ಇಂಡಿ: ನಗರದಲ್ಲಿ ವಿಶೇಷವಾಗಿ ಮಲೆನಾಡಿನ ಶೈಲಿಯ ಹಂಚಿನ ಮೇಲ್ಚಾವಣಿಯನ್ನು ಹೂಂದಿದ, ಪ್ರತ್ಯೇಕವಾಗಿ ನಾಗದೇವರ ದೇವಾಲಯ ನಿರ್ಮಾಣಗೋಂಡಿದ್ದು, ಇದು ಮೂರನೇ ವರ್ಷದ ಜಾತ್ರಾ ಮಹೋತ್ಸವ ಆ.9 ರಂದು ನಡೆಯುತ್ತದೆ ಎಂದು ಜಾತ್ರಾ ಆಡಳಿತ ಮಂಡಳಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಂದಗಿ ರಸ್ತೆಯ ಪದವಿ ಕಾಲೇಜು ಪಕ್ಕದ ಹಳೆಯ ಸಾಲೋಟಗಿ ರಸ್ತೆಯ ವಾರ್ಡ್ ನಂಬರ್ 12ರಲ್ಲಿ, ಪ್ರತಿವರ್ಷದಂತೆ ಈ ವರ್ಷವೂ ನಾಗರಪಂಚಮಿಯ ದಿನದಂದು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಆದಿಶೇಷನಿಗೆ ಮಹಾ ಅಭಿಷೇಕ, ಹೋಮ್ ಹವನ ಕಾರ್ಯಕ್ರಮ ನಡೆಯುತ್ತದೆ. ಬೆಳಗ್ಗೆ 7 ಘಂಟೆಯಿಂದಲೆ ಸುಮಂಗಲಿಯರಿಂದ ನಾಗ ದೇವರಿಗೆ ಹಾಲೇರಿಯುವ ಕಾರ್ಯಕ್ರಮ ನಡೆಯುತ್ತದೆ. ಆಗಮಿಸಿದ ಭಕ್ತರಿಗೆ ಅನ್ನಪ್ರಸಾದ ವಿತರಣೆ, ಸಾಯಂಕಾಲ ಭಜನಾ ಮಂಡಳಿಯಿಂದ ಗಾನಸುಧೆ ನಡೆಯುವುದು.
ನಗರದ ಸದ್ಬಕರು ಈ ಪೂಣ್ಯಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತರಾಗಬೇಕಾಗಿ, ಶ್ರೀ ಆದಿಶೇಷ ದೇವಸ್ಥಾನ ಜಾತ್ರಾ ಮಹೋತ್ಸವದ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Subscribe to Updates
Get the latest creative news from FooBar about art, design and business.
Related Posts
Add A Comment
