ವಿಜಯಪುರ: ರಕ್ಷಾ ಬಂದನವು ಸಹೋದರ ಮತ್ತು ಸಹೋದರಿಯರ ನಡುವಿನ ಶಾಶ್ವತ ಮತ್ತು ಮಂಗಳಕರ ಬಾಂಧವ್ಯವನ್ನು ಮತ್ತು ಕುಟುಂಬದಲ್ಲಿನ ಒಡಹುಟ್ಟಿದವರ ವಾತ್ಸಲ್ಯವನ್ನು ಆಚರಿಸಲು ವಿಶೇಷ ಸಂದರ್ಭವಾಗಿದೆ. ರಕ್ಷಾ ಬಂಧನ ಪ್ರೀತಿ, ವಿಶ್ವಾಸ ಮತ್ತು ಜವಾಬ್ದಾರಿಯ ಸುಂದರ ಬಂಧವಾಗಿದೆ ಎಂದು ಎಸ್.ಕೆ.ಶಿಂಧೆ ಹೇಳಿದರು.
ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರೌಢ ಶಾಲೆಯಲ್ಲಿ ಸೋಮವಾರದಂದು ಹಮ್ಮಿಕೊಂಡಿದ್ದ ರಕ್ಷಾ ಬಂಧನ ಕಾರ್ಯಕ್ರಮದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಯರಿಂದ ರಾಖಿ ಕಟ್ಟುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು. ರಕ್ಷಾ ಬಂಧನ ಆಚರಿಸುವ ಹಿಂದಿನ ಮುಖ್ಯ ಉದ್ದೇಶವು ಸಹೋದರ ಮತ್ತು ಸಹೋದರಿಯ ನಡುವಿನ ಪ್ರೀತಿಯ ಸದ್ಗುಣದ ಬಂಧವನ್ನು ಮಕ್ಕಳಿಗೆ ತಿಳಿಸುವುದಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡುತ್ತ. ಸಹೋದರತ್ವದ ಮಹತ್ವ ಸಾರುವ ಹಬ್ಬವಾಗಿದೆ. ಸಹೋದರರು ತಮ್ಮ ಅಂಕ-ತಂಗಿಯರಿಂದ ಕೈಗೆ ಕಟ್ಟುವ ದಾರ ರಕ್ಷಾ ಕವಚದ ಸಂಕೇತವಾಗಿರುತ್ತದೆ ಎಂಬ ನಂಬಿಕೆಯಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ರಕ್ಷಾ ಬಂಧನದಲ್ಲಿ ಪಾಲ್ಗೊಂಡು ತಮ್ಮ ಸಹೋದರತ್ವದ ಸಂಬಂಧಗಳು ಗಟ್ಟಿಯಾಗಿ ಉಳಿಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ವಿದ್ಯಾರ್ಥಿನಿಯರು ಸಹೋದರರಿಗೆ ರಾಖಿ ಕಟ್ಟಿ, ಸಿಹಿ ತಿನಿಸಿದರು. ರೋಮಾಂಚಕ, ವರ್ಣರಂಜಿತ ಉಡುಪುಗಳು ಮತ್ತು ಮುಗ್ಧ ನಗು ತರಗತಿಯ ವಾತಾವರಣವನ್ನು ಬೆಳಗಿಸಿತು. ಈ ವೇಳೆ ಶಿಕ್ಷಕಿಯರು ಸಹೋದರತ್ವದ ಸಂಬಂಧ ಗಟ್ಟಿಯಾಗಿರಲೆಂದು ಶಿಕ್ಷಕರುಗಳಿಗೆ ರಾಖಿ ಕಟ್ಟಿದರು.
ಈ ವೇಳೆಯಲ್ಲಿ ಶಾಲಾ ಶಿಕ್ಷಕ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

