ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೇಂದ್ರ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ವಯ ೨೦೨೬ ನೇ ಮೇ ಹಾಗೂ ಜೂನ್ ತಿಂಗಳಿಗೆ ಸಂಬಂಧಿಸಿದ ಪಡಿತರ ಅಕ್ಕಿಯನ್ನು ಹಿಂದಿನ ತಿಂಗಳು ಮೇ ತಿಂಗಳಲ್ಲಿ ವಿತರಣೆ ಮಾಡಲಾಗಿರುತ್ತದೆ. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ೨೦೨೬ ನೇ ಮೇ ಹಾಗೂ ಜೂನ್ ಈ ಎರಡೂ ತಿಂಗಳಿಗೆ ಸಂಬಂಧಿಸಿದ ಅಕ್ಕಿ ಪ್ರತಿ ಸದಸ್ಯರಿಗೆ ೫ ಕೆಜಿಯಂತೆ ಎರಡೂ ತಿಂಗಳಿಗೆ ೧೦ ಕೆಜಿಯಂತೆ ಇದೇ ತಿಂಗಳು ನ್ಯಾಯ ಬೆಲೆ ಅಂಗಡಿವಾರು ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಯಲ್ಲಿನ ೪ ಹಾಗೂ ಹೆಚ್ಚಿನ ಸದಸ್ಯರು ಇರುವ ಪಡಿತರ ಚೀಟಿದಾರರು ಎರಡೂ ತಿಂಗಳ ಎನ್‌ಎಫ್‌ಎಸ್‌ಎ ಹೊರತುಪಡಿಸಿ ಇನ್ನುಳಿದಂತೆ ಹಾಗೂ ಆಧ್ಯತಾ (ಬಿಪಿಎಲ್) ಪಡಿತರ ಚೀಟಿಗೆ ಪ್ರತಿ ತಿಂಗಳು ಪ್ರತಿ ಸದಸ್ಯರಿಗೆ ೫ ಕೆಜಿಯಂತೆ ಒಟ್ಟು ೧೦ ಕೆಜಿ ಅಕ್ಕಿಯನ್ನು ಬಯೋಮೆಟ್ರಿಕ್ ನೀಡುವ ಮೂಲಕ ಪಡಿತರ ಚೀಟಿದಾರರು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
