Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಪ್ರಕಾಶ್ ನಾರಾಯಣ ಚೆನ್ನಾಳ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾಹಿತಿ ಹಕ್ಕು ಕಾಯ್ದೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಕಾಯ್ದುಕೊಳ್ಳುವಲ್ಲಿ ಅತ್ಯಂತ ಪ್ರಮುಖ ಕಾಯ್ದೆಯಾಗಿದೆ. ಈ ಕಾಯ್ದೆಯ ಮೂಲಕ ಪ್ರಜೆಗಳಿಗೆ ಸರ್ಕಾರದ ಆಡಳಿತದ ಕುರಿತು ಪ್ರಶ್ನಿಸುವ ಹಾಗೂ ಅಗತ್ಯ ಮಾಹಿತಿಯನ್ನು ಪಡೆಯುವ ಹಕ್ಕು ದೊರೆತಿದೆ ಎಂದು ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಪ್ರಕಾಶ್ ನಾರಾಯಣ ಚೆನ್ನಾಳ ಅವರು ತಿಳಿಸಿದ್ದಾರೆ.ವಿಶ್ವದ ೧೧೨ಕ್ಕೂ ಹೆಚ್ಚು ದೇಶಗಳಲ್ಲಿ ಮಾಹಿತಿ ಹಕ್ಕಿಗೆ ಸಂಬಂಧಿಸಿದ ಕಾಯ್ದೆಗಳು ಜಾರಿಯಲ್ಲಿದ್ದು, ಈ ಪರಿಕಲ್ಪನೆಗೆ ಸುಮಾರು ೩೦೦ ವರ್ಷಗಳ ಇತಿಹಾಸವಿದೆ. ಭಾರತದಲ್ಲಿ ೨೦೦೫ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದ್ದು, ಅದೇ ವರ್ಷ ಕರ್ನಾಟಕದಲ್ಲಿಯೂ ಕಾಯ್ದೆಯನ್ನು ಅನುಷ್ಠಾನಗೊಳಿಸಲಾಯಿತು. ದೇಶದಲ್ಲಿಯೇ ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಪ್ರಕರಣಗಳ ವಿಲೇವಾರಿಯಲ್ಲಿಯೂ ಕರ್ನಾಟಕ ಮಾಹಿತಿ ಆಯೋಗವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದ್ದಾರೆ.ಸಾರ್ವಜನಿಕ ಮಾಹಿತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತೀಯ ಅಂಚೆ ಇಲಾಖೆಯ ವಿಜಯಪುರ ಅಂಚೆ ವಿಭಾಗದ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಒಟ್ಟು ೩೪ ಗ್ರಾಮೀಣ ಡಾಕ್ ಸೇವಕ (ಜಿಡಿಎಸ್), ಶಾಖಾ ಅಂಚೆ ಪಾಲಕ (ಬಿಪಿಎಂ) ಹಾಗೂ ಸಹಾಯಕ ಅಂಚೆ ಪಾಲಕ (ಎಬಿಪಿಎಂ) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಈ ನೇಮಕಾತಿಯು ೧೦ ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಗೆ ಆಗಸ್ಟ್ ೩೧ ರಿಂದ ಸೆಪ್ಟೆಂಬರ್ ೧೯ ರವರೆಗೆ ಆನ್‌ಲೈನ್ ಒನ್ ಟೈಮ್ ನೋಂದಣಿ (ಒಟಿಆರ್) ಮಾಡಲು ಅವಕಾಶ ನೀಡಲಾಗಿದೆ.ಅದರಂತೆ, ಸೆಪ್ಟೆಂಬರ್ ೨ ರಿಂದ ಸೆಪ್ಟೆಂಬರ್ ೨೧ ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಸಲು ಸಮಯಾವಕಾಶ ಕಲ್ಪಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಿಡಿಎಸ್ ನೇಮಕಾತಿ ಪೋರ್ಟಲ್ iಟಿಜiಚಿಠಿosಣ.gov.iಟಿ/gಜsoಟಿಟiಟಿeeಟಿgಚಿgemeಟಿಣ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಎಂ. ಎಸ್. ತೊಗರಿ ಅವರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಡಿ.ಪಿ.ಹೆಚ್.ಡಬ್ಲ್ಯೂ.ಎ. ಐಟಿಐ ಖೇಡ ಕಾಲೇಜು ಆವರಣದಲ್ಲಿ ಸೆ.೨ರಂದು ಬೆಳಗ್ಗೆ ೯ ರಿಂದ ಸಂಜೆ ೫ರವರೆಗೆ ಶಿಶಿಕ್ಷು ಮೇಳ ಆಯೋಜಿಸಲಾಗಿದೆ.ಐಟಿಐ ಸೇರಿದಂತೆ ವಿವಿಧ ತರಬೇತಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಂಠಿಠಿಡಿeಟಿಣiಛಿeshiಠಿ Iಟಿಜiಚಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಉದ್ದಿಮೆದಾರರು ಸಹ ಇsಣಚಿbಟishmeಟಿಣ ಖegisಣಡಿಚಿಣioಟಿ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಮೇಳದ ಪ್ರಯೋಜನ ಮಡೆದುಕೊಳ್ಳಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ನಾಲ್ಕು ಪ್ರತಿಗಳ ಬಯೋಡಾಟಾ, ಅಗತ್ಯ ದಾಖಲೆ ಹಾಗೂ ಭಾವಚಿತ್ರದೊಂದಿಗೆ ಮೇಳಕ್ಕೆ ಹಾಜರಾಗಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೮೦೭೩೩೪೧೫೦೫ ಸಂಪರ್ಕಿಸಬಹುದು ಅಥವಾ ಹತ್ತಿರದ ಯಾವುದೇ ಸರ್ಕಾರಿ, ಅನುದಾನಿತ ಅಥವಾ ಖಾಸಗಿ ಐಟಿಐಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉತ್ತಮ ರಸ್ತೆ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗ ಸಿಗುವುದರ ಜೊತೆಗೆ ಜನರ ಸುಗಮ ಸಂಚಾರಕ್ಕೆ ಮತ್ತಷ್ಟು ಅನುಕೂಲವಾಗಲು ಮಹತ್ವದ ಹೆಜ್ಜೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.ನಗರದ ರಹಮಾನಿಯ ವೃತ್ತದಿಂದ ಕನ್ನಾನ ಫಂಕ್ಷನ್ ಹಾಲ್, ಬಾರಾಕೋಟ ತಾಂಡಾ ಮೂಲಕ ಜುಮನಾಳ, ಖತಿಜಾಪುರ ಕೂಡು ರಸ್ತೆ ನಿರ‍್ಮಾಣಕ್ಕೆ ೫ ಕೋಟಿ ರೂ. ವೆಚ್ಚದಲ್ಲಿ ಹಾಗೂ ಅಥಣಿ ಮುಖ್ಯ ರಸ್ತೆಯಿಂದ ರಾಜಕುಮಾರ ಲೇಔಟ್ ಕೂಡು ರಸ್ತೆ ೧.೫೦ ಕೋಟಿ ವೆಚ್ಚದಲ್ಲಿ ಕೈಗೊಳ್ಳುತ್ತಿರುವ ರಸ್ತೆ ಕಾಮಗಾರಿಗಳಿಗೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲ ಅವರೊಂದಿಗೆ ಜಂಟಿಯಾಗಿ ವಿದ್ಯುಕ್ತ ಚಾಲನೆ ನೀಡಿ, ಮಾತನಾಡಿದ ಅವರು, ವಿಜಯಪುರದ ಸಮಗ್ರ ಅಭಿವೃದ್ಧಿಯ ಪಯಣ ನಿರಂತರವಾಗಿರಲಿದೆ ಎಂದರು.ನಗರದ ರೆಹಮಾನಿಯಾ ವೃತ್ತದಿಂದ ಕನ್ನಾನ್ ಫಂಕ್ಷನ್ ಹಾಲ್ ಹಾಗೂ ಬಾರಾಕೋಟ್ ತಾಂಡಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಾಕಲೇಟ್ ಕದ್ದಿದ್ದಾರೆ ಎಂಬ ಆರೋಪಕ್ಕೆ ಇಬ್ಬರು ಬಾಲಕರಿಗೆ ಪೈಪ್‌ನಿಂದ ಅಮಾನುಷವಾಗಿ ಥಳಿಸಿದ ಘಟನೆ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಆರೋಪಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.ಮಲಘಾಣ ಗ್ರಾಮದ ಆಶಿಫ್ ಬಡೇಗಾರ ಹಾಗೂ ಮಕತುಮ ಸಾಬ್ ಬಡೇಗಾರ ಎಂಬ 10 ಮತ್ತು 11 ವರ್ಷದ ಬಾಲಕರು ಹಲ್ಲೆಗೊಳಗಾದವರು. ಚಾಕಲೇಟ್ ಕದ್ದಿದ್ದಾರೆ ಎಂದು ಆರೋಪಿಸಿ ಅಂಗಡಿ ಮಾಲೀಕ ಅಶೋಕ ಪತ್ತಾರ ಎಂಬಾತ ಬಾಲಕರಿಬ್ಬರನ್ನು ಅಂಗಡಿಗೆ ಕರೆಸಿ ಪೈಪ್‌ನಿಂದ ಥಳಿಸಿದ್ದಾನೆ ಎನ್ನಲಾಗಿದೆ. ಬಾಲಕರ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ರಹಿಮಾನ್ ವಾಲೀಕಾರ ಎಂಬುವರು ಆಲಮೇಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಅಶೋಕ ಪತ್ತಾರನನ್ನು ಬಂಧಿಸಿದ್ದಾರೆ. ಚಾಕಲೇಟ್ ಕದ್ದಿದ್ದಾರೆ ಎಂಬ…
ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ರಾಮತೇರ ಎಂದೇ ಪ್ರಸಿದ್ಧವಾದ ರಾಮತೀರ್ಥ ಜಾತ್ರೆ ಸಹಸ್ರಾರು ಭಕ್ತವೃಂದದ ನಡುವೆ ಭಕ್ತಿ ಭಾವದೊಂದಿಗೆ ಜರುಗಿತು.ಪಟ್ಟಣದ ಹತ್ತಿರದಲ್ಲಿರುವ ಐತಿಹಾಸಿಕ ಹಿನ್ನೆಲೆಯ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ತೀರ್ಥಕುಂಡವಿರುವ ರಾಮತೀರ್ಥ ಕ್ಷೇತ್ರದಲ್ಲಿ ಸಾಂಪ್ರದಾಯಿಕವಾಗಿ ಶ್ರಾವಣ ಮಾಸದ ಕೊನೆಯ ಸೋಮವಾರಕ್ಕಿಂತಲೂ ಮುಂಚಿನ ಸೋಮವಾರ ಜಾತ್ರೆ ಜರುಗುತ್ತದೆ. ಈ ಜಾತ್ರೆಯ ಅಂಗವಾಗಿ ದೇವರಹಿಪ್ಪರಗಿಯ ಕಲ್ಮೇಶ್ವರ ಹಾಗೂ ಕರಿಸಿದ್ಧೇಶ್ವರರ ಪಲ್ಲಕ್ಕಿಗಳು ಸೇರಿದಂತೆ ಸುತ್ತಮುತ್ತಲಿನ ಒಟ್ಟು ೦೯ ಗ್ರಾಮಗಳ ೨೧ ಕ್ಕೂ ಹೆಚ್ಚಿನ ದೇವರುಗಳ ಪಲ್ಲಕ್ಕಿಗಳು ಡೊಳ್ಳು, ಹಲಿಗೆ, ಕಹಳೆ ಸೇರಿ ವಿವಿಧ ವಾಧ್ಯವೃಂದ ಸಹಿತ ಸಹಸ್ರಾರು ಭಕ್ತರೊಂದಿಗೆ ಆಗಮಿಸಿದವು. ನಂತರ ಕ್ಷೇತ್ರದ ತೀರ್ಥಕುಂಡದಲ್ಲಿ ಗಂಗಾಸ್ನಾನ ಹಾಗೂ ಎಲ್ಲ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ನಂತರ ನೆರೆದ ಭಕ್ತರಿಗೆ ದರ್ಶನ ನೀಡಿದವು. ನಂತರ ಪ್ರಮುಖ ಪೂಜಾರಿಗಳಿಂದ ಭವಿಷ್ಯದ ಕುರಿತಾದ ಹೇಳಿಕೆಗಳು ಹೇಳಲ್ಪಟ್ಟವು.ಜಾತ್ರೆಯಲ್ಲಿ ಪಡಗಾನೂರಿನ ಕೆಂಚರಾಯ, ಲಗಮವ್ವ, ಶಿವಣಗಿಯ ಮಡ್ಡಿಸಿದ್ಧ, ಅಮೋಘಸಿದ್ಧ, ನಿವಾಳಖೇಡದ ಲಕ್ಷ್ಮಿ, ಕಗ್ಗೋಡದ ತಿಪ್ಪರಾಯ, ಇಂಗಳಗಿಯ ಅಮೋಘಸಿದ್ಧ ಹಾಗೂ ಮುಳಸಾವಳಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ದೇವರ…
ಇಂಡಿಯಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಆಗಸ್ಟ ೩೧ ಸೋಮವಾರದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಬಿ.ಎಸ್.ಪಾಟೀಲ ಹಿರೇಬೇವನೂರ, ದೇವೆಂದ್ರ ಕುಂಬಾರ, ಶಂಕರಗೌಡ ಪಾಟೀಲ, ಬಾಳು ಮುಳಜಿ, ಅನೀಲ ಜಮಾದಾರ, ಅನೀಲಗೌಡ ಬಿರಾದಾರ, ಮಲ್ಲಿಕಾರ್ಜುನ ಕಿವುಡೆ ಮಾತನಾಡಿ ತಾಲೂಕಿನಾದ್ಯಂತ ಭೀಕರ ಪರಿಸ್ಥಿತಿ ಇದ್ದರೂ ಸರಕಾರ ಇಂಡಿ ತಾಲೂಕನ್ನು ಬರಗಾಲದ ಪಟ್ಟಿಗೆ ಸೇರಿಸದಿರುವುದು ದುರ್ದೈವ. ರಾಜ್ಯ ಸರ್ಕಾರವು ಇಂಡಿ ಕ್ಷೇತ್ರದ ರೈತರ ಹಿತರಕ್ಷಣೆಯನ್ನು ಸಂಪೂರ್ಣವಾಗಿ ಮರೆತು ತೀವ್ರ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.ಸರ್ಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಬಿಜೆಪಿ ಮುಖಂಡರು ಬಲವಾಗಿ…
ಉದಯರಶ್ಮಿ ದಿನಪತ್ರಿಕೆ ಇಂಡಿ: ಬಿಜೆಪಿ ಇಂಡಿ ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷರಾಗಿ ಹಿರೇಬೇವನೂರ ತಾಂಡಾ ನಿವಾಸಿ ಗೀತಾ ವಿವೇಕಾನಂದ ರಾಠೋಡ ಅವರನ್ನು ನೇಮಕ ಮಾಡಿ ಮಹಿಳಾ ಮೋರ್ಚಾ ಅಧ್ಯಕ್ಷ ಬಸಮ್ಮ ಮರಡಿ ಆದೇಶ ಹೊರಡಿಸಿದ್ದಾರೆ.ಪಕ್ಷದ ಬಲವರ್ಧನೆಗೆ ಸದಾ ಶ್ರಮಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ರೈತರಿಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ದ :ಚಂದನ್ ಗೌಡ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ತಮಿಳುನಾಡಿಗೆ ಕಬಿನಿ ನದಿ ನೀರು ಬಿಡುಗಡೆ ವಿರೋಧಿಸಿ ಸೋಮವಾರ ವಿವಿಧ ರೈತಪರ ಸಂಘಟನೆಗಳು ಕಬಿನಿ ಕಾರ್ಯಪಾಲಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿದವು.ಅವಳಿ ತಾಲೂಕಿನ ಜನ ಕುಡಿಯಲು ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕೆರೆ ಕಟ್ಟೆಗಳು ಒಣಗಿಹೋಗಿದ್ದು, ಜಾನುವಾರುಗಳಿಗೆ ನೀರು, ಮೇವು ಪೂರೈಸಲಾರದೆ ಕಷ್ಟ ಪಡುತ್ತಿದ್ದಾರೆ. ಜನತೆ ಇಷ್ಟೆಲ್ಲ ತೊಂದರೆ ಅನುಭವಿಸುತ್ತಿರುವಾಗ ಇಲ್ಲಿನ ಡ್ಯಾಂ ನೀರನ್ನ ತಮಿಳುನಾಡಿಗೆ ಹರಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು. ಕೂಡಲೇ ತಮಿಳುನಾಡಿಗೆ ಹರಿಯುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತರು ಎಚ್ಚರಿಕೆ ನೀಡಿದರು.ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ಮಾತನಾಡಿ, ಯಾವ ಮಾನದಂಡದ ಆದರದ ಮೇಲೆ ಕಬಿನಿ ಡ್ಯಾಂವೊಂದರಿಂದಲೇ ತಮಿಳುನಾಡಿಗೆ ನೀರು ಹರಿಸುತ್ತಿದ್ದೀರಾ? ಕಾವೇರಿ ಕೊಳ್ಳದ ಇತರ ಜಲಾಶಯಗಳನ್ನೂ ಹೊರತುಪಡಿಸಿ, ಈ ಒಂದು ಜಲಾಶಯದಿಂದಲೇ ಯಾಕೆ ನೀರು ಹರಿಸುತ್ತಿದ್ದಾರಾ…
ವಿಜಯಪುರ ಜಿಲ್ಲೆಯನ್ನು ಬರ ಘೋಷಣೆಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯನ್ನಾಗಿ ಘೋಷಣೆ ಹಾಗೂ ರೈತರು ಹಾಗೂ ಸಾರ್ವಜನಿಕರಿಗೆ ಅಗತ್ಯ ಪರಿಹಾರ ಮತ್ತು ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಕರ್ನಾಟಕ ರಾಷ್ಟ್ರ ಸಮಿತಿ ವತಿಯಿಂದ ಮನವಿ ಸಲ್ಲಿಸಿ ಆಗ್ರಹಪಡಿಸಲಾಯಿತು.ವಿಜಯಪುರ ಜಿಲ್ಲೆಯಾದ್ಯಂತ ಪ್ರಸಕ್ತ ವರ್ಷದಲ್ಲಿ ಮಳೆಯ ಕೊರತೆ ಹಾಗೂ ಅಸಮರ್ಪಕ ಮಳೆಯ ಪರಿಣಾಮವಾಗಿ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿವೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ರೈತರು ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತದ್ದು ಮಳೆಯ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ಜೊತೆಗೆ, ಜಿಲೆಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಜಾನುವಾರುಗಳಿಗೆ ಮೇವಿನ ಕೊರತೆ ಹಾಗೂ ನೀರಿನ ಅಭಾವ ಉಂಟಾಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು…
