Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಕ್ಷೇತ್ರದಾದ್ಯಂತ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಬಸ್ ಪ್ರಯಾಣಕ್ಕಾಗಿ ಮಳೆಗಾಲ ಹಾಗೂ ಬೇಸಿಗೆಯಲ್ಲಿ ರಸ್ತೆ ಹಾಗೂ ಅಂಗಡಿ ಮುಗ್ಗಂಟುಗಳ ಆಶ್ರಯ ಪಡೆಯುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಹಲವಾರು ಗ್ರಾಮ ಪಟ್ಟಣಗಳಲ್ಲಿ ನೂತನ ಬಸ್ ನಿಲ್ದಾಣಗಳನ್ನು ನಿರ್ಮಾಣಗೊಳಿಸಲಾಗಿದ್ದು ಸಾರ್ವಜನಿಕರು ಸ್ವಚ್ಛತೆ ಕಾಪಾಡುವ ಮೂಲಕ ಅವುಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಸಿದ್ದು ಸವದಿ ಹೇಳಿದರು.ಚಿಮ್ಮಡ ಗ್ರಾಮದ ರಬಕವಿ ಮಹಾಲಿಂಗಪೂರ ರಸ್ತೆಯಲ್ಲಿ ಶಾಸಕರ ಪ್ರದೇಶಾಭಿವೃದ್ದಿ ನಿಧೀಯ ಸುಮಾರು ೧೦ ಲಕ್ಷ ರೂ. ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಬಹುದಿನಗಳ ಬೇಡಿಕೆಯಾಗಿರುವ ಈ ಬಸ್ ನಿಲ್ದಾಣವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದ್ದು ಗ್ರಾಮ ಪಂಚಾಯತಿಯವರು ಹಾಗೂ ಸಾರ್ವಜನಿಕರು ಸ್ವಚ್ಛತೆಯೊಂದಿಗೆ ಉಪಯೋಗಿಸಬೇಕು, ಕ್ಷೇತ್ರವ್ಯಾಪ್ತಿಯಲ್ಲಿ ಇನ್ನೂ ಎಲ್ಲೆಲ್ಲಿ ಅಗತ್ಯವಿವೆಯೋ ಅಲ್ಲೆಲ್ಲ ಶಾಸಕರ ಹಾಗೂ ಸಂಸದರ ಅನುದಾನದಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದೆಂದರು.ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ ಮಾತನಾಡಿದರು.ಶ್ರೀ ಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಜಿ.ಪಂ. ಮಾಜಿ ಸದಸ್ಯ ಪರಶುರಾಮ ಬಸವ್ವಗೋಳ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಸ್ವಾತಂತ್ರ್ಯ ಹೋರಾಟಗಾರರಾಗಿ, ನವಭಾರತದ ನಿರ್ಮಾತೃವಾಗಿ ಬಾಬು ಜಗಜೀವನ್ ರಾಮ್ ಅವರು ಕಾರ್ಮಿಕ ಕಲ್ಯಾಣ, ಕೃಷಿ ಅಭಿವೃದ್ಧಿ, ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಅಜರಾಮರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಾ. ಬಾಬು ಜಗಜೀವನ್ ರಾಮ್ ಅವರ 40 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಆಹಾರ ಮತ್ತು ಕೃಷಿ ಸಚಿವರಾಗಿ, ಆಹಾರ ಕೊರತೆಯಲ್ಲಿದ್ದ ಭಾರತವನ್ನು ಸ್ವಾವಲಂಬನೆಯತ್ತ ಕೊಂಡೊಯ್ದು ಹಸಿರು ಕ್ರಾಂತಿಗೆ ಬಲವಾದ ಅಡಿಪಾಯ ಹಾಕಿದರು. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬೂಜಿ ಅವರು ಮೇಲುಕೀಳೆಂಬ ತಾರತಮ್ಯ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಉದ್ದೇಶವಾಗಿತ್ತು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಶಿಕ್ಷಕರಾದ ಎಸ್ ಎಸ್ ಅರಬ,…

Read More

ಉದಯರಶ್ಮಿ ದಿನಪತ್ರಿಕೆ ಎಚ್.ಡಿ.ಕೋಟೆ: ಭಾರತೀಯ ಜನತಾ ಪಾರ್ಟಿಯಲ್ಲಿಮತಬ್ಯಾಂಕ್ ರಾಜಕಾರಣಕ್ಕೆ ಮನೆಹಾಕದೆ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ, ಅವರಿಗೆ ರಾಜಕೀಯ ಸ್ಥಾನಮಾನ ಕೊಡುತ್ತಾರೆ ಎಂಬುದಕ್ಕೆ ನಾನೇ ಜೀವಂತ ನಿದರ್ಶನ ಎಂದು ವಿಧಾನ ಪರಿಷತ್ ಸದಸ್ಯ ರಘು ಆರ್ ಕೌಟಿಲ್ಯ ಅಭಿಪ್ರಾಯಪಟ್ಟರು.ತಾಲೂಕಿಗೆ ಆಗಮಿಸಿದ ಅವರು ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾಯಕ ಸಮುದಾಯದ ಮುಖಂಡರನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೇಟಿ ಮಾಡಿ, ಚರ್ಚಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ೧೨ನೇ ಶತಮಾನದ ಬಸವಣ್ಣನವರ ಕಾಯಕ ತತ್ವ ಮತ್ತು ನಾಲ್ವಡಿ ಮಹಾರಾಜರ ಕನಸಿಗೆ ಪೂರಕವಾಗಿ ಬಿಜೆಪಿ ಹೆಜ್ಜೆ ಹಾಕುತ್ತಿದೆ. ಎಲ್ಲಾ ಸಮುದಾಯಗಳಿಗೂ ರಾಜಕೀಯ ಶಕ್ತಿ ಕೊಡುವ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸರ್ವ ಸಮಾಜಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ೨೦೨೮ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಗಳು, ಅತಿ ಹಿಂದುಳಿದ ಸಮುದಾಯಗಳು, ವೃತ್ತಿ ಆಧಾರಿತ ಸಮುದಾಯಗಳು, ಕಾಯಕ ಸಮುದಾಯಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಭಾರತದ ರಾಜಕೀಯ ಇತಿಹಾಸದಲ್ಲಿ ಐದು ದಶಕಗಳ ಕಾಲ ಅತ್ಯುನ್ನತ ಸೇವೆ ಸಲ್ಲಿಸಿ ಯುವ ಪೀಳಿಗೆಗೆ ಡಾ. ಬಾಬು ಜಗಜೀವನ್ ಜೀವನ್ ರಾಂ ಮಾದರಿಯಾಗಿದ್ದಾರೆ ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿ ರವಿಚಂದ್ರ ಹೇಳಿದರು.ಪಟ್ಟಣದ ಬಾಬು ಜಗಜೀವನ್ ರಾಂ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ‌ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಾಬು ಜಗಜೀವನ್ ಜೀವನ್ ರಾಂ ರವರ 40ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 1946 -1952 ರವರೆಗೆ ಭಾರತದ ಕಾರ್ಮಿಕ ಸಚಿವರಾಗಿದ್ದಾಗ, ಕಾರ್ಮಿಕರ ಹಿತಾಸಕ್ತಿಗಾಗಿ ಡಾ. ಬಾಬು ಜಗಜೀವನ್ ಜೀವನ್ ರಾಂ ಅವರು ಹಲವಾರು ಮಹತ್ವದ ಕಾನೂನುಗಳನ್ನು ಜಾರಿಗೆ ತಂದರು. ಅದರಲ್ಲಿ 1948ರಲ್ಲಿ ಕಾರ್ಮಿಕರಿಗೆ ಕೆಲಸಕ್ಕೆ ತಕ್ಕಂತೆ ಕನಿಷ್ಠ ವೇತನ ಖಾತ್ರಿಪಡಿಸುವ ಕಾಯ್ದೆ ತಂದು, ಕಾರ್ಮಿಕರ ಜೀವನ ಸುಧಾರಣೆಗೆ ಶ್ರಮಿಸಿದರು ಎಂದು ಹೇಳಿದರು.ತಾಲೂಕು ಮಾದಾರ ಮಹಾಸಭಾ ಅಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ಡಾ.ಬಾಬು ಜಗಜೀವನ್ ರಾಂ ಅವರು ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಯನಿರತ ಪತ್ರಕರ್ತರ ಸಂಘ ವಿಜಯಪುರ ಜಿಲ್ಲಾ ಘಟಕದ ಸದಸ್ಯರ ಮಕ್ಕಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.೨೦೨೫-೨೬ ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.೮೦ ಮತ್ತು ಅದಕ್ಕೂ ಅಧಿಕ ಫಲಿತಾಂಶ ಪಡೆದ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ.ಅರ್ಹ ಮಕ್ಕಳ ಅಂಕಪಟ್ಟಿ ಮತ್ತು ಭಾವಚಿತ್ರ ದೊಂದಿಗೆ ಅರ್ಜಿಯನ್ನು ಅವರ ಪಾಲಕರು ಆಯಾ ತಾಲೂಕು ಘಟಕದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಗೆ ಸಲ್ಲಿಸಬೇಕು.ವಿಜಯಪುರ ನಗರ ಮತ್ತು ತಾಲೂಕಿನ ಸದಸ್ಯರು ಕಾರ್ಯದರ್ಶಿಗಳಾದ ಅವಿನಾಶ ಬಿದರಿ (ಮೊ: 9513139595) ಮತ್ತು ವಿನೋದ ಸಾರವಾಡ (ಮೊ: 9916553711 ಅವರಿಗೆ ಸಲ್ಲಿಸಬೇಕು.ಅರ್ಜಿಗಳನ್ನು ಸಲ್ಲಿಸಲು ಜುಲೈ.೧೦ ಕೊನೆಯ ದಿನವಾಗಿರುತ್ತದೆ.ಈ ತಿಂಗಳು ಮೂರನೆ ವಾರ ನಡೆಯಲಿರುವ ಪತ್ರಿಕಾ ದಿನಾಚರಣೆಯಂದು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಲೇಖನ- ವಿವೇಕಾನಂದ ಪಾಟೀಲವಿಸಂಪಾ ಖೇಡಗಿವಿಜಯಪುರ ಉದಯರಶ್ಮಿ ದಿನಪತ್ರಿಕೆ ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರಿಗೆ ಪೂಜ್ಯನಿಯ ಸ್ಥಾನವಿದೆ. ಋಷಿ ಮುನಿ ಪುಂಗವರಂತೂ.. ಯತ್ರು ನಾರಿಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಸ್ತ್ರೀಯು ಗೌರವಿಸಲ್ಪಡುತ್ತಾಳೋ, ಪೂಜಿಸಲ್ಪಡುತ್ತಾಳೋ ಅಲ್ಲಿ ದೇವರ ವಾಸವಿದೆಯೆಂದು ಸಾರಿದರು.ಪುರುಷ ಪ್ರಧಾನವಾದ ಈ ದೇಶದಲ್ಲಿ ಹೆಣ್ಣು ತಾಯಿಯಾಗಿ ಸಹೋದರಿಯಾಗಿ ಪತ್ನಿಯಾಗಿ ಗೆಳತಿಯಾಗಿ ಮಾರ್ಗದರ್ಶಿಯಾಗಿ ಗುರುವಾಗಿ ಅಮೂಲ್ಯ ಪಾತ್ರ ವಹಿಸುತ್ತಾಳೆ. Thear is a women behind. Every Successful man ಎಂಬ ಉಕ್ತಿಯೇ ಇದೆ.ವಿಪರ್ಯಾಸವೆಂದರೆ ಈ ಆಧುನಿಕ ಯುಗದಲ್ಲಿ ಹೆಣ್ಣು ತುಚ್ಚವಾಗಿ ಶೋಷಿತಳಾಗಿ ಬಲಿಪಶುವಾಗಿ ಕಣ್ಣೀರಿನೊಂದಿಗೆ ಬದುಕುತ್ತಿದ್ದಾಳೆ. ದಿನನಿತ್ಯ ನಾವು ಮಾಧ್ಯಮಗಳಲ್ಲಿ ನೋಡುತ್ತೇವೆ – ಪತ್ನಿ ಹೆಣ್ಣು ಹೆತ್ತಳೆಂದು ಪುರುಷ ಪತ್ನಿಯನ್ನು ಶೋಷಿಸುತ್ತಿದ್ದಾನೆ, ಸತತ ಹೆಣ್ಣು ಹೆತ್ತಳೆಂದು ಪೀಡಿಸುವುದು, ತಾಯಿ ಮಗುವನ್ನು ಆಸ್ಪತ್ರೆಯಲ್ಲಿಯೇ ತಿರಸ್ಕರಿಸಿ ಕಾಣೆಯಾಗುವುದು, ತಿಪ್ಪೆಯಲ್ಲಿ ಎಸೆಯುವುದು, ನದಿಗೆ ತಳ್ಳುವುದು ಮಾಡುತ್ತಿದ್ದಾನೆ. ಅತ್ತೆ ಮಾವ ಬಳಗ ಕೂಡ ಆಕೆಯನ್ನು ನಿರ್ಲಕ್ಷ್ಯ ಭಾವದಿಂದ ನೋಡುತ್ತಾರೆ, ಹೀಗೆ ಅನೇಕ ಹೃದಯ ವಿದ್ರಾವಕ, ಸಾತ್ವಿಕರ…

Read More

ಚಿಕ್ಕಮಗಳೂರು ಜಿಲ್ಲಾ ಸಂಘಕ್ಕೆ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರ ಭೇಟಿ ಉದಯರಶ್ಮಿ ದಿನಪತ್ರಿಕೆ ಚಿಕ್ಕಮಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಚಿಕ್ಕಮಗಳೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸಭೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತ್ರಕರ್ತರ ಸಂಘಟನೆಯನ್ನು ವೃತ್ತಿಬದ್ಧವಾಗಿ ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.ಒಂದು ಕಾಲದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದ ಚಿಕ್ಕಮಗಳೂರು ಜಿಲ್ಲಾ ಪತ್ರಕರ್ತರ ಸಂಘವನ್ನು ಮತ್ತೆ ಅದೇ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ವೈಮನಸ್ಸುಗಳನ್ನು ಬದಿಗೊತ್ತಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಅವರು ಹೇಳಿದರು.ಜಿಲ್ಲಾಧ್ಯಕ್ಷ ಅನಿಲ್ ಆನಂದ್ ಅವರ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳನ್ನು ರಚಿಸಿರುವುದು ಶ್ಲಾಘನೀಯ. ಈ ಕಾರ್ಯದಲ್ಲಿ ರಾಜ್ಯ ಉಪಾಧ್ಯಕ್ಷ ಎಚ್.ಬಿ. ಮದನಗೌಡ ಅವರ ಪರಿಶ್ರಮ ಹಾಗೂ ರಾಜ್ಯ ಸಮಿತಿ ಸದಸ್ಯ ಕಲ್ಯಾಣ್ ಕುಮಾರ್ ಅವರ ಸಹಕಾರವೂ ಮಹತ್ವದ್ದಾಗಿದೆ ಎಂದು ಹೇಳಿದರು.ಕೆಯುಡಬ್ಲ್ಯೂಜೆ…

Read More

ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೃಷ್ಣಾ ನದಿ ಮೈದುಂಬಿ ಹರಿಯಲಿ, ರೈತರು ಹಾಗೂ ಸಾರ್ವಜನಿಕರಿಗೆ ನೀರಿನ ಕೊರತೆ ಎದುರಾಗದಿರಲಿ ಎಂಬ ಆಶಯದೊಂದಿಗೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ವಿಶೇಷ ಪೂಜೆ ಸಲ್ಲಿಸಿದರು.ಕೊರ್ತಿ-ಕೊಲ್ಹಾರ ಹಳೆಯ ಕೃಷ್ಣಾ ನದಿ ಸೇತುವೆಯಲ್ಲಿ, ಕೊರ್ತಿ-ಕೊಲ್ಹಾರ ಸೇತುವೆ ಪುನರ್‌ನಿರ್ಮಾಣ ಹೋರಾಟ ಸಮಿತಿ ಹಾಗೂ ನೂರಾರು ರೈತರ ಸಹಭಾಗಿತ್ವದಲ್ಲಿ 30 ವರ್ಷಗಳ ನಂತರ ಸಂಪೂರ್ಣವಾಗಿ ತೆರೆದಿರುವ ಹಳೆಯ ಸೇತುವೆಯಲ್ಲಿ ಪೂಜೆ ನೆರವೇರಿಸಲಾಯಿತು.ಈ ವೇಳೆ ಕೃಷ್ಣಾ ಮಾತೆಯನ್ನು ಪ್ರಾರ್ಥಿಸಿ, ಮಳೆ ಸಮೃದ್ಧಿಯಾಗಿ ಸುರಿದು ನದಿ ತುಂಬಿ ಹರಿಯಲಿ ಎಂದು ಬೇಡಿಕೊಳ್ಳಲಾಯಿತು.ಮಳೆಗಾಲ ತಡವಾಗುತ್ತಿರುವ ಹಿನ್ನೆಲೆ ರೈತರಲ್ಲಿ ಆತಂಕ ಹೆಚ್ಚಾಗಿದೆ. ಆದರೆ ಕಳೆದ ಒಂದು ವಾರದಿಂದ ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ಸಂತಸದ ಸಂಗತಿ ಎಂದು ಅವರು ಹೇಳಿದರು. ನದಿ ಮೈದುಂಬಿ ಹರಿದರೆ ರೈತರ ಬದುಕು ಹಸನಾಗುತ್ತದೆ, ಇದರಿಂದ ಸಮಸ್ತ ಜನರ ಜೀವನ ಸುಖಕರವಾಗುತ್ತದೆ ಎಂದರು.ದಕ್ಷಿಣ ಭಾರತದಲ್ಲಿಯೇ ಅತ್ಯಂತ ಉದ್ದವಾದ ಸೇತುವೆ ಕೊರ್ತಿ ಕೊಲ್ಹಾರ ಸೇತುವೆಯು ನಿರ್ಮಾಣವಾಗಲು ಹಳೇಯ…

Read More

ಮತದಾರರ ಪಟ್ಟಿಯ ಪರಿಷ್ಕರಣೆಗೆ ಮತ್ತಷ್ಟು ವೇಗ | ಮನೆ-ಮನೆಗೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್ ಸಂಜಯ ಇಂಗಳೆ | ಬಿ.ಎಲ್.ಓ ಗಳಿಗೆ ಕಟ್ಟುನಿಟ್ಟಿನ ಸೂಚನೆ ಉದಯರಶ್ಮಿ ದಿನಪತ್ರಿಕೆ ಚಡಚಣ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ನಿಗದಿತ ಅವಧಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಚಡಚಣ ತಹಶೀಲ್ದಾರ್ ಸಂಜಯ ಇಂಗಳೆ ಅವರು ಪಟ್ಟಣದ ವಿವಿಧ ಮನೆ-ಮನೆಗೆ ಭೇಟಿ ನೀಡಿ ಮತದಾರರ ಗಣತಿ ಹಾಗೂ ನಮೂನೆ ವಿತರಣಾ ಕಾರ್ಯವನ್ನು ಪರಿಶೀಲಿಸಿದರು.ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿ, ಚುನಾವಣಾ ಆಯೋಗದ ಈ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.ಪರಿಶೀಲನೆ ವೇಳೆ ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎಲ್.ಓ ಗಳ ಕಾರ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಅವರು, ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು. ಮನೆ-ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿ ಇಎಫ್‌ಎಸ್ ನಮೂನೆಗಳನ್ನು ವಿತರಿಸುವುದರ ಜೊತೆಗೆ,…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವ ಅಭಿಯಾನ ಕುರಿತು ರವಿವಾರರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಲಾಯಿತು.ಈ ಸಭೆಯಲ್ಲಿ ಸಮಾಜದ ಹಿರಿಯರಾದ ಶೇಕಪ್ಪ ಚಬನೂರ ಅವರು ಮಾತನಾಡಿ, ಕರ್ನಾಟಕ ಮಾದರ ಮಹಾಸಭಾದ ಸದಸ್ಯರಾಗಿ ಸಮುದಾಯದ ಬಲ ಹೆಚ್ಚಿಸಿ ಎಂದು ಹೇಳಿದರು.ಬಸ್ಸು ಕಟ್ಟಿಮನಿ ಮಾದರ ಮಾತನಾಡಿ ಕರ್ನಾಟಕ ಮಾದರ ಮಹಾಸಭಾದ ಸದಸ್ಯತ್ವವನ್ನು ಹಳ್ಳಿ ಹಳ್ಳಿಗೆ ಹೋಗಿ ಸದಸ್ಯತ್ವ ಪಡೆಯುವುದರ ಉದ್ದೇಶ ಮತ್ತು ಪ್ರಯೋಜನ ಏನು ಎಂಬುದರ ಕುರಿತು ಸಮಾಜದ ಜನರಿಗೆ ತಿಳಿಸೋಣ ಎಂದರು.ರಮೇಶ ಯ ದೊಡಮನಿ ಮಾತನಾಡಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮತ್ತು ಕೇಂದ್ರ ಮತ್ತು ರಾಜ್ಯದಿಂದ ಬರುವ ಸೌಲಭ್ಯಗಳನ್ನು ನಮ್ಮ ಸಮುದಾಯದವರಿಗೆ ತಲುಪಿಸುವ ಪ್ರಮುಖ ಉದ್ದೇಶ ಕರ್ನಾಟಕ ಮಾದರ ಮಹಾಸಭಾದ ಉದ್ದೇಶ ಆಗಿದೆ ಎಂದು ಹೇಳಿದರು.ಶಂಕ್ರಪ್ಪ ದೊಡಮನಿ ಮಾತನಾಡಿ ಮಾದಿಗ ಸಮಾಜದ ಹಿನ್ನಲೆ ಬಹು ಶ್ರೇಷ್ಠ ವಾಗಿದ್ದು ಅದರ ಸದಸ್ಯತ್ವ ಪಡೆದು ಅದರ ಪ್ರಯೋಜನ ಪಡೆಯುವುದು ಮುಖ್ಯ ಎಂದು ಹೇಳಿದರು.ಇದೇ…

Read More