ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ನಾಗವಾರ ಬಣ)ದ ಮುಖಂಡರು, ಕಾರ್ಯಕರ್ತರು ಸೋಮವಾರ ಸಂಗನಾಳ ದಲಿತ ಯುವಕನ ಹತ್ಯೆ ಖಂಡಿಸಿ ಹಾಗೂ ಯಾದಗಿರಿ ಪಿಎಸ್ಐ ಅವರ ಸಾವಿನ ಕುರಿತು ಸಿಐಡಿ ತನಿಖೆಗೆ ಆಗ್ರಹಿಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿ ಪತ್ರ ಓದಿದ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಗುರುರಾಜ ಗುಡಿಮನಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದ ಯಮನೂರಪ್ಪ ಬಸಪ್ಪ ಬಂಡಿಹಾಳ ಅವರು ಅದೇ ಗ್ರಾಮದ ಮುದುಕಪ್ಪ ಹಡಪದ ಅವರ ಕಟಿಂಗ್ ಸಲೂನ್ಗೆ ಕಟಿಂಗ್ ಮಾಡಿಸಿಕೊಳ್ಳಲು ಹೋದ ಸಂದರ್ಭದಲ್ಲಿ ಅಂಗಡಿ ಮಾಲೀಕ ಮುದುಕಪ್ಪ ಅವರು ಜಾತಿ ನಿಂದನೆ ಮಾಡುವ ಜೊತೆಗೆ ನೀನು ಇಲ್ಲಿಗೆ ಬರಬೇಡ ಎಂದಾಗ ಇಬ್ಬರಲ್ಲಿ ವಾಗ್ವಾದ ನಡೆದಾಗ ಕಟಂಗ್ ಮಾಡುವ ಕತ್ತರಿಯಿಂದ ಇರಿದು ಕೊಂದಿರುವ ಘಟನೆ ಶೋಚನೀಯವಾಗಿದೆ. ಇದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.
ಯಾದಗಿರಿಯ ಪಿಎಸ್ಐಯಾಗಿದ್ದ ಪರಶುರಾಮ ಚಲವಾದಿ ಅವರ ಅನುಮಾನಾಸ್ಪದ ಸಾವಿನ ಕುರಿತು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಮತ್ತು ಅವರ ಪುತ್ರ ಪಂಪನಗೌಡ ಅವರ ೪೦ ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿರುವದರಿಂದ ಕಿರುಕಳದಿಂದಾಗಿ ಇವರು ಮಾನಸಿಕವಾಗಿ ನೊಂದು ಸಾವು ಅಪ್ಪಿರುವುದು ಘೋರ ದುರಂತ. ಇವರ ಪತ್ನಿ ದೂರು ನೀಡಿದರೂ ಇದುವರೆಗೂ ಇವರನ್ನು ಬಂಧಿಸಿಲ್ಲ. ಕೂಡಲೇ ಪೊಲೀಸ್ ಇಲಾಖೆಯು ಕೂಡಲೇ ಬಂಧಿಸಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣವನ್ನು ಸಿಐಡಿಯಿಂದ ಸಿಬಿಐಗೆ ವರ್ಗಾಯಿಸಬೇಕು. ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದ ಅಽಕಾರಿಗಳು ಕರ್ತವ್ಯ ನಿರ್ವಹಿಸಲು ಭಯ ಭೀತರಾಗಿದ್ದಾರೆ. ವರ್ಗಾವಣೆಯ ಬೇಡಿಕೆ ಕಿರುಕುಳಕ್ಕೆ ಕಡಿವಾಣ ಹಾಕಬೇಕು. ಎರಡು ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಯಮನೂರಪ್ಪ ಬಂಡಿಹಾಳ ಕುಟುಂಬಕ್ಕೆ ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರು ಮಾಡಬೇಕು. ಅವರ ಕುಟುಂಬಕ್ಕೆ ಡಾ.ಅಂಬೇಡ್ಕರ ನಿಗಮದಿಂದ ಸಾಲ ಸೌಲಭ್ಯ ನೀಡಬೇಕು. ಈ ಘಟನೆಯಲ್ಲಿನ ಆರೋಪಿಗೆ ಶಿಕ್ಷೆಯಾಗಬೇಕು. ದಲಿತ ಬಾಂಧವರಿಗೆ ಹೊಟೇಲ್ ಹಾಗೂ ಕಟಿಂಗ್ ಸಲೂನಗಳಲ್ಲಿ ಮುಕ್ತ ಪ್ರವೇಶ ನೀಡಬೇಕೆಂದರು.
ಈ ಸಂದರ್ಭದಲ್ಲಿ ಯಮನೂರಿ ಚಲವಾದಿ, ಚಂದ್ರಶೇಖರ ನಾಲತವಾಡ, ಬಸವರಾಜ ದೊಡಮನಿ, ಬಾಬು ನಾಲತವಾಡ, ಗಂಗಾಧರ ಆರೇರ,ಚಂದ್ರಶೇಖರ ನಾಡಗೇರಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

