Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಜು.೧೩ ರಂದು ನಡೆಯುವ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಪಟ್ಟಣದ ನ್ಯಾಯವಾದಿಗಳ ಸಭಾಭವನದಲ್ಲಿ ಜೂ.೬ ರಂದು ಬೆಳಿಗ್ಗೆ ೧೦:೧೫ ಕ್ಕೆ ಪೂರ್ವಭಾವಿ ಸಭೆ ಆಯೋಜಿಸಿದ್ದು, ಎಲ್ಲ ನ್ಯಾಯವಾದಿಗಳು ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರೂ ಆದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಮನವಿ ಮಾಡಿದ್ದಾರೆ.
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು ಅಮೆರಿಕಾದಲ್ಲಿ ಕೆಲವು ವರ್ಷಗಳು ವಾಸವಾಗಿದ್ದು ಹಿಂತಿರುಗಿದ ಹಿರಿಯ ಪರಿಚಿತರೊಬ್ಬರು ಭೇಟಿಯಾಗಿದ್ದರು.. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದೆವು. ಭಾರತದ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಅಪಾರ ಕಾಳಜಿ ಮತ್ತು ವಿದೇಶಿ ಸಂಸ್ಕೃತಿಯ ಬಗ್ಗೆ ಒಂದಷ್ಟು ತಿರಸ್ಕಾರ ಮನೋಭಾವದ ವ್ಯಕ್ತಿ ಅವರು. ಆ ಹೊತ್ತಿನಲ್ಲಿ ನಮ್ಮ ಮುಂದೆ ಇದ್ದ ಪತ್ರಿಕೆಯೊಂದರಲ್ಲಿ ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳನ್ನು ಮಾರಾಟ ಮಾಡುವ ಜಾಲದ ಬಗ್ಗೆ ಒಂದು ವರದಿ ಇತ್ತು. ಅದರ ಬಗ್ಗೆ ತುಂಬಾ ವಿಷಾದ ವ್ಯಕ್ತಪಡಿಸಿ ಮಾತು ಆರಂಭವಾಗುತ್ತಿದ್ದಂತೆ ಅವರು ಒಂದು ಮಾತು ಹೇಳಿದರು.. ಅಮೆರಿಕಾದಲ್ಲಿ ಮಗುವೊಂದು ಅನಾಥವಾಗುವುದು ವೈಯಕ್ತಿಕವಾಗಿ ತುಂಬಾ ನೋವಿನ ವಿಷಯವಾದರು ಸಾಮಾಜಿಕವಾಗಿ ಆ ಮಗುವನ್ನು ಅದೃಷ್ಟಶಾಲಿ ಎಂದು ಪರಿಗಣಿಸಬಹುದು ಎಂದರು. ಕುತೂಹಲದಿಂದ ಅದು ಹೇಗೆ ಎಂದು ಕೇಳಿದೆ.. ಅವರ ವಿವರಣೆ.. ಒಂದು ವೇಳೆ ಒಂದು ಮಗು ಯಾವುದೇ ಕಾರಣದಿಂದ ತಂದೆ, ತಾಯಿ ಅಥವಾ ಪೋಷಕರನ್ನು ಕಳೆದುಕೊಂಡು ಅನಾಥವಾದರೆ ಇಡೀ ಅಮೆರಿಕಾದ…
ಎಕ್ಸಲಂಟ್ ಪ.ಪೂ ಕಾಲೇಜ್ ಸಮಾರಂಭದಲ್ಲಿ ರಾಜ್ಯ ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ವಿಜಯಪುರ: ಮಕ್ಕಳ ಸೇವೆಯೇ ಬಗವಂತನ ಸೇವೆ ಎಂದು ನಂಬಿರುವವನು ನಾನು. ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ನಾನೆಂದು ಭಾವಿಸದೆ, ಮಕ್ಕಳ ಪರಿಚಾರಕನಾಗಿ ಬಾಲ ಮಂದಿರದ ಬಡ ಮಕ್ಕಳ ಬದುಕು ಅರಳಿಸುವ ಕೆಲಸ ಮಾಡುವೆ. ಯಾವುದಕ್ಕೂ ಆಸೆಪಡದೆ, ನಾಡು ಗುರುತಿಸುವಂತೆ ಪ್ರಾಮಾಣಿಕ ಸೇವೆಗೈಯುವ ವಿಶ್ವಾಸ ನನ್ನದು ಎಂದು ಬಾಲ ವಿಕಾಸ ಅಕಾಡೆಮಿಯ ನೂತನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಭರವಸೆ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ವಿಕಾಸ ಸಂಸ್ಥೆಯ ಎಕ್ಸಲಂಟ್ ಪದವಿ ಪೂರ್ವವಿದ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಜಗತ್ತಿನ ಸಂತೋಷದ ದೊಡ್ಡ ಮೂಲವೆಂದರೆ ಅದು ಮಗುವಿನ ನಿಷ್ಕಲ್ಮಷ ನಗು. ಅಂತಹ ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ದೊರೆತಿದೆ. ಮಕ್ಕಳಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ಸಂಪರ್ಕಿಸಿ, ಅಕಾಡೆಮಿಗೆ ಪುನಶ್ಚೇತನ ನೀಡಿ ನಾಡಿನ ಮಕ್ಕಳ ಮೊಗದಲ್ಲಿ ನಗೆ ಅರಳಿಸುವ ಇರಾದೆ ನನ್ನದು ಎಂಬ ಆಶಯ…
“ವೀಣಾಂತರಂಗ*- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ನಮ್ಮ ಯೋಚನೆಗಳು ಮತ್ತು ನಮ್ಮ ನಂಬುಗೆಗಳು ನಮ್ಮ ಬದುಕಿನ ಮೇಲೆ ನೇರ ಮತ್ತು ಆಳವಾದ ಪ್ರಭಾವವನ್ನು ಬೀರುತ್ತವೆ. ಸಕಾರಾತ್ಮಕ ಆಲೋಚನೆಗಳನ್ನು ನಮ್ಮಲ್ಲಿ ನಾವು ಬೆಳೆಸಿಕೊಳ್ಳುವುದರ ಮೂಲಕ ನಮ್ಮ ಬದುಕನ್ನು ಉತ್ತಮವಾಗಿಸಿಕೊಳ್ಳಬಹುದು. ಈ ಪುಸ್ತಕದ ರಚನಾಕಾರ ಪೀಲೆ ಪ್ರಾರಂಭದಲ್ಲಿ ಒಂದು ಕಥೆಯನ್ನು ಹೇಳುತ್ತಾನೆ… ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಓರ್ವ ವ್ಯಕ್ತಿ ಬದುಕಿ ಉಳಿಯುವುದು ಕೇವಲ ಆರು ತಿಂಗಳು ಎಂದು ಎಲ್ಲ ವೈದ್ಯರು ಹೇಳಿದ್ದರು. ಆದರೆ ನಂಬಿಕೆ ಕಳೆದುಕೊಳ್ಳದ ಆ ವ್ಯಕ್ತಿ ತಾನು ಕಾಯಿಲೆಯಿಂದ ಗುಣಮುಖನಾಗಿ ಮತ್ತೆ ಆರೋಗ್ಯವನ್ನು ಹೊಂದುವೆ ಎಂಬ ಕಡು ಭರವಸೆಯನ್ನು ಹೊಂದಿದ್ದು, ಮುಂದಿನ ಆರು ತಿಂಗಳುಗಳ ಕಾಲ ತಾನು ಗುಣವಾಗುತ್ತಿರುವಂತೆ ಕಲ್ಪಿಸಿಕೊಳ್ಳತೊಡಗಿದ ಪರಿಣಾಮವಾಗಿ ಆತ ನಿಜವಾಗಿಯೂ ತನ್ನ ಆರೋಗ್ಯದಲ್ಲಿ ಉತ್ತಮಿಕೆಯನ್ನು ಕಂಡುಕೊಂಡನು. ವೈದ್ಯರ ಎಲ್ಲ ನಕಾರಾತ್ಮಕ ಹೇಳಿಕೆಗಳನ್ನು ಸುಳ್ಳೆನಿಸುವಂತೆ ಪವಾಡಸದೃಶವಾಗಿ ಆತ ಗುಣಮುಖನಾಗಿ ಮುಂದೆ ಹಲವಾರು ವರ್ಷಗಳ ಕಾಲ ಜೀವಿಸಿದನು.ಸಕಾರಾತ್ಮಕ ಚಿಂತನೆಗೆ ಈ ಕಥೆಯು ಒಂದು ಉತ್ತಮ ಉದಾಹರಣೆಯಾಗಿದ್ದು…
ವಿಜಯಪುರ: ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ಜನರಿಗೆ ಬೆಲೆ ಏರಿಕೆ ಗ್ಯಾರಂಟಿ ನೀಡಿದೆ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ವಿಜಯ ಜೋಶಿ ಟೀಕಿಸಿದ್ದಾರೆ.ಈ ಕುರಿತು ಸೋಮವಾರ ಪ್ರಕಟಣೆ ನೀಡಿದ ಅವರು, ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಅವರು ಜನರಿಗೆ ಬೆಲೆ ಏರಿಕೆಯ ಬರೆ ಎಳೆದಿದ್ದಾರೆ. ರಾಜ್ಯದಲ್ಲಿ ಒಂದು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಜನ ವಿರೋಧಿ ಸರ್ಕಾರವಾಗಿದೆ. ಮನಸ್ಸೋ ಇಚ್ಚೆ ಪೆಟ್ರೋಲ್ ಡಿಸೇಲ್ ಏರಿಕೆ ಮಾಡುವ ಮೂಲಕ ನಿತ್ಯದ ಜೀವನ ಸಾಗಿಸಲು ಒದ್ದಾಡುವಂತೆ ಮಾಡಿದೆ. ಕೂಡಲೇ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯನ್ನು ಇಳಿಕೆ ಮಾಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವಿಜಯಪುರ: ಕಬ್ಬು ಪೂರೈಕೆ ಮಾಡಿದ ರೈತರಿಗೆ ಬಾಕಿ ಹಣ ಸಂದಾಯ ಮಾಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆ ಹರಾಜಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ತಿಳಿಸಿದ್ದಾರೆ.ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಶುಗರ್ಸ್ ಸಕ್ಕರೆ ಕಾರ್ಖಾನೆಯವರು ೨೦೨೩-೨೪ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಸಂಬಂಧಿಸಿದಂತೆ ರೈತರಿಗೆ ನೀಡಬೇಕಾಗಿರುವ ಬಾಕಿ ಹಣ ರೂ.೬೮.೪೪ ಕೋಟಿಗಳನ್ನು ನಿಗದಿತ ಅವಧಿಯಲ್ಲಿ ಪಾವತಿಸದೇ ಇರುವ ಕಾರಣದಿಂದ ಸಕ್ಕರೆ (ನಿಯಂತ್ರಣ) ಆದೇಶ ಹಾಗೂ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ ಅಡಿಯಲ್ಲಿ ಸದರಿ ಸಕ್ಕರೆ ಕಾರ್ಖಾನೆಯವರಿಂದ ಭೂಬಾಕಿ ರೂಪದಲ್ಲಿ ಬಡ್ಡಿ ಸಮೇತ ವಸೂಲಾತಿ ಮಾಡಲು ಜಿಲ್ಲಾಧಿಕಾರಿಗಳ ವರದಿ ಮೇರೆಗೆ ಆಯುಕ್ತರು, ಕಬ್ಬು ಅಭಿವೃದ್ದಿ ಹಾಗೂ ಸಕ್ಕರೆ ನಿರ್ದೇಶಕರು ಬೆಂಗಳೂರು ಇವರು ಆದೇಶ ಹೊರಡಿಸಿದ್ದಾರೆ.ರೈತರಿಗೆ ನೀಡಬೇಕಾದ ಬಾಕಿ ಹಣ ರೂ. ೭೦.೮೦ ಕೋಟಿ (ಬಡ್ಡಿ ಸೇರಿ)ಗಳನ್ನು ಪಾವತಿಸಲು ಕಾಲಾವಕಾಶ ನೀಡಿ ನೋಟಿಸ್ ನೀಡಲಾಗಿದ್ದರೂ ಸಹ ಸದರಿ ಕಾರ್ಖಾನೆಯವರು ಸ್ಪಂದಿಸದೇ ಇರುವುದರಿಂದ ಕರ್ನಾಟಕ…
ಸಿಂದಗಿ: ಪಟ್ಟಣದ ಸಾರಂಗಮಠದ ಪೂಜ್ಯ ಶ್ರೀ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ವತಿಯಿಂದ ಜೂ.೨೧ ಶುಕ್ರವಾರ ಸಾಯಂಕಾಲ ೭ಗಂಟೆಗೆ ಕಾರ ಹುಣ್ಣಿಮೆಯ ದಿನದಂದು ಸಾರಂಗಮಠದ ಆವರಣದಲ್ಲಿ ೩೩೧ನೆಯ ಸದ್ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಸಂಚಾಲಕರು ತಿಳಸಿದ್ದಾರೆ.ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳಲಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾಡು ಬೆಳಸಿ ನಾಡು ಉಳಿಸಿ ಕುರಿತಾಗಿ ಭಾಷಣ ಮಾಡಿಸಲಾಗುವುದು. ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಆರ್.ಡಿ. ಪಾಟೀಲ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ.ಡಿ.ಪಾಟೀಲ, ನಿವೃತ್ತ ಪ್ರಯೋಗಾಲಯ ಸಹಾಯಕ ಈರಣ್ಣ ಶಿವಸಿಂಪಿಗೇರ, ನಿವೃತ್ತ ಚಿತ್ರಕಲಾ ಶಿಕ್ಷಕ ಎಂ.ಬಿ.ಅಲ್ದಿ, ಶ್ರೀಕಾಂತ ಕುಂಬಾರ ಅವರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಮಲ್ಲಯ್ಯ ಸಿದ್ರಾಮಯ್ಯ ನಂದಿಕೋಲ ಸಿಂದಗಿ ಪರಿವಾರದಿಂದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರಿಗೆ ನಾಣ್ಯ ತುಲಾಭಾರ ಸೇವೆ ನಡೆಯಲಿದೆ. ಕಾರಣ ಸಿಂದಗಿ ತಾಲೂಕಿನ ಸುತ್ತಮುತ್ತಲಿನ ಶ್ರೀಮಠದ ಭಕ್ತರು ಭಾಗವಹಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಚಾಲಕರು ತಿಳಸಿದ್ದಾರೆ.
ಸಿಂದಗಿ: ತಾಲೂಕಿನ ೧೧೦/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಮೋರಟಗಿಯಿಂದ ಸರಬರಾಜಾಗುವ ೧೧ಕೆವ್ಹಿ ಮೋರಟಗಿ ಮತ್ತು ಬಗಲೂರ ಎನ್‌ಜೆವಾಯ್ ಮಾರ್ಗಗಳ ಮೇಲೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ಮಾರ್ಗಗಳ ಮೇಲೆ ಬರುವ ಮೋರಟಗಿ, ಕುಳೆಕುಮಟಗಿ, ಬಗಲೂರ, ಶಿರಸಗಿ, ಚಿಕ್ಕಹವಳಗಿ, ದೇವರನಾವದಗಿ, ತಾಂಡಾ, ಮತ್ತು ದೇವರನಾವದಗಿ ಗ್ರಾಮದ ವ್ಯಾಪ್ತಿಗಳಿಗೆ ಜೂ.೧೮ ಮತ್ತು ೨೨ ರಂದು ಬೆಳಿಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ವಿದ್ಯುತ್ ವಿತರಣೆ ಇರುವುದಿಲ್ಲ. ಆದ್ದರಿಂದ ಸದರಿ ಗ್ರಾಮಗಳ ಗ್ರಾಹಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮೋರಟಗಿ: ಮನುಷ್ಯನ ಜನನ ಆಕಸ್ಮಿಕ, ಮರಣ ನಿಶ್ಚಿತ, ಜನನ-ಮರಣಗಳ ಮದ್ಯೆದಲ್ಲಿ ಸರ್ವ ಸಮುದಾಯ ಭಾಂದವರ ಜೊತೆಗೆ ಅವಿನಾಭಾವದ ಜೀವನ ಕಳೆಯಬೇಕು ಎಂದು ಅಂಜುಮನ್ ಸಮಿತಿ ಕಾರ್ಯದರ್ಶಿ ಮೈಬೂಬಸಾಬ ಕಣ್ಣಿ ಹೇಳಿದರು.ಗ್ರಾಮದ ಇದ್ಗಾ ಮೈದಾನದ ಆವರಣದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಭಾಂದವರು ಹಮ್ಮಿಕೊಂಡ ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ಮಾತನಾಡಿದ ಅವರು, ಇಂದಿನ ರಾಜಕೀಯ ರಂಗ ಹದಗೆಟ್ಟಿದ್ದು, ತಮ್ಮ ರಾಜಕೀಯ ಬೇಳೆ ಬೆಯಿಸಿಕೊಳ್ಳಲು ಜಾತಿ ಜಾತಿಗಳ ಮದ್ಯದಲ್ಲಿ ವೀಷದ ಬೀಜ ಬಿತ್ತುತ್ತಾರೆ. ರಾಜಕೀಯವನ್ನು ಬದಿಗೊತ್ತಿ ವ್ಯಾಪಾರ ವಹಿವಾಟದಲ್ಲಿ ಮುಂದೆ ಬರಬೇಕು. ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು ನಿರ್ಗತಿಕರು ಕಂಡಲ್ಲಿ ಸಹಾಯಕ್ಕೆ ಮುಂದಾಗಬೇಕು ಎಂದು ಸಮುದಾಯದ ಯುವಕರಿಗೆ ಸಲಹೆ ನೀಡಿದರು.ಸೋಮವಾರ ಬೆಳಿಗ್ಗೆ ೮ಗಂಟೆಗೆ ಪ್ರಾರ್ಥನೆ ಸಲ್ಲಿಸಿ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಿಂದೂ ಸಮುದಾಯದ ಹಿರಿಯರಿಗೆ ಮತ್ತು ಯುವಕರಿಗೆ ಭೇಟಿ ನೀಡಿ ಇದ್-ಮಿಲಾದ ಮಾಡಿದರು. ಮನೆಗೆ ಆಮಂತ್ರಿಸಿ ಸುರಕುಂಬ್ ಕುಡಿಸಿ ಸಂಭ್ರಮಿಸಿದರು.ಈ ವೇಳೆ ಶಾಹಾಬಾದ ಮೌಲಾನ ಪ್ರಾರ್ಥನೆಯಲ್ಲಿ ಮಂತ್ರ ಪಠಣ ಮಾಡಿದರು.…
