ವಿಜಯಪುರ: ಭಾರತದ ಹಳ್ಳಿಗಳು ಜಾನಪದ ಸಂಸ್ಕೃತಿಯಲ್ಲಿಯೇ ಸುಖ ಕಾಣುತ್ತಿವೆ. ಜಾನಪದದ ಆಚಾರ – ವಿಚಾರಗಳು ನಮ್ಮ ಬದುಕಿಗೆ ಊರುಗೋಲಾಗಿ ಸನ್ನಡತೆಯಲ್ಲಿ ನಡೆಸುತ್ತಿವೆ. ಭಾರತದ ಘನತೆಗೆ ಜಾನಪದವೇ ಮೂಲ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ವಿಜಯಪುರ ಅಧ್ಯಕ್ಷ ಬಾಪುಗೌಡ ಪಾಟೀಲ (ಶೇಗುಣಸಿ) ಅಭಿಪ್ರಾಯಪಟ್ಟರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಬಬಲೇಶ್ವರ ಶಾಂತವೀರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಿಸಿದ ” ವಿಶ್ವ ಜಾನಪದ ದಿನಾಚರಣೆ ೨೦೨೪ ” ಉದ್ಘಾಟಿಸಿ ಮಾತನಾಡುತ್ತಾ ವಿಜಯಪುರ ಜಿಲ್ಲೆಯಲ್ಲಿ ಉಳಿಸಿ ಬೆಳೆಸಲು ಬಾಳನಗೌಡ ಪಾಟೀಲ ನೇತೃತ್ವದ ಕನ್ನಡ ಜಾನಪದ ಪರಿಷತ್ ತುಂಬಾ ಶ್ರಮವಹಿಸಿ ಕೆಲಸ ಮಾಡುತ್ತಿದೆ. ಸರಕಾರ ಮತ್ತು ಸಮುದಾಯ ಅವರಿಗೆ ಸಹಕಾರ ನೀಡಬೇಕು ಎಂದರು.
” ಜನಪದ ವಿಚಾರ ಮತ್ತು ಆಚಾರ ” ಕುರಿತು ಉಪನ್ಯಾಸ ನೀಡಿದ ಸಾಹಿತಿ ಶಂಕರ ಬೈಚಬಾಳ, ಜನಪವವು ಕೆಳವರ್ಗದ ಮತ್ತು ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ಸಂಸ್ಕೃತಿ ಇಂದು ಕಳಾಹೀನವಾಗುತ್ತಿದೆ. ವಿದೇಶಿ ಪದ್ಧತಿಗೆ ನಮ್ಮವರು ಮಾರು ಹೋಗುತ್ತಿದ್ದಾರೆ. ನಮ್ಮ ಮಾಧ್ಯಮಗಳು ಜಾನಪದ ಕಲೆ, ಸಾಹಿತ್ಯ, ಕಲಾವಿದರಿಗೆ ನ್ಯಾಯಯುತ ಪ್ರಚಾರ ಕೊಡಬೇಕುಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಪ್ರಾಚಾರ್ಯ ಪ್ರೊ ಮಹಾದೇವ ರೆಬಿನಾಳ, ಜಾನಪದ ಸಂಸ್ಕೃತಿ ನಮ್ಮ ಇಡಿ ಬದುಕು ಪ್ರತಿಬಿಂಬಿಸುತ್ತದೆ. ಸಾರ್ವಕಾಲಿಕ ಮೌಲ್ಯಸಾರುವ ಜಾನಪದ ವೇದಗಳಿಗಿಂತಲೂ ಹಿರಿದಾಗಿದೆ .ಅಂತ ಸಂಸ್ಕೃತಿಯನ್ನು ರಾಜ್ಯದಲ್ಲಿ ಕಾಪಾಡಲು ಕನ್ನಡ ಜಾನಪದ ಪರಿಷತ್ ಹೊರಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಪ್ರಾಸ್ತಾವಿಕವಾಗಿ ಮಾತನಾಡಿ ಪರಿಷತ್ ಕಾರ್ಯ ಚಟುವಟಿಕೆ ವಿವರಿಸಿದರು. ಕರ್ನಾಟಕ ಬಯಲಾಟ ಆಕಾಡೆಮಿ ಸದಸ್ಯೆ ಶ್ರೀಮತಿ ಅನಸೂಬಾಯಿ ವಡ್ಡರ, ಜಾನಪದ ವಿದ್ವಾಂಸ ನಿವೃತ್ತ ಉಪನ್ಯಾಸಕ ಎಸ್ ಜಿ ಜಂಗಮಶೆಟ್ಟಿ, ಕ ಜಾ ಪ ಜಿಲ್ಲಾ ಸದಸ್ಯ ಮೌಲಾಸಾಹೇಬ ಜಹಾಗೀರದಾರ ಉಪಸ್ತಿತರಿದ್ದರು.
ಭಜನೆ ಕಲಾವಿದ ಶ್ರೀಶೈಲ ಭಾಟಿ ಮತ್ತು ಚೌಡಕಿ ಕಲಾವಿದೆ ಶ್ರೀಮತಿ ಇಂದ್ರಬಾಯಿ ಪಡಗಾರ ಇವರನ್ನು ಸನ್ಮಾನಿಸಲಾಯಿತು. ಉಪ್ಪಲದಿನ್ನಿ ಕಲಾವಿದರಿಂದ ಹೆಜ್ಜೆಪದ, ಬಬಲೇಶ್ವರ ಕಲಾವಿದರಿಂದ ಚೌಡಕಿ ಪದ ಪ್ರದರ್ಶನ ನೀಡಲಾಯಿತು.
ಪ್ರೊ ಮಲ್ಲಿಕಾರ್ಜುನ ಅವಟಿ ನಿರೂಪಿಸಿದರು. ಪ್ರೊ ಎ ಎಂ ಪಟೇಲ್ ಸ್ವಾಗತಿಸಿದರು. ಪ್ರೊ ನಂದಿನಿ ಪಾಟೀಲ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

