Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಸಂತೋಷ್ ರಾವ್ ಪೆರ್ಮುಡಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-೫೭೪೧೯೮ದೂ:೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಜೀವನದಲ್ಲಿ ತಾನು ಕೈಗೆತ್ತಿಕೊಂಡ ಯಾವುದೇ ವ್ಯವಹಾರ ವಹಿವಾಟುಗಳಲ್ಲಿ ಯಶಸ್ಸನ್ನು ಕಾಣದ ವ್ಯಕ್ತಿಯೊಬ್ಬ ಬದುಕಿನ ಆಸೆಯನ್ನು ಕಳೆದುಕೊಂಡು ಒಂಟಿಯಾಗಿ ಮನೆಬಿಟ್ಟು ಹೊರಟುಹೋದ. ನಡೆಯುತ್ತಾ ಹೋದವನು ದೊಡ್ಡದಾದ ಕಲ್ಲಿನ ಗುಹೆಯೊಳಗೆ ಕುಳಿತು ತನ್ನ ಕಷ್ಟಗಳು ಮತ್ತು ಜೀವನದಲ್ಲಿ ಉಂಟಾದ ಸೋಲುಗಳ ಕುರಿತು ಚಿಂತಿಸತೊಡಗಿದ. ಯಾವ ರೀತಿಯಲ್ಲಿ ಯೋಚಿಸಿದರೂ ಕಮರಿ ಹೋಗಿದ್ದ ತನ್ನ ಆತ್ಮಸ್ಥೆöÊರ್ಯ ಚಿಗುರುತ್ತಿರಲಿಲ್ಲ, ಹೊಸ ಉತ್ಸಾಹವೂ ಮೂಡುತ್ತಿರಲಿಲ್ಲ, ಹೊಸ ದಾರಿಯೂ ಕಾಣಿಸುತ್ತಿರಲಿಲ್ಲ. ಬದುಕೆಲ್ಲಾ ಈ ಹತಾಶೆ, ನೋವು, ನಿರಾಶೆ ಮತ್ತು ಸೋಲಿನಲ್ಲೇ ಕಳೆಯಬೇಕೋ ಏನೋ ಎಂದು ಅಧೀರನಾಗಿ ಚಿಂತಿಸುತ್ತಿದ್ದ. ಸೋಲಿನಿಂದ ಕಂಗೆಟ್ಟ ಆತನಿಗೆ ಬೇರೆ ದಾರಿಯೂ ಕಾಣದೇ ಗುಹೆಯ ಮೂಲೆಯಲ್ಲಿ ಕುಳಿತು ಹೊರಗಡೆ ಆಕಾಶದೆಡೆಗೆ ಶೂನ್ಯ ದೃಷ್ಟಿಯಿಟ್ಟು ಕುಳಿತಿದ್ದ.ಅಲ್ಲಿನ ಸಣ್ಣ ಧ್ವನಿಯೂ ಕೇಳಿಸುವಷ್ಟು ಮೌನವಿದ್ದು, ಸಣ್ಣ ಮಿಸುಕಾಟವೂ ಆತನಿಗೆ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆಗ ಗುಹೆಯ ಮೂಲೆಯಲ್ಲಿ ಬೃಹತ್ ಗಾತ್ರದ ಜೇಡವೊಂದು ಬಲೆಯನ್ನು ನೇಯಲು ಬಂಡೆಯನ್ನು ನಿಧಾನವಾಗಿ ಏರುತ್ತಿತ್ತು.…
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ನನ್ನೊಲವಿನ ಸೂರಿ‘ನವಿಲಿನ ಗರಿಯಂತೆ ಕಪ್ಪಗಿರುವ ದಟ್ಟವಾದ ಕೂದಲನ್ನು ಹೆಣೆದು, ಹೆಣೆದಿರುವ ಉದ್ದ ಜಡೆಗೆ ಮೈಸೂರು ಮಲ್ಲೆ ಮುಡಿವ ನೀನು ಸ್ಟೈಲ್ ಮಾಡುವ ಹುಡುಗಿಯರ ಗುಂಪಿಗೆ ಸೇರುವುದಿಲ್ಲ ಎಂದೆನಿಸಿತು. ಬಳ್ಳಿಯಂತಿರುವ ಮೈಮಾಟ, ಕಮಲದ ದಳಗಳಂತಿರುವ ಕಂಗಳು, ಹಂಸದ ನಡಿಗೆ, ನಕ್ಷತ್ರದಂತೆ ಹೊಳೆವ ಮಂದಹಾಸ, ನಿನ್ನ ಮಧುರ ಕಂಠದಲ್ಲಿ ನನ್ನ ಹೆಸರ ಕೇಳಿ ಮನದಲ್ಲಿ ಹುಡುಗಿಯ ಧ್ವನಿ ಎಷ್ಟು ಚೆನ್ನಾಗಿದೆ ಎಂದು ಹೇಳಿಕೊಂಡೆ. ಹೊಳೆವ ನಿನ್ನ ಕಂಗಳ ಕಾಂತಿಗೆ ಸೋತು ಬೆರಗಾಗಿರುವೆ. ಗುಲಾಬಿಯಂತೆ ಕೋಮಲವಾಗಿರುವೆ. ನಿನ್ನ ಕಂಗಳ ಕಪ್ಪು ಪರದೆಯೊಳಗೆ ಸಿಲುಕಿರುವೆ. ಹೃದಯದಲ್ಲಿ ಪ್ರೀತಿ ಕಲರವ ಹಾಡಿದೆ ಒಲವೆ. ನೀನೇ ನನ್ನ ಕಾಪಾಡಬೇಕು ಚೆಲುವೆ. ಇಷ್ಟು ಕಾಲ ಅದೆಲ್ಲಿ ಅಡಗಿದ್ದೆ? ಅಮೃತ ಗಳಿಗೆಯಲ್ಲಿ ಕಣ್ಣಿಗೆ ಬಿದ್ದೆ. ಮಂಡೆಯೂರಿ ಕೂತು ನಿವೇದನೆ ಮಾಡಿಕೊಳ್ಳುವೆ ನನ್ನೊಲವ ಒಪ್ಪಿಕೊ ನನ್ನೊಲವೆ.’ಎಂದು ಮುದ್ದಾದ ಕೈ ಬರಹದಲ್ಲಿ ನಿನ್ನ ಉತ್ಕಟ ಪ್ರೀತಿ ಹರಿಬಿಟ್ಟು ಬರೆದಿದ್ದ ಒಲವಿನೋಲೆ ಓದಿ ಒಪ್ಪಿಕೊಳ್ಳದೇ ಇರದಾದೆ. ‘ಹರಿಯುವ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯದಲ್ಲಿ ವಿದ್ಯುತ್ ವಿತರಣೆಯ ಖಾಸಗೀಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಟಾಟಾ ಕಂಪನಿಯು ಹಿಂದಕ್ಕೆ ಪಡೆದಿರುವುದು ಸಾರ್ವಜನಿಕ ವಲಯ, ಸಿಬ್ಬಂದಿ, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ರೈತ-ಜನಪರ ಸಂಘಟನೆಗಳ ನಿರಂತರ ಹೋರಾಟಕ್ಕೆ ಸಂದ ಮಹತ್ವದ ಗೆಲುವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕಾಧ್ಯಕ್ಷ ಬಸವರಾಜ ರಂಜುಣಗಿ ಎಂದಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿದ್ಯುತ್ ಖಾಸಗೀಕರಣದ ವಿರುದ್ಧ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಾದ್ಯಂತ ಪ್ರತಿಭಟನೆಗಳು, ಮನವಿ ಸಲ್ಲಿಕೆ, ಜಾಗೃತಿ ಅಭಿಯಾನಗಳು ಹಾಗೂ ವಿವಿಧ ರೀತಿಯ ಹೋರಾಟಗಳು ನಡೆಯುತ್ತಿದ್ದವು. ಸಾರ್ವಜನಿಕ ಸೇವೆಯಾದ ವಿದ್ಯುತ್ ವಿತರಣೆಯನ್ನು ಖಾಸಗೀಕರಣ ಮಾಡುವುದರಿಂದ ಜನಸಾಮಾನ್ಯರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಹುದು ಎಂಬ ಆತಂಕವನ್ನು ಹಲವು ಸಂಘಟನೆಗಳು ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಟಾಟಾ ಕಂಪನಿಯು ತನ್ನ ಅರ್ಜಿಯನ್ನು ಹಿಂದಕ್ಕೆ ಪಡೆದಿರುವ ಬೆಳವಣಿಗೆಗೆ ವಿವಿಧ ಕಾರ್ಮಿಕ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ಸ್ವಾಗತ ವ್ಯಕ್ತಪಡಿಸಿದ್ದು, ಇದು ಜನರ ಏಕತೆ ಮತ್ತು…
ಸಿಂದಗಿಯಲ್ಲಿ ಕೆಆರ್‌ಎಸ್ ಪಕ್ಷದಿಂದ ವಿನೂತನ ಹೋರಾಟ | ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸರ್ಕಾರಿ ಶಾಲೆಯಲ್ಲಿನ ಮೂಲಸೌಕರ್ಯಗಳ ಕೊರತೆ, ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯಗಳ ಅಭಾವ ಹಾಗೂ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ಖಂಡಿಸಿ ಸಿಂದಗಿ ತಾಲೂಕು ಘಟಕದ ಕೆಆರ್‌ಎಸ್ ಪಕ್ಷದ ವತಿಯಿಂದ ವಿನೂತನವಾಗಿ ದೀಡ ದಂಡ ನಮಸ್ಕಾರ ಹೋರಾಟ ನಡೆಸಲಾಯಿತು.ನಗರದ ಟಿಪ್ಪು ಸುಲ್ತಾನ್ ವೃತ್ತದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯದವರೆಗೆ ಹೋರಾಟಗಾರರು ಸರ್ಕಾರಿ ಶಾಲೆಯ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಆಗ್ರಹಿಸಿ ದೀಡ ದಂಡ ನಮಸ್ಕಾರ ಸಲ್ಲಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಶಾಲಾ ಕಟ್ಟಡಗಳ ದುರಸ್ಥಿತಿ, ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಅಗತ್ಯ ಶಿಕ್ಷಕರ ನೇಮಕ ಹಾಗೂ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.ಈ ವೇಳೆ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಪಟ್ಟಣದ ಉಪನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿಗಳ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ಮಿಂಚಿನ ದಾಳಿ ಇದೀಗ ಎರಡನೇ ದಿನಕ್ಕೆ ಕಾಲಿಟ್ಟಿದೆ.ಲೋಕಾಯುಕ್ತ ಅಧಿಕಾರಿಗಳು ಪ್ರಮುಖವಾಗಿ ಕಡತಗಳನ್ನು ಜಾಲಾಡಿದಾಗ ಕಚೇರಿಯಲ್ಲಿ ಸಾರ್ವಜನಿಕರ ಬರೋಬ್ಬರಿ ೨,೨೬೫ ಪೇಡಿ ಪತ್ರಗಳನ್ನು ಯಾವುದೇ ಸೂಕ್ತ ಕಾರಣಗಳಿಲ್ಲದೆ ಬಾಕಿ (ಪೆಂಡಿಂಗ್) ಇಡಲಾಗಿದೆ. ಪೇಡಿ ಪತ್ರಗಳನ್ನು ತಹಸೀಲ್ದಾರರ ಗಮನಕ್ಕೆ ತರಬೇಕಾಗಿತ್ತು. ಈ ಅಧಿಕಾರಿಗಳು ಜನರನ್ನು ಅಲೆದಾಡಿಸುವ ಉದ್ದೇಶದಿಂದ ತಹಸೀಲ್ದಾರ್ ಅವರಿಗೂ ಯಾವುದೇ ಮಾಹಿತಿ ನೀಡದೆ, ಎಲ್ಲಾ ಪೇಡಿ ಪತ್ರಗಳನ್ನು ತಮ್ಮ ಲಾಗಿನ್‌ನಲ್ಲೇ ಅಕ್ರಮವಾಗಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ.ಇಸಿ ಮತ್ತು ಮದುವೆ ಪ್ರಮಾಣಪತ್ರಗಳ ತಡೆಹಿಡಿತ:ಸಾರ್ವಜನಿಕರಿಗೆ ಅತ್ಯಂತ ತುರ್ತಾಗಿ ಬೇಕಾಗುವ ಇಸಿ ಮತ್ತು ವಿವಾಹ ನೋಂದಣಿ ಪ್ರಮಾಣಪತ್ರಗಳನ್ನು ಕಾರಣವಿಲ್ಲದೆ ಎರಡು ತಿಂಗಳುಗಳ ಕಾಲ ಪೆಂಡಿಂಗ್ ಇಡಲಾಗಿದೆ. ಇದರ ಹಿಂದೆ ದೊಡ್ಡ ಮಟ್ಟದ ಲಂಚದ ಆಮಿಷವಿರುವ ಶಂಕೆ ವ್ಯಕ್ತವಾಗಿದೆ.ಸರ್ಕಾರದ ನಿಯಮದಂತೆ ನೋಂದಣಿ ಶುಲ್ಕ ಮತ್ತು ಸ್ಕ್ಯಾನಿಂಗ್ ಶುಲ್ಕಗಳು ಆನ್‌ಲೈನ್ ಮೂಲಕವೇ ಪಾವತಿಯಾಗುತ್ತವೆ. ಆದರೆ ಲೋಕಾಯುಕ್ತ ಅಧಿಕಾರಿಗಳು ಕಚೇರಿಯ ಹಾರ್ಡ್ ಪ್ರತಿಯ ಪುಸ್ತಕ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಚನ ಸಾಹಿತ್ಯ ಸಂಶೋಧನೆ ಮತ್ತು ಮುದ್ರಣಕ್ಕಾಗಿ ಸಾಲಕ್ಕೆ ಅಂಜದೇ ಕಾಲಕ್ಕೆ ನಂಜದೇ ಇಡೀ ತಮ್ಮ ಬದುಕನ್ನು ವಚನ ಸಾಹಿತ್ಯ ಸಂರಕ್ಷಣೆಗಾಗಿ ಸವೆಸಿ 250ಕ್ಕೂ ಹೆಚ್ಚು ಶರಣರ ವಚನಗಳನ್ನು ಊರೂರು ಸುತ್ತಿ ಸಂಗ್ರಹಿಸಿ ಪ್ರಕಟಿಸಿ ನಮಗೆ ಕೊಟ್ಟು ಹೋದವರು ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಇವರು ಸದಾ ಸ್ಮರಣೀಯರಾಗಿದ್ದಾರೆ ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಖೇಡದ ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ತಾಲೂಕಾಡಳಿತವು ಗುರುವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ 146 ಜಯಂತೋತ್ಸವ, ವಚನ ಸಂರಕ್ಷಣಾ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ವಚನ ಸಾಹಿತ್ಯ ಸಂರಕ್ಷಣೆಯೊಂದಿಗೆ ವಿಜಯಪುರ ಜಿಲ್ಲೆಯ ವಿಕಾಸಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಶಿಕ್ಷಣ ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅವರು ತೋರುತ್ತಿದ್ದ ಕಾಳಜಿ, ಬರಗಾಲ ನಿವಾರಣ ಕೇಂದ್ರ,ಪ್ರತಿಷ್ಠಿತ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆ ಹಾಗೂ ಶ್ರೀಸಿದ್ದೇಶ್ವರ ಸಹಕಾರಿ ಬ್ಯಾಂಕ್, ಎಸ್.ಎಸ್. ಹೈಸ್ಕೂಲ್ ಹಾಗೂ ವಿಜಯ ಕಾಲೇಜ ಸೇರಿದಂತೆ ಅನೇಕ ಸಹಕಾರಿ ಸಂಘ…
ವಿಜಯಪುರ ಜಿಲ್ಲೆಯ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಖುಷ್ಬು ಗೋಯಲ್ ಚೌಧರಿ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿನ ಕುಡಿಯುವ ನೀರಿನ ಲಭ್ಯತೆ, ಹಿಂಗಾರು ಹಾಗೂ ಮುಂಗಾರು ಮಳೆ ಪರಿಸ್ಥಿತಿ, ಮಳೆ ಕೊರತೆಯಾದಲ್ಲಿ ಪರ್ಯಾಯ ಮಾರ್ಗಗಳನ್ನು ಕೈಗೊಳ್ಳುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀಮತಿ ಖುಷ್ಬು ಗೋಯಲ್ ಚೌಧರಿ ಅವರು ಹೇಳಿದರು.ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಇವರ ಸಹಯೋಗದಲ್ಲಿ ಶುಕ್ರವಾರ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಇದ್ದರೆ, ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.ಇದಕ್ಕೆ ಯಾವ ರೀತಿಯ ಮುನ್ನೆಚ್ಚರಿಕಾ ಯೋಜನೆಗಳನ್ನು ರೂಪಿಸಲಾಗಿದೆ ಎಂಬುದರ ಕುರಿತು ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.…
ಕೋಟ್ಯಾಳದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಿಎಸ್ ಆರ್ ಅನುದಾನದಡಿ ಉನ್ನತೀಕರಿಸಿದ ಪ್ರೌಢ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ ೩.೨೫ ಕೋಟಿ ರೂಪಾಯಿ ವೆಚ್ಚದಲ್ಲಿ, ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಕೋಟ್ಯಾಳ ಸುತ್ತಮುತ್ತಲಿನ ಗ್ರಾಮಗಳ ನೂರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕಲಿಕಾ ವಾತಾವರಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ ಅವರು ಹೇಳಿದರು.ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ ನೂತನ ಸರ್ಕಾರಿ ಪ್ರೌಢ ಶಾಲಾ ಕಟ್ಟಡವನ್ನು ಶುಕ್ರವಾರ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಜಗತ್ತಿನಲ್ಲಿ…
ಉದಯರಶ್ಮಿ ದಿನಗಳಲ್ಲಿ ವಿಜಯಪುರ: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ನಲ್ಲಿ ದಾಖಲಿಸಬೇಕೆಂದು ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.ರೈತರು ಗೂಗಲ್ ಪ್ಲೇ ಸ್ಟೋರ್ ಅಥವಾ ಕ್ಯೂ ಆರ್ ಕೋಡ್ ನಿಂದ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್ ಡೌನಲೋಡ್ ಮಾಡಿಕೊಂಡು, ಸ್ವತ ತಾವೇ ಬೆಳೆ ಸಮೀಕ್ಷೆ ಮಾಡಿ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆ ವಿವರಗಳನ್ನು ದಾಖಲಿಸಬಹುದು.ಬೆಳೆ ಸಮೀಕ್ಷೆ ತಂತ್ರಾಂಶ ಆಪ್ ತಂತ್ರಾಂಶನಲ್ಲಿ ದಾಖಲಾಗುವ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ,ಬೆಂಬಲ ಬೆಲೆ, ಖರೀದಿ,ಬೆಳೆ ಪರಿಹಾರ, ಪಹಣಿಯಲ್ಲಿ ಬೆಳೆ ವಿವರಗಳನ್ನು ದಾಖಲಿಸಲು ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಉಪಯೋಗಿಸಲಾಗುವುದು.ಈ ನಿಟ್ಟಿನಲ್ಲಿ ಸ್ವತ: ರೈತರೇ ತಮ್ಮ ಮೊಬೈಲ್ ತಂತ್ರಾಂಶ ಆ್ಯಪ್ ಮೂಲಕ ಸಕಾಲಕ್ಕೆ ಬೆಳೆ ವಿವಿರಗಳನ್ನು ತಂತ್ರಾಂಶದಲ್ಲಿ ಅಪಲೋಡ್ ಮಾಡುವದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಬರುವ…
