ವಿಜಯಪುರ: ಶ್ರೀ ಸಿದ್ದೇಶ್ವರ ಸಂಸ್ಥೆಯ ಅಡಿಯಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ, ನಾಮಿನಿ ಚೇರ್ಮನ್ ಎಸ್.ಎಚ್.ನಾಡಗೌಡ ಹಾಗೂ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿಜಯಲಕ್ಷ್ಮೀ ರಾ ಪಟ್ಟೇದ ಹಾಗೂ ಉಪ ಪ್ರಾಂಶುಪಾಲೆ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿಜಯಲಕ್ಷ್ಮೀ ರಾ ಪಟ್ಟೇದ ಶ್ರೀ ಕೃಷ್ಣ ಜನ್ಮಾಷ್ಟಮಿ ಕುರಿತು ವಿಶೇಷವಾಗಿ ಮಾತನಾಡಿದರು.
ಮುದ್ದು ಮಕ್ಕಳು ರಾಧೆ ಕೃಷ್ಣ ವೇಷಭೂಷಣ ಧರಿಸಿದ್ದರು ಮತ್ತು ಮುದ್ದು ಮಕ್ಕಳಿಗಾಗಿ ರಾಧೆ ಮತ್ತ ಕೃಷ್ಣ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ಬಾಲಕೃಷ್ಣರೆಲ್ಲರೂ ಕೂಡಿ ಮಡಿಕೆ ಒಡೆಯುವುದರ ಮೂಲಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
ಎಲ್ಲ ಮುದ್ದು ಮಕ್ಕಳು ತಮ್ಮ ಉಡುಪು ವಿನ್ಯಾಸಗಳನ್ನು ಧರಿಸಿ ಗಮನ ಸೆಳೆದರು. ಹಾಗೂ ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು
Subscribe to Updates
Get the latest creative news from FooBar about art, design and business.
Related Posts
Add A Comment

