ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮದ ಬಸವ ಮಾತಾ ಮಾದಲಾಂಬಿಕೆ ಸ್ಮಾರಕ ಭವನದಲ್ಲಿ ಭಾನುವಾರ ಶ್ರಾವಣ ಮಾಸದಂಗವಾಗಿ ಸ್ಮಾರಕ ಭವನದಲ್ಲಿ ಪ್ರವಚನ ಹಮ್ಮಿಕೊಳ್ಳುವ ಕುರಿತಂತೆ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಆಗಷ್ಟ್ ೨೪ ರಿಂದ ಸೆಪ್ಟೆಂಬರ್ ೩ ರವರೆಗೆ ಕರಿಭಂಟನಾಳ ಗ್ರಾಮದ ಗುರುಗಂಗಾಧೇಶ್ವರ ಹಿರೇಮಠದ ಪೀಠಾಧಿಪತಿ ಶಿವಕುಮಾರ ಸ್ವಾಮೀಜಿ ಅವರಿಂದ ಪ್ರತಿನಿತ್ಯ ಸಂಜೆ ೭ ರಿಂದ ೮ ಗಂಟೆಯವರೆಗೆ ಶರಣರ ಚರಿತಾಮೃತ ಪ್ರವಚನ ನಡೆಸುವ ಕುರಿತು ತೀರ್ಮಾನಿಸಲಾಯಿತು. ಸೆ.೩ ರಂದು ಸಮಾರೋಪ ಸಮಾರಂಭ ನಡೆಸುವ ಕುರಿತಂತೆ ಚರ್ಚಿಸಲಾಯಿತು. ಸಭೆಯಲ್ಲಿ ವಿಶ್ವಗುರು ಬಸವ ಮಾತಾ ಮಾದಲಾಂಬಿಕೆ ಸಂಸ್ಥೆಯ ಅಧ್ಯಕ್ಷ ಸಂಗನಗೌಡ ಪಾಟೀಲ, ರೈತ ಮುಖಂಡ ಅರವಿಂದ ಕುಲಕರ್ಣಿ, ಈರಣ್ಣ ಬೆಕಿನಾಳ, ಬಸಯ್ಯ ಹಿರೇಮಠ, ಸಿದ್ದಪ್ಪ ನಡಕಟ್ಟಿ, ಮಲ್ಲಪ್ಪ ತಕ್ಕೋಡ, ಪ್ರಭು ಡಿಗ್ಗಾವಿ, ಶ್ರೀಶೈಲ ಭೀಮರಾಯ ತಾಳಿಕೋಟಿ, ಶ್ರೀಶೈಲ ತಾಳಿಕೋಟಿ, ಸಿದ್ದಪ್ಪ ಹದಿಮೂರ, ಸುಭಾಸ ಜುಮನಾಳ, ನಾಗಣ್ಣ ಚಿಗರಿ, ಶರಣಪ್ಪ ಶ್ಯಾಮಾಗೋಳ, ಅಪ್ಪು ಪತಂಗೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

