ವಿಜಯಪುರ: ನಗರದ ಗೀತಾಂಜಲಿ ಮಾದರಿ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆ.26ರಂದು ಬಹಳ ಅದ್ದೂರಿಯಿಂದ ಆಚರಿಸಲಾಯಿತು.
ಪೂರ್ವ ಪ್ರಾಥಮಿಕ ತರಗತಿಯ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷಭೂಷಣ ಧರಿಸಿ ಕಂಗೊಳಿಸಿದರು.
ಮಕ್ಕಳ ವೇಷಭೂಷಣ, ಕಲರವದಿಂದ ಶಾಲೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದ್ವಾಪರದ ಗೋಕುಲವೇ ಧರೆಗಿಳಿದು ಬಂದಂತೆ ಭಾಸವಾಗುತ್ತಿತ್ತು. ಮಕ್ಕಳ ಪಾಲಕರೂ ಸಹ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ವರ್ಗ ಶಿಕ್ಷಕರಾದ ವಿಜಯಲಕ್ಷ್ಮಿ ಆಕಳವಾಡಿ, ಶಬಾನಾ ರುಮಲದಾರ, ಆರತಿ ಕುಂಬಾರ, ಮುಖ್ಯೋಪಾಧ್ಯಯಿನಿ ಶ್ರೀಮತಿ ಸುನಂದಾ ಕೊಂಡಗೂಳಿ, ಹಾಗೂ ಚಿತ್ರಕಲಾ ಶಿಕ್ಷಕ ಬಿ.ಎಸ್.ಪಾಟೀಲ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

