
ಇಂಡಿ: ಈ ಜನ್ಮವೇ ರೈತರಿಗಾಗಿ, ಕಾರ್ಮಿಕರಗಾಗಿ ಎಂದು ಅವಿರತವಾಗಿ ಹೋರಾಡಿದ ಭೀಮಶಿ ಕಲಾದಗಿ ಇಹಲೋಕ ತ್ಯಜಿಸಿದ್ದು ಮಂಗಳವಾರ ಸ್ವಗ್ರಾಮದಲ್ಲಿ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹಾಗೂ ಸಿಪಿಐ ಎಮ್ ಎಮ್ ಡಪ್ಪಿನ ಅವರ ನೇತೃತ್ವದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಿತು.
ನಿರಂತರವಾಗಿ 50 ವರ್ಷಗಳ ಕಾಲ ಹೋರಾಟವೆ ಬದುಕು ಎಂದು, ಬದುಕಿದ ಕಲಾದಗಿ ಮುತ್ಯಾ ಬರಿಗಾಲ ಭೀಮಶಿ ಎಂದು ಪ್ರಸಿದ್ಧಿ ಹೊಂದಿದ್ದ ಜಿಲ್ಲೆಯ ದಿಮಂತ ಹೋರಾಟಗಾರ ಎಂದು ಜನರಾಡುವ ಮಾತು. ತಾಲ್ಲೂಕಿನ ಹಂಜಗಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಯಿತು.
ಅವರ ಸಾವಿಗೆ ಅಪಾರ ಬಂಧು ಬಳಗ, ರಾಜಕೀಯ ಮುಖಂಡರು, ಗಣ್ಯರು, ಅವರು ಪ್ರೀತಿಸುವ ಕಾರ್ಮಿಕ ಬಳಗ ಕಂಬನಿ ಮಿಡಿದಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಶಿವಾನಂದ ಪಾಟೀಲ, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ದೇವಾನಂದ ಚೌವ್ಹಾಣ್, ಅಪ್ಪು ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಮಂಡಿಗೇರಿ, ಕಂ.ಕೆ.ನೀಲಾ, ಅಣ್ಣಾರಾಯ ಏಳಗೇರಿ, ಬಿ ಡಿ ಪಾಟೀಲ, ರೀಯಾಜ ಪಾರೋಕಿ, ಸಿದ್ದು ಡಂಗಾ, ರಮೇಶ ರಾಠೋಡ, ಶಿವಾನಂದ ಅಂಗಡಿ ಹಾಗೂ ಅಪಾರ ಪ್ರಮಾಣದ ಅಂಗನವಾಡಿ ಕಾರ್ಯಕರ್ತೆಯರು ಅಂತಿಮ ದರ್ಶನ ಪಡೆದರು.

