ಉದಯರಶ್ಮಿ ದಿನಪತ್ರಿಕೆ
ಇಂಡಿ: ಭಾರಿ ಬಿರುಗಾಳಿಗೆ ಸೋಲಾರ ಫಲಕ ಬಿದ್ದು ಹಾನಿಯಾಗಿರುವ ದುರ್ಘಟನೆ ತಾಲ್ಲೂಕಿನ ನಿಂಬಾಳ ಬಿ ಕೆ ಗ್ರಾಮದಲ್ಲಿ ನಡೆದಿದೆ.
ಶನಿವಾರ ಬೀಸಿದ ಭಾರಿ ಬಿರು ಗಾಳಿಗೆ ತಾಲೂಕಿನ ನಿಂಬಾಳ ಬಿಕೆ ಗ್ರಾಮದ ರೈತ ಮಹಿಳೆ ಸುನೀತಾ ಜಗದೇವ ರಾಠೋಡ ಅವರು ಅಳವಡಿಸಿರುವ ಸೋಲಾರ ಫಲಕ ಬಿದ್ದು ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.
ತನ್ನ ಎರಡು 5 ಎಕರೆ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಸೋಲಾರ ಫಲಕ ಅಳವಿಡಿಸಿದ್ದು , ಅದು ಬಿರುಗಾಳಿಗೆ ಬಿದ್ದು ಹಾನಿಯಾಗಿದೆ. ಇದು ಮತ್ತೆ ನಿರ್ಮಿಸಿ ಕೊಳ್ಳಲು ನನಗೆ ಕಷ್ಟ ಸಾಧ್ಯ. ಅದಕ್ಕಾಗಿ ಸರಕಾರ ಪರಿಸಡಿಕೊಳ್ಳಲು ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಮನವಿ ಮಾಡಿದ್ದಾರೆ.

