ಸಿಂದಗಿಯಲ್ಲಿ ತಾಲೂಕು ಮಟ್ಟದ ಪಪೂ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟ
ಸಿಂದಗಿ: ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕಾದರೆ ಕ್ರೀಡಾ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯೊಂದಿಗೆ ಭಾಗವಹಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಆರ್.ಬಿ.ಬೂದಿಹಾಳ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ ವಿಜಯಪುರ, ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಪಪೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ೨೦೨೪-೨೫ನೆಯ ಸಾಲಿನ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದ ಓಲಂಪಿಕ್ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಬದುಕನ್ನು ಕೂಡಾ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಯಾವುದೇ ಕಾರ್ಯನಿರ್ವಹಿಸಬೇಕಾದರೆ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಬಹಳ ಮುಖ್ಯ. ಮಕ್ಕಳು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಗುರಿ ಹೊಂದಿ ಇತರರಿಗೆ ಮಾದರಿಯಾಗಬೇಕು ಎಂದರು.
ಈ ವೇಳೆ ಆರ್.ಡಿ.ಪಾಟೀಲ ಕಾಲೇಜನ ನಿವೃತ್ತ ಶಿಕ್ಷಕ ಕೆ.ಹೆಚ್.ಸೋಮಾಪೂರ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ವೈದ್ಯ, ಇಂಜನಿಯರ್, ವಕೀಲರಾಗಬೇಕು ಎಂದು ಆಸೆ ಇಟ್ಟುಕೊಳ್ಳುವಂತೆ ಆಸೆ ಪಡುವಂತೆ ಉತ್ತಮ ಕ್ರೀಡಾಪಟುಗಳಾಗಬೇಕು. ರಾಷ್ಟç ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದರು ಸಲಹೆ ನೀಡಿದರು.
ಕಾರ್ಯಕ್ರಮದ ಪಾವನ ಸಾನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀರ್ವಚನ ದಯಪಾಲಿಸಿದರು. ಪ್ರಾಚಾರ್ಯ ಎಮ್,ಎಸ್.ಹೈಯಾಳಕರ ಅಧ್ಯಕ್ಷೀಯ ನುಡಿಗಳನ್ನಾಡಿದರು. ಎಮ್‌ಪಿಎಸ್ ಮಾಡಬಾಳ ಸರಕಾರಿ ಶಾಲೆಯ ದೈಹಿಕ ಶಿಕ್ಷಕ ಸಂಗು ಮಲ್ಲೇದ ಪ್ರತಿಜ್ಞಾವಿಧಿ ಬೋಧಿಸಿದರು.
ತಾಲೂಕು ಮಟ್ಟದ ಕ್ರೀಡೆಗಳಲ್ಲಿ ತಾಲೂಕಿನ ವಿವಿಧ ಪಪೂ ಕಾಲೇಜುಗಳು ಭಾಗವಹಿಸದ್ದರು. ವಿವಿಧ ಪಪೂ ಕಾಲೇಜಿನ ಬಾಲಕರು ಹಾಗೂ ಬಾಲಕಿಯರು ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡರು. ಸಮಗ್ರ ವೀರಾಗ್ರಣಿ ಪ್ರಶಸ್ತಿಯು ಶ್ರೀ ಪದ್ಮರಾಜ ಮಹಿಳಾ ಮತ್ತು ಆರ್.ಡಿ.ಪಾಟೀಲ ಕಾಲೇಜು ಮುಡಿಗೇರಿಸಿಕೊಂಡಿತು. ತಾಲೂಕಿನ ವಿವಿಧ ಸರಕಾರಿ ಶಾಲೆಯ ದೈಹಿಕ ಶಿಕ್ಷಕರು ನಿರ್ಣಾಯಕರಾಗಿ ಆಗಮಿಸಿ ಆಟೋಟಗಳನ್ನು ಯಶಸ್ವಿಯಾಗಿ ನೇರವೇರಿಸಿಕೊಟ್ಟರು.
ಉಪನ್ಯಾಸಕ ಜಿ.ಎ.ನಂದಿಮಠ ಸ್ವಾಗತಿಸಿದರು. ವಿದ್ಯಾರ್ಥಿನಿ ವಿದ್ಯಾಶ್ರೀ ತಳವಾರ ಪ್ರಾರ್ಥಿಸಿದರು. ಆಸಿಫ್ ಕೋಕಣಿ ನಿರೂಪಿಸಿದರು. ಗವಿಸಿದ್ದಪ್ಪ ಆನೆಗುಂದಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಎಸ್.ಎಂ.ಪೂಜಾರಿ, ಬಿ.ಜಿ.ಅವಟಿ, ಎಸ್.ಎನ್.ಸಂಗಮ, ಆರ್.ಆರ್.ನಿಂಬಾಳಕರ, ಸತೀಶ ಬಸರಕೋಡ, ಈರಣ್ಣ ಪಡಶೆಟ್ಟಿ, ವಿಶ್ವನಾಥ ನಂದಿಕೋಲ, ಡಾ.ಶರಣಬಸವ ಜೋಗುರ, ನವೀನ ಶೆಳ್ಳಗಿ, ಜೆ.ಎಂ.ಗಾಣಗೇರ, ಗವಿಸಿದ್ದಪ್ಪ ಆನೆಗುಂದಿ, ಮೌಲಾಲಿ ಯಾಳಗಿ, ಎಸ್.ಎ.ಜಹಗೀರದಾರ, ಸಂಗು ಮಲ್ಲೇದ, ಎಸ್.ಎಸ್.ಮಲ್ಲೇದ, ಜಿ.ಪಿ.ಪೋರವಾಲ ಹಾಗೂ ವ್ಹಿ.ವ್ಹಿ.ಸಾಲಿಮಠ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿ ಗೋಲಾ, ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಮಹಾಂತೇಶ ನೂಲಾನವರ, ಯು.ಸಿ.ಪೂಜೇರಿ, ಎಂ.ಪಿ.ಸಾಗರ. ಜಿ.ಎ.ನಂದಿಮಠ, ಆರ್.ಎ.ಹಾಲಕೇರಿ, ಎಸ್.ಎಸ್.ಸಜ್ಜನ, ಜಿ.ಎಸ್. ಕುಲಕರ್ಣಿ, ಹೇಮಾ ಹಿರೇಮಠ, ಎಸ್.ಜಿ.ಮಾರ್ಸನಳ್ಳಿ, ಲಕ್ಷ್ಮೀ ಮಾರ್ಸನಳ್ಳಿ, ಹೇಮಾ ಕಾಸರ, ಲಕ್ಷ್ಮೀ ಭಜಂತ್ರಿ, ಶಿವಶಂಕರ ಕುಂಬಾರ, ಶ್ರೀಧರ ಮಲ್ಲೇದ, ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿನಿಯರು, ವಿವಿಧ ಪಪೂ ಕಾಲೇಜಿನ ಪ್ರಾಚಾರ್ಯರು, ದೈಹಿಕ ನಿರ್ದೇಶಕರು, ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

