ಅಫಜಲಪುರ: ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನಾ ಮಹೋತ್ಸವವು ಅಫಜಲಪುರ ಪಟ್ಟಣದ ಬ್ರಾಹ್ಮಣ ಗಲ್ಲಿಯಲ್ಲಿ ವೈಭವನದಿಂದ ಜರುಗಿತು.
ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಪ್ರಯುಕ್ತ ಪಟ್ಟಣದ ದತ್ತ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ೮ ಗಂಟೆಗೆ ಅಷ್ಟೋತ್ತರ ಪಾರಾಯಣ, ಮದ್ಯಾಹ್ನ ೧೨ ಗಂಟೆಗೆ ರಥೋತ್ಸವ ಜರುಗಿದವು. ಬಳಿಕ ತೀರ್ಥ ಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಡಾ. ಉಪೇಂದ್ರ ಪಾಟೀಲ್, ಸಮಾಜದ ಅಧ್ಯಕ್ಷರಾದ ಆನಂದ ಆಲಮೇಲಕರ, ಪ್ರಮುಖರಾದ ಮಾಣಿಕರಾವ್ ಬಿಲ್ವಾಡ, ಡಾ. ಗಿರೀಶ ಪಾಟೀಲ್, ಪವನ್ ಅಲಬಾಳ, ಜಯವೆಂಕಟಾಚಾರ್ಯ ಜೋಷಿ, ಮಂದಾಕಿನಿ ಪಾಟೀಲ್, ನಂದಾ ಕುಲಕರ್ಣಿ, ಜಾನವಿ ಜೋಷಿ, ಲತಾ ಕುಲಕರ್ಣಿ, ಸಂತೋಷ ಘೂಳನೂರ, ಲತಾ ಘೂಳನೂರ, ಸುನೀತಾ ಅಲಬಾಳ, ಅಶ್ವಿನಿ ಕಟಾವೆ, ಜ್ಯೋತಿ ಬಗಲೂರ, ಸುಜಾತಾ ಬಿಲ್ವಾಡ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

