Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ಎಂಜಿವ್ಹಿಸಿ ಕಾಲೇಜಿನಲ್ಲಿ ಜೂ.೨೮ ರಂದು ಬೆಳಿಗ್ಗೆ ೧೦:೩೦ ಗಂಟೆಗೆ “ಜಾನಪದ ಪರಂಪರೆ ಮತ್ತು ಪ್ರಯೋಗ ತಾತ್ವಿಕ ಚಿಂತನೆ ” ಈ ವಿಷಯದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಜೋಗತಿ ಮಂಜಮ್ಮನವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಅಶೋಕ ತಡಸದ ವಹಿಸಲಿದ್ದಾರೆ. ಬೆಳಗಾವಿಯ ಆರ್‌ಪಿಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎನ್.ಬಿ.ಕೋಲ್ಕಾರ ಆಶಯ ನುಡಿಗಳನ್ನಾಡಲಿದ್ದಾರೆ. ಸಂಶೋಧಕರಾದ ಡಾ.ವಾಯ್ ವಾಯ ಕೊಕ್ಕನವರ, ಡಾ. ವೀರೇಶ್ ಹಟ್ಟಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸುತ್ತಿದ್ದು ಹಲವು ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಕಾರ್ಯಕ್ರಮದ ಹಾಗೂ ಗೋಷ್ಠಿಯ ಅಧ್ಯಕ್ಷತೆಯನ್ನು ಎ.ಆರ್.ಮುಲ್ಲಾ ವಹಿಸಲಿದ್ದು ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಎನ್.ಪೋಲೇಶಿ ಹಾಗೂ ಸಂಕಿರಣದ ಸಂಯೋಜಕ ಡಾ. ಪ್ರಕಾಶ ನರಗುಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ದೇವಿ ದೇವಸ್ಥಾನದ ಬಳಿ ಇಸ್ಪೀಟ್ ಆಡುತ್ತಿದ್ದವರ ಮೇಲೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.ಘಾಳಪೂಜಿಯ ಹುಲಗಪ್ಪ ನಾಗರಬೆಟ್ಟ, ಲೊಟಗೇರಿ ಗ್ರಾಮದ ಮಹೇಶ ಹಟ್ಟಿ, ನಾಲತವಾಡದ ಬಸವರಾಜ ಗುಬ್ಬಿ, ಮಹಮ್ಮದ ಮೌಲಾಸಾಬ, ಅಬೂಬಕರ ರಕ್ಕಸಗಿ, ಗುರು ತಂಗಡಗಿ, ಪೀರು ಚಿಮನಕೋರ ಇವರ ಮೇಲೆ ಪ್ರಕರಣ ದಾಖಲಾಗಿದ್ದು ಇಸ್ಪೀಟ್ ಎಲೆಗಳು ಸೇರಿದಂತೆ ಹಣವನ್ನು ವಶಕ್ಕೆ ಪಡೆದಿದ್ದಾರೆ.
೨೬೦ ರೈತ ಕುಟುಂಬಕ್ಕೆ ಬರಬೇಕಿರುವ ೩ ಕೋಟಿ ಬಾಕಿ ಹಣ ಬಿಡುಗಡೆಗೆ ರೈತಸಂಘ ಆಗ್ರಹ ವಿಜಯಪುರ: ಇಂಡಿ ತಾಲೂಕಿನ ಹಿರೇಬೇವನೂರಿನ ಜ್ಞಾನಯೋಗಿ ಶಿವಕುಮಾರ ಸ್ವಾಮೀಜಿ ಸಕ್ಕರೆ ಕಾರ್ಖಾನೆಯಲ್ಲಿಯ ೨೦೧೮-೧೯ ನೇ ಸಾಲಿನಲ್ಲಿ ಕಬ್ಬು ಕಟಾವು ಹಾಗೂ ಸಾಗಾಣಿಕೆಗೆ ಮಾಡಿರುವ ಸುಮಾರು ೩ ಕೋಟಿಗಿಂತಲೂ ಅಧಿಕ ಬಾಕಿ ಇರುವ ಹಣವನ್ನು ಕೂಡಲೇ ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳಾದ ಟಿ. ಭೂಬಾಲನ ಅವರಿಗೆ ಕೃಷಿ ಕಾರ್ಮಿಕರು ಮತ್ತು ಟ್ರಾಕ್ಟರ್ ಮಾಲಿಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.ಈ ವೇಳೆ ಹಿರೇಬೇವನೂರಿನ ಗಿರಮಲ್ಲಗೌಡ ಬಿರಾದಾರ ಮಾತನಾಡಿ, ಹಿಂದಿನ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರು ನಮ್ಮೆಲ್ಲರಿಗೂ ಭರವಸೆ ನೀಡಿ ಆತ್ಮಸ್ಥೈರ್ಯ ತುಂಬಿ ಯಾವುದೇ ಜೀವಹಾನಿ ಮಾಡಿಕೊಳ್ಳಬಾರದೆಂದು ಧೈರ್ಯ ತುಂಬಿದ್ದರು. ಆದರೆ ಈಗ ಸಕ್ಕರೆ ಕಾರ್ಖಾನೆ ದಿವಾಳಿಯಾಗಿದೆ, ಮುಂದೆ ಯಾರು ಕಾರ್ಖಾನೆ ಪ್ರಾರಂಭಿಸುತ್ತಾರೋ ಅವರಿಂದ ಸುಮಾರು ೨೬೦ ಕುಟುಂಬಗಳಿಗೆ ಬರಬೇಕಿರುವ ಹಣ ಕೊಡಿಸುವುದಾಗಿ ಹೇಳಿದ್ದರು, ಆದರ ಪ್ರಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯಿಂದ…
ತಿಕೋಟಾ: ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಆಚರಣೆ ಮಾಡಲಾಯಿತು.ಕೆಂಪೇಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ ಅವರು, ಕೆಂಪೇಗೌಡರು ನವ ನಾಡಿನ ಅಭಿವೃದ್ಧಿ ಚಿಂತಕರಾಗಿದ್ದರು. ನಾಡು ಕಟ್ಟುವಲ್ಲಿ ಇವರ ಪಾತ್ರ ಹಿರಿದಾಗಿದೆ. ಇವರ ಆದರ್ಶಗಳನ್ನು ಇಂದಿನ ಕಾಲದಲ್ಲಿ ಸರ್ವರೂ ಮೈಗೂಡಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ತಾಪಂ ಯೋಜನಾಧಿಕಾರಿ ಆಯೇಷಾ ಸಾಲೋಟಗಿ, ಸಹಾಯಕ ನಿರ್ದೇಶಕರಾದ ಶೋಭಕ್ಕ ಶೀಳಿನ, ವಿಜಯ ಶೇಗುಣಸಿ, ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಅಪರ್ಣಾ ಬದಾಮಿ, ಜಯಶ್ರೀ ಕೆಂಗಲಗುತ್ತಿ, ಸಾವಿತ್ರಿ ಲವಗಿ, ವಿಜಯ ಯರಗಟ್ಟಿ, ಜಯಶ್ರೀ ಪೂಜಾರಿ, ಸುನೀಲ ಬನಸೋಡೆ, ಮಹಾಶಾಂತ ಬಂದಿ, ಸಿಬ್ಬಂದಿಗಳು ಸೇರಿ ಇತರರು ಹಾಜರಿದ್ದರು.
ವಿಜಯಪುರ: ಜಲನಗರದಲ್ಲಿರುವ ಮಹಾನಗರ ಪಾಲಿಕೆಯ ಮಳಿಗೆಯಲ್ಲಿದ್ದ ಅಂಗವಿಕಲ (ಮಾತು ಬಾರದ) ವ್ಯಕ್ತಿಯ ಟೇಲರಿಂಗ್ ಅಂಗಡಿ ಇತ್ತೀಚೆಗೆ ಆಕಸ್ಮಿಕವಾಗಿ ಸುಟ್ಟಿರುವ ಹಿನ್ನೆಲೆ, ಅಂಗಡಿ ಮಾಲೀಕ ಬಸವರಾಜ ಕೂಸೂರ ಅವರಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, ವೈಯಕ್ತಿಕವಾಗಿ ರೂ.೫೦ ಸಾವಿರ ಸಹಾಯ ಧನ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮತ್ತಿತರರು ಇದ್ದರು.
ವಿಜಯಪುರ: ನಾಡಪ್ರಭು ಕೆಂಪೇಗೌಡರು ಆಧುನಿಕ ಬೆಂಗಳೂರಿನ ಮೂಲ ಶಿಲ್ಪಿ. ಆಧುನಿಕ ಬೆಂಗಳೂರಿನ ನಿರ್ಮಾತೃ ಆಗಿರುವ ಇವರು ವಿಜಯನಗರ ಸಾಮ್ರಾಜ್ಯದಲ್ಲಿ ಮುಖ್ಯಸ್ಥರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಗೌಡ ವಂಶಸ್ಥರಾದ ಇವರು ಆ ಕಾಲದಲ್ಲಿ ಅತ್ಯಂತ ವಿದ್ಯಾವಂತ ಯಶಸ್ವಿ ಆಡಳಿತಗಾರರಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದರು ಎಂದು ಬಂಜಾರಾ ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರು ಎಸ್.ವ್ಹಿ.ದೇಶಪಾಂಡೆ ಹೇಳಿದರು.ಗುರುವಾರದಂದು ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ “ನಾಡಪ್ರಭು ಕೆಂಪೇಗೌಡರ ಜಯಂತಿ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜ್ಯಧಾನಿ ಬೆಂಗಳೂರು ಇವತ್ತು ಕೋಟ್ಯಂತರ ಜನರ ಆಶ್ರಯತಾಣವಾಗಿದೆ. ಇಲ್ಲಿಯವರಿಗಿಂತ ಹೆಚ್ಚು ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅತ್ಯಂತ ಸುರಕ್ಷಿತ, ಸುಂದರ ಮತ್ತು ಸುಸಜ್ಜಿತ ನಗರವಾಗಿ ಬೆಂಗಳೂರು ಬೆಳೆಯಲು ಕೆಂಪೇಗೌಡಅವರ ವಿವೇಚನೆ ಮತ್ತು ದೂರದೃಷ್ಟಿಯೇ ಮುಖ್ಯಕಾರಣ ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್.ಕೆ.ಶಿಂಧೆಯವರು ಮಾತನಾಡುತ್ತ, ಕೆಂಪೇಗೌಡರು ೧೫೩೭ ರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಯಶಸ್ವಿಯಾಗಿ…
ಇಂಡಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6 ರಿಂದ 8ನೇ ತರಗತಿ) ಸಂಘಕ್ಕೆ ಸರ್ಕಾರವು ಮಾನ್ಯತೆ ನೀಡಿದ್ದು ಅತೀವ ಸಂತಸ ತಂದಿದೆ ಎಂದು ಜಿಪಿಟಿ ಸಂಘದ ತಾಲ್ಲೂಕು ಅಧ್ಯಕ್ಷ ಶಂಕರ್ ಕೋಳೆಕರ ಹೇಳಿದರು.ಪಟ್ಟಣದ ತಾಲ್ಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದಬಿಇಓ ಟಿ ಎಸ್ ಆಲಗೂರ ಅವರಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.ಮಾನ್ಯತೆಗಾಗಿ ಶಿಕ್ಷಕರ ಸಂಘದ ಅಧ್ಯಕ್ಷರು ಶಾಲಾ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಕರ್ನಾಟಕ ಸಿವಿಲ್ ಸೇವಾ (ಸೇವಾ ಸಂಘಗಳ ಮಾನ್ಯತೆ) ಸಂಘಗಳ ಮಾನ್ಯತೆ ನಿಯಮಗಳು-2015 ರ ಅನ್ವಯ ಮಾನ್ಯತೆ ಹೊಂದಲು ಅರ್ಹತೆ ಹೊಂದಿರುತ್ತಾರೆ ಎಂದು ಶಾಲಾ ಶಿಕ್ಷಣ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ಸರ್ಕಾರವು ಸಂಘಕ್ಕೆ ಮಾನ್ಯತೆ ನೀಡಿದ್ದು ಅತೀವ ಸಂತಸ ತಂದಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಂಡಿ ತಾಲೂಕ ಅಧ್ಯಕ್ಷ ಎಸ್…
ಇಂಡಿ: ರಾಜ್ಯ ರಾಜ್ಯಧಾನಿ ಬೆಂಗಳೂರು ಇವತ್ತು ಕೋಟ್ಯಾಂತರ ಜನರ ಆಶ್ರಯತಾಣವಾಗಿದೆ. ಇಲ್ಲಿನವರಿಗಿಂತ ಹೆಚ್ಚು ಮಂದಿ ಹೊರಗಿನಿಂದ ಬಂದು ಇಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಅತ್ಯಂತ ಸುರಕ್ಷಿತ, ಸುಂದರ ಮತ್ತು ಸುಸಜ್ಜಿತ ನಗರವಾಗಿ ಬೆಂಗಳೂರು ಬೆಳೆಯಲು ಕೆಂಪೇಗೌಡ ಅವರ ವಿವೇಚನೆ ಮತ್ತು ದೂರದೃಷ್ಟಿಯೇ ಮುಖ್ಯಕಾರಣ ಎಂದು ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಆದರ್ಶ ಶಾಲೆಯಲ್ಲಿ, ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ನಾಡುಪ್ರಭು ಕೆಂಪೇಗೌಡ ಜಯಂತಿ ನಿಮತ್ಯವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚಾಣೆ ಮಾಡಿ ಮಾತನಾಡಿದರು.ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿರುವ ಕೆಂಪೇಗೌಡ ಜಾತ್ಯಾತೀತ ಸಮಾಜದ ನೆಮ್ಮದಿ ಬದುಕಿಗೆ ಅದ್ವಿತೀಯ ಕೊಡುಗೆ ನೀಡಿದ ಮಹಾನ ನಾಯಕರು.ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸುವಾಗಲೇ ಪ್ರತಿಯೊಂದು ಜನಾಂಗದ ಕುಲಕಸುಬು ಹಾಗೂ ಹಾಗೂ ವೃತ್ತಿ ಆಧಾರಿತವಾದ 54 ಪೇಟೆಗಳನ್ನು ನಿರ್ಮಿಸಿದರು. ಇದರಿಂದ ಎಲ್ಲಾ ಸಮುದಾಯದ ಬಡಕುಟಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಯಿತು. ಅಕ್ಕಿಪೇಟೆ, ಅರಳೇಪೇಟೆ, ತಿಗಳರಪೇಟೆ, ರಾಗಿಪೇಟೆ, ಗೊಲ್ಲರಪೇಟೆ ಹೀಗೆ ಮುಂತಾದ ಪೇಟೆಗಳನ್ನು ನಿರ್ಮಿಸಿರುವುದು ಅವರ ಸರ್ವ ಜನಾಂಗದ ಅಭ್ಯುದಯದ…
ಇಂಡಿ: ಶಿಕ್ಷಕರು ಪ್ರತಿ ಶಾಲೆಯಲ್ಲಿ ಸೇವಾದಳದ ಘಟಕವನ್ನು ಸ್ಥಾಪಿಸಿ, ಮಕ್ಕಳಲ್ಲಿ ರಾಷ್ಟ್ರಭಕ್ತಿ, ಶಿಸ್ತು ಹಾಗೂ ಸಾಮಾಜಿಕ ಜೀವನ ನಿರ್ವಹಣೆಯ ಪಾಠ ಅರಿಯಲು ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ತಾಲೂಕ ಭಾರತ ಸೇವಾದಳದ ಅಧ್ಯಕ್ಷ ಕೆ ಪಿ ಭೈರಜಿ ಹೇಳಿದರು.ಪಟ್ಟಣದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ತಾಲೂಕು ಘಟಕ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ನಡೆದ ಶಿಕ್ಷಕ, ಶಿಕ್ಷಕಿಯರ ಒಂದು ದಿನದ ಮಿಲಾಪ್ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಂಪನ್ಮೂಲ ವ್ಯಕ್ತಿ ಅಂಬಣ್ಣ ಸುಣಗಾರ ಮಾತನಾಡಿ, ಶಿಕ್ಷಕ ಸಮುದಾಯ ಸೇವಾ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಮೂಲಕ ಭಾರತ ಸೇವಾದಳವನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ. ಸ್ವಾತಂತ್ರ್ಯ ಚಳುವಳಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಸಾತ್ ಕೊಟ್ಟ ಏಕೈಕ ಸಂಸ್ಥೆ ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ…
ಇಂಡಿ: ಕೆಂಪೇಗೌಡರು ಎಲ್ಲ ಜಾತಿ, ಸಮುದಾಯದವರಿಗೆ ನೆಲೆ ಕಲ್ಪಿಸಿಕೊಟ್ಟು, ಬೆಂಗಳೂರು ನಗರವನ್ನು ನಿರ್ಮಿಸಿ,ಸರ್ವಧರ್ಮ ಸಹಿಷ್ಣುತೆಯ ಪ್ರಜಾನಾಯಕರಾಗಿದ್ದು ಇಂದಿಗೂ ಆದರ್ಶಪ್ರಾಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.ಕೆಂಪೇಗೌಡರ ವಿವೇಚನಾಯುತ ಯೋಜನೆ ಮತ್ತು ಕತೃತ್ವಶಕ್ತಿಯ ವ್ಯಕ್ತಿತ್ವ ಎಲ್ಲರಿಗೂ ಪ್ರೇರಕಶಕ್ತಿಯಾಗಿದೆ.ಅವರು ಯೋಜನಾನಿಪುಣ ಹಾಗೂ ವಿಚಾರವಾದಿಯಾಗಿ ದೂರದೃಷ್ಟಿತ್ವದೊಂದಿಗೆ ಬೆಂಗಳೂರು ನಗರ ನಿರ್ಮಾಣ ಮಾಡಿದ್ದು ಐತಿಹಾಸಿಕವಾಗಿದೆ ಎಂದು ಹೇಳಿದರು. ಶಿಕ್ಷಕಿ ಎಸ್ ಡಿ ಬಿರಾದಾರ ಮಾತನಾಡಿ, ಶತಶತಮಾನಗಳು ಕಳೆದರೂ ನಾಡಿನ ಜನರು ಮೆಲುಕು ಹಾಕುವ ರೀತಿಯಲ್ಲಿ ಕೆಂಪೇಗೌಡರು ಸುಮಾರು 48 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದು, ಅವರ ದೂರದೃಷ್ಟಿತ್ವದ ಆಡಳಿತ ಇಂದಿನ ಆಡಳಿತ ವ್ಯವಸ್ಥೆಗೆ ಮಾದರಿಯಾಗಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕೆಬಿಎಸ್ ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿ, ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದು, ಐಟಿ ಬಿಟಿ ಕಂಪನಿಗಳ ತವರೆನಿಸಿಕೊಂಡಿದೆ. ಬೆಂಗಳೂರು ಕೆಂಪೇಗೌಡರ ಕಾಲದಲ್ಲೂ…
