ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದಲ್ಲಿ ಅ.೧೪ರಂದು ಮಧ್ಯ ರಾತ್ರಿ ಕುರುಬ ಸಮಾಜದ ಯುವಕರು ಗ್ರಾಮಸ್ಥರಿಗೆ ತಿಳಿಸದೆ ಗ್ರಾ.ಪಂ ಖಾಲಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಅನಾವರಣ ಮಾಡಿದ್ದಾರೆ. ಆದರೆ ಪ್ರತಿಮೆ ಅನಾವಣರದಿಂದ ಯಾರಿಗೂ ತೊಂದರೆ ಇಲ್ಲ, ಹೀಗಾಗಿ ಗ್ರಾಮದ ಎಲ್ಲಾ ಸಮುದಾಯಗಳ ಸಹಕಾರ ಅಗತ್ಯವಿದೆ ಎಂದು ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬೀರಣ್ಣ ಕನಕಟೇಲರ್ ಮನವಿ ಮಾಡಿದ್ದಾರೆ.
ಅವರು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ದ ಹೋರಾಟ ನಡೆಸಿ ದೇಶ ರಕ್ಷಣೆ ಮಾಡಿ ತನ್ನ ಜೀವ ಕಳೆದುಕೊಂಡಿದ್ದಾರೆ. ಅವರ ತ್ಯಾಗ ಬಲಿದಾನವನ್ನು ದೇಶವೇ ಕೊಂಡಾಡುತ್ತಿರುವಾಗ ಮಾಶಾಳ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆಗೆ ವಿರೋಧ ಮಾಡುವುದು ಎಷ್ಟು ಸರಿ? ಪ್ರತಿಮೆ ಪ್ರತಿಷ್ಠಾಪನೆ ವಿರೋಧ ಮಾಡುವ ಬದಲಾಗಿ ಉಳಿದ ಸಮಾಜದ ಬಾಂಧವರು ಬಿಚ್ಚು ಮನಸ್ಸಿನಿಂದ ಸ್ವಿಕರಿಸಿ ಎಲ್ಲರೂ ಸೌಹಾರ್ದಯುತ ಬದುಕಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ರಮೇಶ ನೀಲಗಾರ, ಲಕ್ಷ್ಮಿಪುತ್ರ ಜಮಾದಾರ ಮಾತನಾಡುತ್ತಾ ಕುರುಬ ಸಮಾಜ ಎಲ್ಲಾ ಸಮಾಜಗಳೊಂದಿಗೆ ಭಾವೈಕ್ಯ ಭಾವನೆಯಿಂದ ಇರುವ ಸಮಾಜವಾಗಿದೆ. ಎಲ್ಲರೊಂದಿಗೆ ಹೊಂದಾಣಿಕೆಯಾಗಿ ಜೀವನ ನಡೆಸುತ್ತಿದ್ದೇವೆ. ನಾವು ವಿವಾದ ಎಬ್ಬಿಸುವ ಜನರಲ್ಲ, ಆದರೂ ನಮ್ಮ ಸಮಾಜದ ಮುಖಂಡರಾದ ಜೆ.ಎಂ ಕೊರಬು ಅವರ ಮೇಲೆ ಮಾಶಾಳ ಗ್ರಾ.ಪಂ ಸದಸ್ಯ ಶಿವು ಪ್ಯಾಟಿ ಆರೋಪ ಮಾಡಿದ್ದು ಸರಿಯಲ್ಲ. ಜೆ.ಎಂ ಕೊರಬು ಎಲ್ಲಾ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅಂತವರ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುತ್ತಾ ಪ್ರಚಾರ ಪಡೆದುಕೊಳ್ಳುತ್ತಿರುವ ಶಿವು ಅದರ ಪ್ರತಿಫಲ ಅವರ ಅನುಭವಿಸುತ್ತಾರೆ ಎಂದ ಅವರು ರಾಯಣ್ಣನವರ ಪ್ರತಿಮೆಗೆ ವಿರೋಧ ಮಾಡುವ ಬದಲಾಗಿ ಅವರೇ ಮುಂದೆ ನಿಂತು ವಿವಾದ ಆಗದ ಜಾಗದಲ್ಲಿ ರಾಯಣ್ಣನವರ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾಗಲಿ ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮಾಜಿ ತಾಲೂಕು ಅಧ್ಯಕ್ಷ ವಿಠ್ಠಲ್ ಜಗಲಗೊಂಡ, ಸಿದ್ದರಾಮ ಹೊಸಮನಿ, ಸಿದ್ದು ವಠಾರ, ಬೀರಣ್ಣ ಪೂಜಾರಿ, ಅಮೋಘಿ ನಿಂಗಪ್ಪ, ಇಸಾಕ್ ದಿವುಟಗಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

