ಬಸವನಬಾಗೇವಾಡಿ: ಇಂದಿನ ದಿನಮಾನಗಳಲ್ಲಿ ಅಪಘಾತಗಳಾಗುವ ಸಂಖ್ಯೆ ಹೆಚ್ಚುತ್ತಿರುವುದು ವಿಷಾದಕರ ಸಂಗತಿ. ಅಪಘಾತವಾದ ಸಂದರ್ಭದಲ್ಲಿ ಬೆನ್ನುಹುರಿಗೆ ಏನಾದರೂ ಪೆಟ್ಟಾಗಿದ್ದರೆ ಅಂತಹವರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಅವಕಾಶವಿದೆ ಎಂದು ವಿಜಯಪುರದ ಬೆನ್ನುಹುರಿ ಅಪಘಾತದ ವ್ಯಕ್ತಿಗಳ ಪುನಶ್ಚೇತನ ಕೇಂದ್ರದ ಸಂಚಾಲಕಿ ಈರಮ್ಮ ಕುಮಟಗಿ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಎನ್ಎಸ್ಎಸ್ ಹಾಗೂ ವಿಜಯಪುರದ ರೆಡೆಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೆನ್ನುಹುರಿ ಅಪಘಾತದ ವ್ಯಕ್ತಿಗಳ ಪುನಃಶ್ಚೇತನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆನ್ನುಹುರಿ ದೇಹ ಮತ್ತು ಮೆದುಳಿನ ನಡುವಿನ ಪ್ರಮುಖ ರಚನೆಯಾಗಿದೆ. ಬೆನ್ನುಹುರಿಯು ಮೆದುಳು ಮತ್ತು ದೇಹದ ಉಳಿದ ಭಾಗಗಳ ನಡುವೆ ಒಳಬರುವ ಮತ್ತು ಹೊರಹೋಗುವ ಸಂದೇಶಗಳನ್ನು ಸಾಗಿಸುವ ನರಗಳನ್ನು ಒಳಗೊಂಡಿದೆ. ಇದು ಮಾನವನ್ನು ನೇರವಾಗಿ ನಿಲ್ಲುವಂತೆ ಮಾಡುತ್ತದೆ. ಇಂದು ಅಪಘಾತದಲ್ಲಿ ಬೆನ್ನುಹುರಿಗೆ ಪೆಟ್ಟಾದರೂ ಅಂಜುವಂತಿಲ್ಲ. ನಮ್ಮ ಕೇಂದ್ರವು ಅಂತಹ ಗಾಯಾಳುಗಳಿಗೆ ವೈದ್ಯಕೀಯ ನೆರವಿನೊಂದಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಸದಾಮುಂಚೂಣಿಯಲ್ಲಿದೆ. ನಮ್ಮ ಕೇಂದ್ರದ ಸದುಪಯೋಗವನ್ನು ಪಡೆದುಕೊಂಡು ಸೂಕ್ತ ಚಿಕಿತ್ಸೆ ಪಡೆಯಬಹುದು. ನಮ್ಮ ಕೇಂದ್ರದ ಕುರಿತು ಜನರಿಗೆ ತಿಳಿಸಿದರೆ ಬೆನ್ನುಹುರಿಯಿಂದ ಬಳಲುತ್ತಿರುವ ಜನರಿಗೆ ಉಪಯೋಗವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ರವೀಂದ್ರಗೌಡ ಕೆ., ಪ್ರೊ.ಡಿ.ಎಸ್.ಲಗಳಿ, ಈರಮ್ಮ ಧರೇಕಾರ ಇತರರು ಇದ್ದರು. ಡಾ.ವೈ.ಬಿ.ನಾಯಕ ಪ್ರಾಸ್ತವಿಕವಾಗಿ ಮಾತನಾಡಿ, ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

