ಇಂಡಿ: ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕರ ಅಧಿಕಾರಿಗಳ ಮಧ್ಯೆ ಖುರ್ಚಿಗಾಗಿ ಪೈಪೋಟಿ ನಡೆದಿದೆ. ಕಾರ್ಯನಿರ್ವಾಹಕ ಅಧಿಕಾರಿ ಓರ್ವ ಅಧಿಕಾರದ ಕುರ್ಚಿ ನೀಡುವಂತೆ ಇಂಡಿ ತಾಲೂಕ ಪಂಚಾಯತ್ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಘಟನೆ ಸೋಮವಾರ ನಡೆದಿದೆ.
ಪ್ರತಿಭಟನೆ ನಡೆಸುತ್ತಿರುವ ತಾ.ಪಂ ಇಓ ಗುರುಶಾಂತಪ್ಪ ಬೆಳ್ಳುಂಡಗಿ ಜುಲೈ ೨೯ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಪಂಚಾಯತಿಯಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕ ಪಂಚಾಯತ್‌ಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದರು. ಮತ್ತೆ ಸರ್ಕಾರ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಾ ಪಂಚಾಯತ್ ಕಾರ್ಯಾಲಯಕ್ಕೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಆದ್ರೇ, ಅಧಿಕಾರ ಸ್ವೀಕರಿಸಿ ಕೇವಲ ಒಂದು ವಾರ ಕಳೆದಿದೆ. ಆದರೆ ಒಂದೇ ವಾರದಲ್ಲಿ ಮತ್ತೆ ವರ್ಗಾವಣೆ ಹೇಗೆ ಸಾಧ್ಯ? ಜುಲೈ ೨೯ರ ವರೆಗೆ ಸರ್ಕಾರ ವರ್ಗಾವಣೆಗೆ ದಿನಾಂಕ ನಿಗದಿಗೊಳಿಸಿತ್ತು. ಆದರೂ ಸಹ ಜುಲೈ ೩೧ ರಂದು ಆದೇಶ ಹೊರಡಿಸಿ ಇಂಡಿ ತಾಲೂಕ ಪಂಚಾಯತ್ ಕಚೇರಿಗೆ ಬಾಬುರಾವ್ ರಾಠೋಡ ಅವರನ್ನು ಹೆಚ್ಚುವರಿಯಾಗಿ ನಿಯುಕ್ತಿಗೊಳಿಸಿರುವುದು ಎಷ್ಟು ಸರಿ? ಎಂದು ಗುರುಶಾಂತಪ್ಪ ಬೆಳ್ಳುಂಡಗಿ ಪ್ರಶ್ನಿಸಿದ್ದಾರೆ.
ಈ ಕುರಿತು ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಅವರು ಸರ್ಕಾರ ನನ್ನನ್ನು ಏಕೆ ಕಡೆಗಣಿಸುತ್ತಿದೆ? ನಾನೊಬ್ಬ ನಿವೃತ್ತ ಸೈನಿಕನಾಗಿದ್ದರೂ ಸಹ ನನಗೆ ಯಾವುದೇ ಗೌರವ ನೀಡದೆ ಏಕಾಏಕಿ ಬೇರೆ ಬೇರೆ ಕಡೆ ವರ್ಗಾವಣೆ ಮಾಡುತ್ತಿರುವುದು ಎಷ್ಟು ಸರಿ? ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ನಾನು ಸತ್ತ ಮೇಲೆ ನನ್ನ ಮಕ್ಕಳಿಗೆ ೫ ಲಕ್ಷ ಪರಿಹಾರ ಕೊಡಲು ಬರುತ್ತಾರೆಯೇ.? ಆಗ ನನಗೆ ಬಂದು ಸಾಂತ್ವನ ಹೇಳಲು ಸಾಧ್ಯವಾ? ಎಂದು ದುಃಖ ಭರಿತರಾಗಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಅಧಿಕಾರ ವಹಿಸಿಕೊಂಡಿರುವ ತಾಲೂಕ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಾಬುರಾವ್ ರಾಠೋಡ ಅವರನ್ನು ಪ್ರಶ್ನಿಸಲಾಗಿ, ಸರ್ಕಾರದ ಆದೇಶದಂತೆ ಇಂಡಿ ತಾಲೂಕು ಪಂಚಾಯತಿಗೆ ಬಂದು ಅಧಿಕಾರ ಸ್ವೀಕರಿಸಿದ್ದೇನೆ. ಈಗಾಗಲೇ ವಿಜಯಪುರ ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುರಿಯಾಗಿ ಇಂಡಿಯನ್ನು ನನಗೆ ನೀಡಿದ್ದಾರೆ, ಸರಕಾರದ ಆದೇಶದ ಪ್ರಕಾರ ಅಧಿಕಾರ ಸ್ವೀಕರಿಸಿ ಕರ್ತವ್ಯ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

