Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನ ದ್ರಾಕ್ಷಿ ಬೆಳೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು ತಮ್ಮ ಆಧಾರ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ತಮ್ಮ ಹತ್ತಿರದ ಬ್ಯಾಂಕಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್ಸಿ ಸೆಂಟರ್ಗಳಲ್ಲಿ ವಿಮಾ ಯೋಜನೆಯಡಿ ಜುಲೈ ೧೫ ರೊಳಗೆ ದ್ರಾಕ್ಷಿ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬೇಕು. ವಿಮಾ ಕಂತಿನ ಮೊತ್ತ ಪ್ರತಿ ಹೇಕ್ಟರ್ಗೆ ರೂ. ೧೪,೦೦೦ ಆಗಿದೆ. ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಗ್ರಿಕಲ್ಚರ್ ಇನ್ಸುರನ್ಸ ಕಂಪನಿಯ ಪ್ರತಿನಿಧಿ ಪವಿತ್ರಾ ಮೊ- ೮೮೯೯೮೮೭೮೭೩, ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೯೯೪೫೮೯೬೧೯೮, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೮೯೭೧೩೭೯೧೦೮, ಕೊಲ್ಹಾರ ರೈತ ಸಂಪರ್ಕ ಕೇಂದ್ರದ ಸಹಾಯಕ…
ಬಸವನಬಾಗೇವಾಡಿ: ೨೦೨೪-೨೫ ನೇ ಸಾಲಿನ ಮುಂಗಾರು ಹಂಗಾಮಿನ ದ್ರಾಕ್ಷಿ ಬೆಳೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೇ ಇರುವ ರೈತರು ತಮ್ಮ ಆಧಾರ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್ಬುಕ್ ಪ್ರತಿಯೊಂದಿಗೆ ತಮ್ಮ ಹತ್ತಿರದ ಬ್ಯಾಂಕಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ ಅಥವಾ ಸಿಎಸ್ಸಿ ಸೆಂಟರ್ಗಳಲ್ಲಿ ವಿಮಾ ಯೋಜನೆಯಡಿ ಜುಲೈ ೧೫ ರೊಳಗೆ ದ್ರಾಕ್ಷಿ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಬೇಕು. ವಿಮಾ ಕಂತಿನ ಮೊತ್ತ ಪ್ರತಿ ಹೇಕ್ಟರ್ಗೆ ರೂ. ೧೪,೦೦೦ ಆಗಿದೆ. ಎಲ್ಲ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಅಗ್ರಿಕಲ್ಚರ್ ಇನ್ಸುರನ್ಸ ಕಂಪನಿಯ ಪ್ರತಿನಿಧಿ ಪವಿತ್ರಾ ಮೊ- ೮೮೯೯೮೮೭೮೭೩, ಬಸವನಬಾಗೇವಾಡಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೯೯೪೫೮೯೬೧೯೮, ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿ ಮೊ- ೮೯೭೧೩೭೯೧೦೮, ಕೊಲ್ಹಾರ ರೈತ ಸಂಪರ್ಕ ಕೇಂದ್ರದ ಸಹಾಯಕ…
ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದ ಟ್ಯಾಂಕರ್ ಹತ್ತಿರ ಇವಣಗಿ ಗ್ರಾಮದಿಂದ ಹಂಚಿನಾಳ ಗ್ರಾಮದ ಕಡೆಗೆ ಬರುತ್ತಿದ್ದ ಬೈಕಿಗೆ ನರಸಲಗಿ ಗ್ರಾಮದಿಂದ ಬಸವನಬಾಗೇವಾಡಿ ಕಡೆಗೆ ಬರುತ್ತಿದ್ದ ಇನ್ನೊಂದು ಬೈಕಿನ ಸವಾರ ಜೋರಾಗಿ, ನಿರ್ಲಕ್ಷತನದಿಂದ ಬಂದ ಪರಿಣಾಮ ಹಂಚಿನಾಳ ಗ್ರಾಮದ ಹಣಮಂತ ಇಲಕಪ್ಪ ಬಂಡಿವಡ್ಡರ (೫೫) ಮೃತ ಪಟ್ಟ ಘಟನೆ ಮಂಗಳವಾರ ಜರುಗಿದೆ.ಈ ಕುರಿತು ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಸವನಬಾಗೇವಾಡಿ: ಸಾಧನೆ ಮಾಡಿದವರನ್ನು ಪುರಸ್ಕಾರಗಳು ಹುಡುಕಿಕೊಂಡು ಬರುತ್ತವೆ. ಬಡತನ ಸಾಧನೆಗೆ ಅಡ್ಡಿಯಾಗಲಾರದು. ಸಾಧನೆಗೆ ನಿರಂತರ ಪರಿಶ್ರಮದ ಅಗತ್ಯತೆ ಇದೆ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದಲ್ಲಿ ಮಂಗಳವಾರ ಬಸವನಬಾಗೇವಾಡಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ನಗದು ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಧನೆ ಮಾಡಿದವರನ್ನು ಸಮಾಜ ಗುರುತಿಸಿ ಗೌರವಿಸಬೇಕು. ಪ್ರತಿಯೊಬ್ಬರೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕೆಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಇಂದಿನಿಂದಲೇ ನಿರಂತರ ಪ್ರಯತ್ನದಲ್ಲಿ ತೊಡಗಬೇಕು. ಕ್ಲಿಷ್ಟವೆನಿಸಿದ ವಿಷಯಗಳನ್ನು ಶಿಕ್ಷಕರಿಂದ ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.ಶಿಕ್ಷಕ ಅಶೋಕ ಹಂಚಲಿ…
ಬಸವನಬಾಗೇವಾಡಿ: ಪಟ್ಟಣದಿಂದ ಇಂಗಳೇಶ್ವರ ಗ್ರಾಮಕ್ಕೆ ಹೋಗುವ ರಸ್ತೆಗೆ ಹೊಂದಿಕೊಂಡಿರುವ ಡಾ.ಗುಬ್ಬಾ ಅವರ ಜಮೀನು ಹತ್ತಿರ ಸೋಮವಾರ ರಾತ್ರಿ ಬಸವನಬಾಗೇವಾಡಿಯಿಂದ ಇಂಗಳೇಶ್ವರ ಗ್ರಾಮದ ಕಡೆಗೆ ರಭಸವಾಗಿ ಚಲಿಸುತ್ತಿದ್ದ ಸ್ವಿಪ್ಟ್ ಕಾರವೊಂದು ರಸ್ತೆ ಬದಿಯಲ್ಲಿರುವ ಪೂಟ್ ಕಟ್ಟೆಗೆ ಚಾಲಕನ ನಿರ್ಲಕ್ಷ್ಯತನದಿಂದಾಗಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತರಾಗಿ, ಮೂವರು ಗಾಯಗೊಂಡ ಘಟನೆ ಜರುಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು.ಕಾರು ಚಲಾಯಿಸುತ್ತಿದ್ದ ಇಂಗಳೇಶ್ವರ ಗ್ರಾಮದ ಪ್ರಶಾಂತ ಮಹಾದೇವಪ್ಪ ಮಿಣಜಗಿ (೨೮), ಇವನ ಪಕ್ಕದಲ್ಲಿದ್ದ ಇದೇ ಗ್ರಾಮದ ಮಲ್ಲಿಕಾರ್ಜುನ ಮಾಳಪ್ಪ ಡೋಳಗೊಂಡ(೩೦) ಸ್ಥಳದಲ್ಲಿಯೇ ಮೃತ ಪಟ್ಟ ದುರ್ದೈವಿಗಳು.ಇದೇ ಗ್ರಾಮದ ವಿಜಯಕುಮಾರ ಮಲಪ್ಪ ದಳವಾಯಿ (೨೦), ಮಾಳಪ್ಪ ಲಗಮಣ್ಣ ತೆಲಗಿ (೨೧), ರೇವಣಸಿದ್ದಪ್ಪ ಭೀಮರಾಯ ಶೇಖಣ್ಣಿ (೨೪) ಗಾಯಗೊಂಡಿದ್ದಾರೆ. ರೇವಣಸಿದ್ದಪ್ಪ ಶೇಖಣ್ಣಿ ಗಂಭೀರ ಗಾಯಗೊಂಡಿದ್ದು. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಪಿಐ ವಿಜಯ ಮುರಗೊಂಡ ಭೇಟಿ…
ಸಿಂದಗಿ: ಪಟ್ಟಣದ ಎಪಿಎಂಸಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ಅಂಗನವಾಡಿ ಮೇಲ್ವಿಚಾರಕಿಯರಿಗೆ, ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಹಾಗೂ ಫಲಾನುಭವಿಗಳಿಗೆ ಸ್ಮಾರ್ಟ್ ಫೋನ್, ಸಮವಸ್ತ್ರ, ಔಷಧಿ ಸಾಮಗ್ರಿ, ತೂಕದ ಯಂತ್ರ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್‌ಬುಕ್ ಸೇರಿದಂತೆ ವಿವಿಧ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಜು.೧೦ರಂದು ಬೆಳಿಗ್ಗೆ ೧೦ಗಂಟೆಗೆ ಜರುಗಲಿದ ಎಂದು ಸಿಡಿಪಿಒ ಶಂಭುಲಿಂಗ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಅವರ ಆದಿಯಾಗಿ ತಾಲೂಕಿನ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸಿಂದಗಿ: ದಿನನಿತ್ಯ ಯೋಗ ಮಾಡುವುದರಿಂದ ರೋಗ ಮುಕ್ತಿಯಾಗಿ ವ್ಯಕ್ತಿಯ ಆರೋಗ್ಯ ವೃದ್ಧಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಹೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಹಮ್ಮಿಕೊಂಡ ದೈಹಿಕ ಶಿಕ್ಷಕರ ಕ್ರೀಡಾ ಕೂಟದ ಪೂರ್ವಭಾವಿ ಸಭೆಯಲ್ಲಿ ಆಲಗೂರ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ರಮೇಶ ಬಿರಾದಾರ ರಚಿಸಿದ ದೈಹಿಕ ಶಿಕ್ಷಣ, ಆರೋಗ್ಯ ಮತ್ತು ಯೋಗ ಶಿಕ್ಷಣ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಅಳವಡಿಸಿಕೊಳ್ಳಬೇಕು. ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲೂ ಸಾಧ್ಯ ಎಂದರು.ಈ ವೇಳೆ ದೈಹಿಕ ಶಿಕ್ಷಕರಿಗೆ ಉಚಿತವಾಗಿ ಪುಸ್ತಕವನ್ನು ವಿತರಿಸಿ ಯೋಗ ಶಿಕ್ಷಣ ಹಾಗೂ ಯೋಗಾಸನದ ಶಿರಶಾಸನ ಹಾಕುವ ಮೂಲಕ ಪ್ರಯೋಗಿಕವಾಗಿ ವಿವರಿಸಿದರು.ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ಎಂ.ಎಂ.ಕೆಂಭಾವಿ, ರಾಜು ಬಿರಾದಾರ ಪ್ರವೀಣ ಬಿರಾದಾರ, ರಾಜೀವ್ ಬೈರಿ, ಮಂಜು ಕುಂಬಾರ, ಅಶೋಕ್ ಮಾಡಿಗಿ ಸೇರಿದಂತೆ ಅನೇಕರಿದ್ದರು.
ಸಿಂದಗಿ: ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತ್ರಿಶೂಲ ದಾಬಾದಲ್ಲಿ ಬೆಳಗಿನ ಜಾವಾ ಸತೀಶ ತಾತೋಡೆ (೪೪) ಎಂಬ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಿಸಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಿಂದಗಿ: ರೈತರಿಗೆ ಅನುಕೂಲ ಮತ್ತು ಅವಶ್ಯಕತೆಗಳ ಅನುಗುಣವಾಗಿ ಗುಣಮಟ್ಟದ ಕಾಮಗಾರಿಗಳನ್ನು ಮಾಡಬೇಕೆಂದು ಎಂದು ಶಾಸಕ ಅಶೋಕ ಮನಗೂಳಿ ಅಧಿಕಾರಿಗಳಿಗೆ ಸೂಚಿಸಿದರು.ತಾಲೂಕಿನ ರಾಂಪೂರ ಪಿಎ ಗ್ರಾಮದಲ್ಲಿರುವ ಕೃಷ್ಣಭಾಗ್ಯ ಜಲನಿಗಮ ನಿಯಮಿತ ಮುಖ್ಯ ಅಭಿಯಂತರರ ಕಚೇರಿಯಲ್ಲಿ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ೨೦೨೪-೨೫ನೆಯ ಸಾಲಿಗೆ ಮಂಜೂರಾದ ಕ್ಲೋಜರ್ ಅವಧಿ ಹಾಗೂ ವಿಶೇಷ ದುರಸ್ತಿ ಕಾಮಗಾರಿಗಳ ಬಗ್ಗೆ ಕೂಲಂಕುಶವಾಗಿ ಚರ್ಚೆಸಲಾಗಿದ್ದು, ಗುಣಮಟ್ಟದ ಕಾಮಗಾರಿಗಳನ್ನು ನಿರ್ವಹಿಸಬೇಕು. ಅವಶ್ಯವಿರುವ ರಸ್ತೆಗಳ ನಿರ್ಮಾಣ ಕಾಮಗಾರಿಗಳ ಪಟ್ಟಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವೆ. ಇಂಡಿ ಏತ ನೀರಾವರಿ ಕಾಲುವೆಗೆ ಸ್ಕಾಡಾ ಗೇಟುಗಳನ್ನು ಕೂಡಲೇ ಅಳವಡಿಸುವಂತೆ ವ್ಯವಸ್ಥಾಪಕ ನಿರ್ದೇಶರಿಗೆ ನಿರ್ದೇಶನದಂತೆ ದರಗಳನ್ನು ಪರಿಶೀಲಿಸಿ ಅನುಮೋದನೆ ಪಡೆದುಕೊಳ್ಳುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಮುಖ್ಯ ಅಭಿಯಂತರ ರವಿಕೃಷ್ಣ ಎಚ್, ಅಧೀಕ್ಷಕ ಅಭಿಯಂತರ ಮನೋಜಕುಮಾರ ಸೇರಿದಂತೆ ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಚಿಮ್ಮಲಗಿ ನೀರಾವರಿ ಯೋಜನೆಯ ಆಡಿಯಲ್ಲಿ ಬರುವ ಕೋರವಾರ ಶಾಖಾ ಕಾಲುವೆ ಕಾಮಗಾರಿಯು ನಿರ್ಮಾಣವಾಗಿ…
ಸಿಂದಗಿ: ಸ್ನೇಹಕ್ಕಿಂತ ಬಹು ದೊಡ್ಡ ಸಂಬಂಧ ಮಗದೊಂದಿಲ್ಲ. ಕುಟುಂಬದವರ ಬಳಿ ಹೇಳಿಕೊಳ್ಳಲಾಗದ ವಿಷಯಗಳನ್ನು ಗೆಳೆಯರ ಮುಂದೆ ಹೇಳಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಅನಂತಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ೧೯೮೫-೮೬ನೆಯ ಸಾಲಿನ ಎಸ್‌ಎಸ್‌ಎಲ್‌ಸಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡ ಸ್ನೇಹ ಸಮಾಗಮ ಸಮಾರಂಭವನ್ನು ಸಸಿಗೆ ನೀರುನಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸ್ನೇಹವಿಲ್ಲದೇ ಸಂಬಂಧವೇ ಇಲ್ಲ ಎಂಬ ಮಾತಿದೆ. ನನ್ನ ಬದುಕಿನ ಬಾಂಧವ್ಯದಲ್ಲಿ ಅಪರೂಪದ ಸ್ನೇಹಿತರು ಬಳದ ದೊರತಿದ್ದು ಸೌಭಾಗ್ಯ ಎಂದರು.ಈ ವೇಳೆ ನಾಗರತ್ನ ಅಶೋಕ ಮನಗೂಳಿ, ಭೀಮಾಶಂಕರ ಶ್ರೀಗಿರಿ, ಪ್ರಕಾಶ ಗುಣಾರಿ, ಮಾಹಾಂತೇಶ ಕೋರಿ, ದಯಾನಂದ ಪತ್ತಾರ, ನಾರಾಯಣ ಕುಲಕರ್ಣಿ, ಗಂಗಾಧರ ಉಪ್ಪಿನ, ರಾಜಶೇಖರ ಪೂಜಾರಿ, ಜಿಲಾನಿ ಮುಲ್ಲಾ, ಇಮಾಮ ನದಾಫ, ಶಶಿಕಲಾ ಸಾಲಿಮಠ, ಬಸಲಿಂಗಮ್ಮ ಪಟ್ಟಣಶೆಟ್ಟಿ, ಬಸಮ್ಮ ರೇಷ್ಮಿ, ಯಲ್ಲಪ್ಪ ಬಿರಾದಾರ, ಮುತ್ತಪ್ಪ ಪಾತ್ರೋಟ್ಟಿ ಸೇರಿದಂತೆ ಅನೇಕರು ಇದ್ದರು.
