ಕುಲಕರ್ಣಿ, ಲಕ್ಷ್ಮಿ ಪಟ್ಟಣಶೆಟ್ಟಿ, ಬಿಜೆ ಪುರಾಣಿಕ, ಆನಂದ ಕುಲಕರ್ಣಿ ಇನ್ನಿತರರು ಉಪಸ್ಥಿತರಿದ್ದರು.
ವಿಜಯಪುರ: ಎಸ್ಎಸ್ಎಲ್ಸಿ, ಪಿಯುಸಿ.ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದೇನು ಮಾಡುವುದು ಎಂಬ ಯಕ್ಷಪ್ರಶ್ನೆ ಕಾಡುತ್ತಿರುತ್ತದೆ. ಅವರಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಅತ್ಯಗತ್ಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಯಲ್ಲಪ್ಪ ಈರಕಲ್ ನುಡಿದರು.ನಗರದ ಆಶ್ರಮ ರಸ್ತೆಯ ಶ್ರೀ ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ‘ಬದಲಾವಣೆಯ ಹರಿಕಾರರಿಗೆ ಸಮಗ್ರ ವೃತ್ತಿ ಮಾರ್ಗದರ್ಶನ ತರಬೇತಿ’ ಕಾರ್ಯಕ್ರಮವನ್ನು ಜ್ಯೋತಿ ಪಜ್ವಲಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ತಂದೆ ತಾಯಿ ಪೋಷಕರು ಸರಕಾರಿ ನೌಕರಿ ಒಂದನ್ನೇ ಜೀವನದ ಉದ್ದೇಶ ಎಂದು ಭಾವಿಸದೇ ಜೀವನದಲ್ಲಿ ಅನೇಕ ವೃತ್ತಿ ಕೌಶಲ್ಯತೆ ಬೆಳೆಸಿಕೊಂಡು ಉತ್ತಮ ಜೀವನ ಸಾಗಿಸಬಹದು ಎಂಬುದನ್ನು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬದುಕಿನ ಸುವರ್ಣ ಕಾಲ. ಎಲ್ಲರೂ ಸರಕಾರಿ ನೌಕರಿಯ ಆಸೆ ಪಡದೆ ವಿವಿಧ ಕ್ಷೇತ್ರಗಳ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಸೇವಕ ಸಂಸ್ಥೆಯ ಸಂಯೋಜಕಿ…
ವಿಜಯಪುರ: ಶಿವಣಗಿ ಕ್ಲಸ್ಟರನ ಎಂ.ಪಿ.ಎಸ್ ಶಿವಣಗಿ ಶಾಲೆಯಲ್ಲಿ ವಿಜಯಪುರ ಗ್ರಾಮೀಣ ವಲಯದ ತಾಲ್ಲೂಕು ಹಂತದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶುಕ್ರವಾರ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೋಸಲಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಶಾಲಾ ಪ್ರಾರಂಭೋತ್ಸವ ಕುರಿತು ಮಾತನಾಡಿದ ಅವರು ಈಗಾಗಲೇ ಹಿಂದಿನ ಎರಡು ದಿನ ಶಾಲಾ ಸ್ವಚ್ಛತೆಯ ಕಾರ್ಯ ಮುಗಿದಿದ್ದು ಇಂದಿನಿಂದ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತವೆ. ಶಾಲಾ ಕ್ರೋಢಿಕೃತ ವೇಳಾಪಟ್ಟಿ, ಅಂದಾಜು ಪತ್ರಿಕೆ, ತರಗತಿವಾರು ವೇಳಾಪತ್ರಿಕೆಗಳನ್ನು ತಯಾರು ಮಾಡಿಕೊಂಡು ಆರಂಭಿಕ ಚಟುವಟಿಕೆಗಳಾದ ನೈದಾನಿಕ ಪರೀಕ್ಷೆಯನ್ನು ತೆಗೆದುಕೊಂಡು ವಿಷಯವಾರು ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಿ ಸಾಪಲ್ಯ ಪರೀಕ್ಷೆ ಮಾಡುವುದು. ಮನೆ ಮನೆ ಭೇಟಿ ನೀಡಿ ಯಾವುದೆ ಅರ್ಹ ಮಗು ಶಾಲಾ ದಾಖಲಾತಿಯಿಂದ ಹೊರಗುಳಿಯದಂತೆ ದಾಖಲಿಕರಣ ಮಾಡಿಕೊಳ್ಳಲು ತಿಳಿಸಿದರು.ವರ್ಗವಾರು,ವಿಷಯವಾರು ಕಲಿಕಾ ಫಲಗಳನ್ನು ಗುರುತಿಸಿ, ಪಟ್ಟಿಮಾಡಿ ಅದಕ್ಕೆ ಅನುಗುಣವಾಗಿ ನಿರಂತರ ಬೋಧನೆಯಲ್ಲಿ ತೊಡಗಿ ಮಕ್ಕಳ ಕಲಿಕಾ ಮಟ್ಟವನ್ನು ನಿಂತರವಾಗಿ ಸುಧಾರಿಸಲು ತಿಳಿಸಿದರು. ಪ್ರಸಕ್ತ ಶೈಕ್ಷಣಿಕ…
ಕಲಕೇರಿ: ಸಮೀಪದ ಬಿಂಜಲಭಾವಿ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಡಿ.ಎನ್.ಚಿಕ್ಕಮಠ ಅವರ ನೇತೃತ್ವದಲ್ಲಿ ಶಾಲೆಯನ್ನು ಶುಚಿಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಿ ಮುದ್ದು ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಹೂಗುಚ್ಚ ನೀಡುವ ಮೂಲಕ ಶಿಕ್ಷಣ ಪ್ರೇಮಿಗಳು, ಪಾಲಕರು-ಪೋಷಕರು ಮತ್ತು ಶಿಕ್ಷಕ ಬಳಗದವರು ಪ್ರೀತಿಪೂರ್ವಕವಾಗಿ ಸ್ವಾಗತ ಮಾಡಿಕೊಂಡರು.
