Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟ ಕುರಿತು ಜಾಗೃತಿ ಕಾರ್ಯಕ್ರಮ ಚಡಚಣ: ಪಟ್ಟಣದ ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಚಡಚಣ ಪೊಲೀಸ್ ಠಾಣೆ ವತಿಯಿಂದ ಕ್ರೀಡೆ, ಶಿಸ್ತು ಮತ್ತು ಮಾದಕ ವಸ್ತುಗಳ ಸಾಗಾಣಿಕೆ ಹಾಗೂ ಮಾರಾಟದ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಡಚಣ ಪೊಲೀಸ್ ಠಾಣೆಯ ಪಿಎಸ್ಐ ಸಂಜಯಕುಮಾರ ಕಲ್ಲೂರ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಾದ ಗುಟುಕಾ ,ತಂಬಾಕು, ಸಿಗರೇಟು ಗಳಿಂದ ದೂರ ಇರಬೇಕು. ಒಮ್ಮೆ ನೀವು ಮಾದಕ ವಸ್ತುಗಳಿಗೆ ದಾಸರಾದರೆ ಅದರಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತದೆ. ತಮ್ಮ ಕನಸನ್ನು ನನಸು ಮಾಡಲು ದುಶ್ಚಟಗಳಿಂದ ದೂರ ಇರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸಿದ್ದೇಶ್ವರ ಸ್ವಾಮಿಗಳ, ಸಿಂಪಿಲಿಂಗಣ್ಣವರ ಅವರ ಚಿಂತನೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಬ್ಬ ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಬೆಳೆಯಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ದೇವರಹಿಪ್ಪರಗಿ ಸರ್ಕಾರಿ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಡಾ. ಅಶೋಕ ಜಾಧವ ಮಾತನಾಡಿ ಮೊದಲು ನಾವು…
ವಿಜಯಪುರ: ದಯೆ, ಶ್ರದ್ಧೆ ಮತ್ತು ವೃತ್ತಿಪರ ಅನುಭವದಿಂದ ನೀಡುವ ಚಿಕಿತ್ಸೆ ರೋಗಿಗಳು ಬೇಗ ಗುಣಮುಖರಾಗಲು ಕಾರಣವಾಗುತ್ತವೆ ಎಂದು ಮುಧೋಳದ ಖ್ಯಾತ ಶಸ್ತ್ರಚಿಕಿತ್ಸೆ ತಜ್ಞ ಡಾ. ಶಿವಾನಂದ ಕುಬಸದ ಹೇಳಿದ್ದಾರೆ.ನಗರದ ಬಿ.ಎಲ್.ಡಿ.ಈ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸೆ ವಿಭಾಗದ ವತಿಯಿಂದ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.ಗ್ರಾಮೀಣ ಶಸ್ತ್ರಚಿಕಿತ್ಸಕರು – ಒಂದು ಅವಲೋಕನ ಕುರಿತು ಉಪನ್ಯಾಸ ನೀಡಿದ ಅವರು, ಗ್ರಾಮೀಣ ಭಾಗದಲ್ಲಿ ತಾವು ಅನುಭವಿಸಿದ ವೈದ್ಯಕೀಯ ಕ್ಷೇತ್ರದಲ್ಲಿನ ಸಂಕಷ್ಟಗಳು ಮತ್ತು ಸವಾಲುಗಳು ಹಾಗೂ ರೋಗಿಗಳು ಗುಣಮುಖರಾದ ನಂತರ ಪಡೆದ ಸಂತ್ರಪ್ತಿಯ ಬಗ್ಗೆ ವಿವರಿಸಿದರು. ತಮ್ಮ 40 ವರ್ಷಗಳ ಸುದೀರ್ಘ ಸೇವಾವಧಿಯಲ್ಲಿ ಬಸವಣ್ಣನವರ ದಯವೇ ಧರ್ಮದ ಮೂಲ ಎಂಬ ತತ್ವದಡಿ 40 ಸಾವಿರಕ್ಕಿಂತಲೂ ಹೆಚ್ಚು ಶಸ್ತ್ರ ಚಿಕಿತ್ಸೆಗಳನ್ನು ನೆರವೇರಿಸಿರುವುದಾಗಿ ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿ. ಎಲ್. ಡಿ. ಈ ಡೀಮ್ಡ್ ವಿವಿ ಕುಲಪತಿ ಡಾ. ಆರ್. ಎಸ್. ಮುಧೋಳ, ತಾವು ಡಾ. ಕುಬಸದ ಅವರ…
ವಿಜಯಪುರ: ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಒದಗಿಸಲು ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ನೆರವಾಗುತ್ತಿವೆ ಎಂದು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜಾನ್ ಖಟವಟೆ ಹೇಳಿದ್ದಾರೆ.ಚಡಚಣದಲ್ಲಿ ಬುಧವಾರ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.ಆರೋಗ್ಯವೇ ಭಾಗ್ಯ ಎಂಬ ತತ್ವದಡಿ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ಸಂಬಂಧಿತ ಚಿಕಿತ್ಸೆ ನೀಡುವುದು ಅಗತ್ಯವಾಗಿದೆ. ಚಡಚಣದಲ್ಲಿ ಇಂಥ ಶಿಬಿರಗಳ ಆಯೋಜನೆಯಿಂದ ಈ ಭಾಗದಲ್ಲಿ ಜನರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಆಡಳಿತಾಧಿಕಾರಿ ಶಾಂತೇಶ ಸಲಗರೆ ಮಾತನಾಡಿ, ಆಸ್ಪತ್ರೆಯ ತಜ್ಞವೈದ್ಯರು ಗುಣಮಟ್ಟದ ಸೇವೆ ನೀಡುತ್ತಿದ್ದಾರೆ. ಜನಸಾಮಾನ್ಯರು ಮತ್ತು ಬಡವರ,ಸಾಮಾನ್ಯರಿಗಾಗಿ ಗ್ರಾಮೀಣ ಭಾಗದಲ್ಲಿ ಇಂಥ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರ ಬಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದು ಹೇಳಿದರು.ಈ ಶಿಬಿರದಲ್ಲಿ ಚಡಚಣ ಸಮುದಾಯ…
ಕೆಂಭಾವಿ: ಪಟ್ಟಣದ ಸೀಮಾಂತರದಲ್ಲಿರುವ ಗ್ರಾಮ ದೇವತೆ ಹಜರತ್ ಜಚ್ಚಾ ಮಾಸಾಬಿಗೆ ಗುರುವಾರ ವಿಶೇಷ ಪೂಜೆ ಸಲ್ಲಿಸಿ ಮಳೆ ಬೆಳೆ ಸಮೃದ್ದಿಗಾಗಿ ಪ್ರಾರ್ಥಿಸಲಾಯಿತು.ಹಿಂದು ಮುಸ್ಲಿಂರ ಭಾವೈಕ್ಯತೆಯ ಆರಾಧ್ಯ ದೈವ ಹಜರತ್ ಜಚ್ಚಾ ಮಾಸಾಬಿಯ ಕುದುರೆಗಳಿಗೆ ಸುಗಂಧ ದ್ರವ್ಯಸಮೇತ ಪುಷ್ಪಾಲಂಕಾರಗೊಳಿಸಿ ವಾದ್ಯ ಮೇಳಗಳ ಮೆರವಣಿಗೆಯೊಂದಿಗೆ ಇಲ್ಲಿನ ರೈತರು ಹಾಗೂ ಮುಸ್ಲಿಂ ಬಾಂಧವರು ಪ್ರತಿವರ್ಷದ ಸಂಪ್ರದಾಯದಂತೆ ಪಾದಯಾತ್ರೆ ಮೂಲಕ ಜಚ್ಚಾ ಮಾಸಾಬಿಯ ಬೆಟ್ಟಕ್ಕೆ ತೆರಳಿ ಸಾಮೂಹಿಕ ಪೂಜೆ ಸಲ್ಲಿಸಿ ದೇವಿಗೆ ಮಳೆ ಬೆಳೆ ಸಮೃದ್ದಿಗಾಗಿ ಬೇಡಿಕೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿ ಗ್ರಾಮಕ್ಕೆ ಮರಳಿದರು.ನಯ್ಯುಮ್ ಖಾಜಿ ಪಟ್ಟೇದಾರ, ಅಜೀಜ್ ಖಾಜಿ, ರಫೀಕ ಖಾಜಿ, ಅಹಮದ್ ಖಾಜಿ, ಶಾಹೀದ್ ಹುಸೇನ್ ಖಾಜಿ, ಮಜರ ಖಾಜಿ, ಶಫೀಯುದ್ದೀನ್ ಖಾಜಿ, ಅಜರುದ್ದೀನ ಸೇರಿದಂತೆ ಇತರರಿದ್ದರು.
ವಿಜಯಪುರ ಜಿಲ್ಲಾಡಳಿತದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ವಿಜಯಪುರ: ನಾಡಪ್ರಭು ಕೆಂಪೇಗೌಡರ ದೂರದೃಷ್ಟಿವುಳ್ಳ ವಿಚಾರ-ಯೋಜನೆಗಳು ನಾಡಿನ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದ್ದು, ಅವರು ಓರ್ವ ಉತ್ತಮ ಆಡಳಿತಗಾರರಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾಡಿಗಾಗಿ ತಮ್ಮದೇ ಆದ ವಿಶಿಷ್ಟ ಸೇವೆ ಸಲ್ಲಿಸಿದ ವ್ಯಕ್ತಿಗಳ ನೆನಪಿಡುವ ದೃಷ್ಟಿಯಲ್ಲಿ ಅಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿವೆ. ಮಹಾನ್ ವ್ಯಕ್ತಿಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರುವುದಿಲ್ಲ. ಕೆಂಪೇಗೌಡರು ಎಲ್ಲ ವರ್ಗದ ಹಿತವನ್ನು ಬಯಸುವಂತವರಾಗಿದ್ದರು. ಹಿಂದೆ ಹಲವಾರು ರಾಜರ ಸಂಸ್ಥಾನಗಳು ಆಳ್ವಿಕೆ ಮಾಡಿವೆ ಅದರಲ್ಲಿ ಆಡಳಿತ ಒಂದು ಭಾಗವಾಗಿತ್ತು. ಆಡಳಿತ ಮೇಲೆಯೇ ರಾಜ್ಯಭಾರ ಮಾಡುತ್ತಿದ್ದರು ನಾಡ ಪ್ರಭು ಕೆಂಪೆಗೌಡರು ನಗರಗಳನ್ನು ನಿರ್ಮಾಣ ಮಾಡುವುದರಲ್ಲಿ ಹಾಗೂ ನಗರಗಳು ಸರ್ವೋತ್ತಮುಖ…
ವಿಜಯಪುರ: ಜೂ.30 ರಂದು ಶಿಕ್ಷಕರ ಅರ್ಹತಾ ( ಟಿಇಟಿ) ಪರೀಕ್ಷೆಗಳು ವಿಜಯಪುರ ನಗರದ 43 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ. ಪರೀಕ್ಷೆಗಳು ಸುವ್ಯವಸ್ಥಿತವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ 43 ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಅಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷೆಯಲ್ಲಿ ತೊಡಗಿರುವ ಯಾವುದೇ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತ್ತು ಇತರರು ಮೊಬೈಲ್ ಫೋನನ್ನು ತರುವುದನ್ನು, ಬಳಸುವುದನ್ನು ನಿಷೇಧಿಸಿದೆ. ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಇಂಟರ್‌ನೆಟ್ ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ತೆರೆಯದಂತೆ ಅವರು ಆದೇಶಿಸಿದ್ದಾರೆ.
ವಿಜಯಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕ ಮೋಹನ್ ಭಾಗವತ್ ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಚಡಚಣ ತಾಲೂಕಿನ ನಿಂಬಾಳದಲ್ಲಿರುವ ಇಂಚಗೇರಿ ಸಾಂಪ್ರದಾಯದ ಗುರುದೇವ ರಾಣಡೆ ಆಶ್ರಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ಪ್ರತಿ ವರ್ಷ ಜೂನ್-ಜುಲೈ ತಿಂಗಳಲ್ಲಿ ಇಂಚಗೇರಿ ಸಾಂಪ್ರದಾಯದ ಆಧ್ಯಾತ್ಮ ಆಚರಣೆಗಳಲ್ಲಿ ತೊಡಗುವುದು ವಾಡಿಕೆ ಇದ್ದು, ಕಳೆದ ಮೂರು ದಿನಗಳಿಂದ ಆಧ್ಯಾತ್ಮ ಸಾಧನೆಯಲ್ಲಿ ತೊಡಗಿದ್ದಾರೆ.ಗುರುದೇವ ರಾಣಡೆ ಆಶ್ರಮದಲ್ಲಿ ವಾಸ್ತವ್ಯ: ವಿಜಯಪುರ ಜಿಲ್ಲೆಯ ಆಧ್ಯಾತ್ಮ ತವರು ಅನ್ನೋದ್ರಲ್ಲಿ ಎರಡು ಮಾತಿಲ್ಲ. ಜಿಲ್ಲೆಯಲ್ಲಿ ಆಗಿ ಹೋದ ಸಂತಮಹಂತರು ವಿಶ್ವವ್ಯಾಪಿ ಆವರಿಸಿಕೊಂಡಿದ್ದಾರೆ. ಅದೇ ರೀತಿ ವಿಜಯಪುರ ಜಿಲ್ಲೆಯಲ್ಲಿ ಇಂಚಗೇರಿ ಸಾಂಪ್ರದಾಯದ ಮಠಗಳಿಗೇನು ಕಮ್ಮಿ ಇಲ್ಲ. ಇಂಚಗೇರಿ ಮಠದ ಆದರ್ಶ, ಗುರುಪರಂಪರೆಯನ್ನ ಮೆಚ್ಚಿ ದೇಶ ವಿದೇಶಗಳಿಂದ ಭಕ್ತರು ಬರ್ತಾರೆ. ಅದೇ ರೀತಿ ನಿಂಬಾಳದಲ್ಲಿರುವ ಗುರುದೇವ ರಾಣಡೆ ಅವರ ಆಶ್ರಮಕ್ಕು ದೇಶ-ವಿದೇಶಗಳಿಂದ ಭಕ್ತರು ಬಂದು ಸಾಧನೆ ಮಾಡ್ತಾರೆ. ಇಂಥಹ ಭಕ್ತರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕರಾದ ಮೋಹನ್ ಭಾಗವತ್ ಅವರು ಸಹ ಒಬ್ಬರು.…
ವಿಜಯಪುರ: ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕು ಘಟಕದ ರೈತಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಈರಣ್ಣ ಗುರುನಾಥ ಭಜಂತ್ರಿ ಅವರಿಗೆ ಜೂ.೨೩ರಂದು ಬೆಂಗಳೂರಿನ ಅಕ್ಕಮಹಾದೇವಿ ಸಬಾಂಗಣದಲ್ಲಿ ಜರುಗಿದ ಬೆಳಕು ಸಂಭ್ರಮದ ಕಾರ್ಯಕ್ರಮದಲ್ಲಿ ಬೆಳಕು ಸಾಹಿತ್ಯ, ಶೈಕ್ಷಣಿಕ, ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರಾಷ್ಟ್ರಮಟ್ಟದ ’ರೈತರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಲಬುರ್ಗಿ ಜಿಲ್ಲೆಯಲ್ಲಿ ಈರಣ್ಣ ಭಜಂತ್ರಿ ಅವರ ಹಲವಾರು ವರ್ಷಗಳ ರೈತಪರ ಕಾಳಜಿ, ರೈತಪರ ಹೋರಾಟಗಳ ಗಣನೀಯ ಸಾಧನೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಬೆಳಕು ಟ್ರಸ್ಟ್ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ತಿಳಿಸಿದರು.ಬೆಳಕು ಸಂಭ್ರಮದ ಸರ್ವಾಧ್ಯಕ್ಷೆ, ಸ್ವರಮಧುರ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ಪ್ರಾಂಶುಪಾಲೆ ಶ್ರೀಮತಿ ಗೌರಿಶಂಕರ ಚಟ್ಟಿ ಸೇರಿದಂತೆ ಹಲವು ಗಣ್ಣರು ವೇದಿಕೆ ಮೇಲಿದ್ದರು.
ಆಲಮಟ್ಟಿ: ಇಲ್ಲಿನ ಕೆಬಿಜೆಎನ್ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ನಾನಾ ಬೇಡಿಕೆ ಈಡೇರಿಕೆಗೆಆಗ್ರಹಿಸಿ ಕೃಷ್ಣಾತೀರ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಜೂ.19ರಿಂದಗುತ್ತಿಗೆದಾರರು ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯು ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ. ಅವರ ಭರವಸೆ ಮೇರೆಗೆ ಬುಧವಾರಅಂತ್ಯಗೊಳಿಸಿದರು.ಧರಣಿ ಸ್ಥಳಕ್ಕೆ ಕೆಬಿಜೆಎನ್ಎಲ್ ಎಂಡಿ ಆಗಮಿಸಿದಾಗ ಧರಣಿ ನಿರತರು ತಮ್ಮ ನಾನಾ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಎಂಡಿ ಮೋಹರಾಜ ಕೆ.ಪಿ. ಮಾತನಾಡಿ, ಕಳೆದ ವರ್ಷದಲ್ಲಿ ಕರೆಯಲಾದ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕ ಕಾಯ್ದೆ ಅನುಸಾರ ಕ್ರಮಕೈಗೊಂಡು ಕಾಮಗಾರಿಗಳ ಬಿಡ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಮುಂಗಡ ಹಣವನ್ನುಆಯಾ ಗುತ್ತಿಗೆದಾರರಿಗೆ ಮರಳಿಸಲಾಗಿದೆ. ಕಾಲುವೆಗಳ ದುರಸ್ತಿ, ನೂತನ ಮುಖ್ಯ ಕಾಲುವೆ, ವಿತರಣಾ ಕಾಲುವೆ, ಸೀಳು ಕಾಲುವೆ, ಉಪಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ಯಾಕೇಜ್ಪದ್ದತಿಗೆ ಅಳವಡಿಸದೆ ವಿಂಗಡಣೆ ಮಾಡಿ ಟೆಂಡರ್ ಕರೆಯುವುದು ಸೇರಿದಂತೆ ಇತರೆ ಎಲ್ಲ ಬೇಡಿಕೆಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.ಅಧ್ಯಕ್ಷ ಎಂ.ಎ.ಮೇಟಿ, ಉಪಾಧ್ಯಕ್ಷ ಎಸ್.ಎಸ್.ಗದಿಗೆಪ್ಪಗೌಡರ, ಕಾರ್ಯದರ್ಶಿ ವೈ.ವೈ.ಬಿರಾದಾರ,…
