ವಿಜಯಪುರ: ಆ.೫ ರಿಂದ ಜಾರಿಯಾಗುವಂತೆ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡರ ಆದೇಶದಂತೆ ರಾಜ್ಯ ಉಪಾಧ್ಯಕ್ಷ ಎಂ ಸಿ ಮುಲ್ಲಾರವರ ನಿರ್ದೇಶನದಂತೆ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು, ಎಲ್ಲ ತಾಲೂಕಾ ಅಧ್ಯಕ್ಷರುಗಳು, ನಗರ ಘಟಕದ ಅಧ್ಯಕ್ಷರುಗಳು ಹಾಗೂ ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರುಗಳನ್ನು ತುರ್ತಾಗಿ ಇಂದೆ ವಿಸರ್ಜನೆ ಮಾಡಿ ಆದೇಶ ಹೊರಡಿಸಿದೆ ಎಂದು ಕರವೇ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಎಲ್ಲ ಸಮಿತಿಗಳ ವಿಸರ್ಜನೆಯ ನಂತರ ರಾಜ್ಯ ಸಮಿತಿಯು ಶೀಘ್ರವಾಗಿ ಜಿಲ್ಲಾ ಸಮಿತಿಯನ್ನು ಪುನರಚನೆ ಮಾಡಲಾಗುವದೆಂದು ರಾಜ್ಯಾಧ್ಯಕ್ಷರು ಆದೇಶ ಮಾಡಿದ್ದಾರೆ. ಸಮಿತಿಯ ವಿಸರ್ಜನೆಯ ನಂತರ ಯಾವುದೇ ಹುದ್ದೆಗಳನ್ನು ಉಪಯೋಗಿಸಬಾರದೆಂದು ಕೋರಿದೆ ಮುಂದಿನ ಆದೇಶದವರಗೆ ಎಲ್ಲರೂ ಸಹಕರಿಸಬೇಕೆಂದು ಮುಳಜಿ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
