ಅಫಜಲಪುರ: ಕಳೆದ ೩ ದಶಕಗಳಿಂದ ಮಾದಿಗರ ಒಳ ಮೀಸಲಾತಿ ಜಾರಿಗೆ ಬರಬೇಕೆಂದು ಹೋರಾಟ ಮಾಡುತ್ತಿರುವ ಮಾದಿಗ ಸಮಾಜಕ್ಕೆ ನ್ಯಾಯ ಒದಗಿಸುವ ಕೆಲಸ ಸುಪ್ರೀಂ ಕೋರ್ಟ್ ಮಾಡಿದೆ. ಆದರೆ ರಾಜ್ಯ ಸರ್ಕಾರ ಬೇಗ ನ್ಯಾ. ಸದಾಶಿವ ವರದಿಯಂತೆ ಮಾದಿಗರಿಗೆ ಒಳ ಮೀಸಲಾತಿ ಜಾರಿಗೆ ತರಬೇಕೆಂದು ಕರ್ನಾಟಕ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಮಾಶಾಳಕರ ಒತ್ತಾಯಿಸಿದರು.
ಅವರು ಪಟ್ಟಣದ ತಹಸೀಲ್ದಾರ ಕಛೇರಿಯಲ್ಲಿ ಪ್ರತಿಭಟನೆ ನಡೆಸಿ ಮಾತನಾಡುತ್ತಾ ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಮೀನಮೇಷ ಎಣಿಸುತ್ತಿದೆ. ಆದರೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ೨೪ ಗಂಟೆಗಳಲ್ಲಿ ಸದಾಶಿವ ವರದಿ ಜಾರಿಗೆ ತರುತ್ತೇವೆಂದು ಸಿದ್ದರಾಮಯ್ಯನವರು ಭರವಸೆ ನೀಡಿದ್ದರು. ಆದರೆ ಕೊಟ್ಟ ಮಾತನ್ನು ಈಗ ತಪ್ಪಿದ್ದು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾಯವಾಗಿದೆ. ವರದಿ ಜಾರಿಗೆ ಮಾಡಲು ಯಾಕೆ ಮೀನಮೇಷ ಎಣಿಸುತ್ತಿದ್ದಾರೋ ತಿಳಿಯುತ್ತಿಲ್ಲ ಇದರಿಂದ ನಮಗೆಲ್ಲ ಬಹಳಷ್ಟು ನೋವಾಗುತ್ತಿದೆ. ಕೆಪಿಎಸ್‌ಸಿ ಹಾಗೂ ಇತರೆ ಇಲಾಖೆಗಳಲ್ಲಿ ಒಳ ಮೀಸಲಾತಿ ಜಾರಿ ಆಗುವ ವರೆಗೂ ಹುದ್ದೆಗಳ ಭರ್ತಿ ತಡೆಹಿಡಿಯಬೇಕು. ಪಟ್ಟಣದಲ್ಲಿ ಬಾಬು ಜಗಜೀವನ್ ರಾಂ ಭವನ ನಿರ್ಮಾಣಕ್ಕೆ ೧ ಎಕರೆ ಜಾಗ ಮಂಜೂರ ಮಾಡುವುದರ ಜೊತೆಗೆ ಜಗಜೀವನ್ ರಾಂ ಪುತ್ತಳಿ ನಿರ್ಮಿಸಬೇಕೆಂದು ತಹಸೀಲ್ದಾರ ಸಂಜೀವಕುಮಾರ ದಾಸರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ ಮಾಶಾಳಕರ, ಭಾಗಣ್ಣ ಘತ್ತರಗಿ, ಶ್ರೀಮಂತ ಭಂಡಾರಿ, ಯಮನಪ್ಪ ಉಡಚಣ, ದತ್ತು ಘೂಳನೂರ, ಸುನೀಲ ಕಟ್ಟಿಮನಿ,ಶಿವಪುತ್ರ ಕಲಬಂಡಿ ಬಡದಾಳ ಪರಶುರಾಮ ಹಡಲಗಿ, ಚಂದ್ರಕಾAತ ತೇಲ್ಕರ್, ನಿಂಗಪ್ಪ ಮಾಂಗ, ಕಾಳಪ್ಪ ತೇಲ್ಕರ್, ಆರೆಪ್ಪ ಆನೂರಕರ, ಭಾಷಾ ಮಣೂರ, ಭಾಗಣ್ಣ ಪಾಟೋಳಿ, ಚಂದ್ರಕಾಂತ ದೊಡ್ಮನಿ, ಹಿರಗಪ್ಪ ಬಿಲ್ವಾಡ, ನಾಗೇಶ ಭಂಡಾರಿ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

