ಉದಯರಶ್ಮಿ ದಿನಪತ್ರಿಕೆ
ಹೆಚ್ ಡಿ ಕೋಟೆ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬಿ.ಎನ್.ಎನ್.ಡಿ.ಪಿ. ರಾಜ್ಯ ಮಹಿಳಾ ಸಂಘಟನೆ ಮತ್ತು ಉದ್ದೇಶಿತ ಹಾಗೂ ಕನಾಟಕ ರಾಜ್ಯ ಶಿವಶರಣೆ ಅಕ್ಕಮ್ಮ ಮಹಿಳಾ ಕೋ-ಅಪರೇಟಿವ್ ಸೊಸೈಟಿ (ನಿ) ಕೊಡ ಮಾಡುವ ಶಿವಶರಣೆ ಅಕ್ಕಮ್ಮ ರಾಜ್ಯ ಪ್ರಶಸ್ತಿಗೆ ಹೆಚ್ ಡಿ ಕೋಟೆ ತಾಲೂಕು ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ಮಂಜುನಾಥ್ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೌಮ್ಯ ಮಂಜುನಾಥ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈಡಿಗ, ಬಿಲ್ಲವ, ನಾಮಧಾರಿ, ದೀವರು, ದೇಸಿ ಭಂಡಾರಿ, ತೀಯಾ, ನಾಡರ್ ಸಮಾಜದ 26 ಒಳಪಂಗಡಗಳ ಸಾಧಕರಿಗೆ ಹಾಗೂ ಮಹಿಳಾ ಸಂಘಗಳ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರಿಗೆ ಅವರ ಸಮಾಜ ಸೇವೆ, ಸಾಧನೆ ಮತ್ತು ನಾಯಕತ್ವವನ್ನು ಗುರುತಿಸಿ ಶಿವಶರಣೆ ಅಕ್ಕಮ್ಮ ರಾಜ್ಯ ಪ್ರಶಸ್ತಿ ನೀಡಿ ಗೌರಿಸಲಾಗುತ್ತದೆ.

