ವಿಜಯಪುರ: ಗಣೇಶೋತ್ಸವ ಪ್ರಸಾದಕ್ಕೆ ಎಫ್.ಎಸ್.ಎಸ್.ಎ.ಐ ಪರವಾನಗಿ ಪಡೆದಿರುವ ವ್ಯಕ್ತಿ/ಸಂಸ್ಥೆಗಳಿಂದ ಮಾತ್ರ ಪ್ರಸಾದ ಪಡೆಯಬೇಕೆಂಬ ನಿಯಮಾವಳಿ ಅವೈಜ್ಞಾನಿಕ ಹಾಗೂ ಹಿಂದೂ ಹಬ್ಬಗಳನ್ನು, ಆಚರಣೆಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಕಿಡಿಕಾರಿದ್ದಾರೆ.
ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ರಾಜ್ಯದ ಜನರ ಮೇಲೆ ಅಷ್ಟೊಂದು ಕಾಳಜಿ ಇದ್ದಲ್ಲಿ, ಇದೇ ನಿಯಮವನ್ನು ಹೋಟೆಲ್, ಡಾಬಾ ಹಾಗೂ ಹಲಾಲ್ ಮಾಂಸವನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳಿಗೂ ಅನ್ವಯ ಆಗಬೇಕಾಗಿತ್ತು.
ಇನ್ನೇನು, ಹಬ್ಬಕ್ಕೆ ಎರಡು ದಿನಗಳು ಇರಬೇಕಾದರೆ ಪಾಲಿಸಲಾಗದ ನಿಯಮವನ್ನು ಹೇರುವುದು ಸರ್ಕಾರದ ಹಿಂದೂ ವಿರೋಧಿ ನೀತಿ ತೋರಿಸುತ್ತದೆ. ಅನ್ಯಕೋಮಿನ ಹಬ್ಬಗಳಲ್ಲಿ ಬೀದಿ ಬೀದಿಯಲ್ಲಿ ಪ್ರಾಣಿಬಲಿ ನೀಡಿ, ಅದರಿಂದ ಮಾಂಸ ಮಾರಾಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ?
ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ತಯಾರು ಮಾಡಬೇಕಾದರೆ ಎಫ್.ಎಸ್.ಎಸ್.ಎ.ಎಲ್ ಪರವಾನಗಿ ಪಡೆದವರಿಂದ ಸರ್ಕಾರ ಮಾಡಿಸುತ್ತಿದೆಯಾ? ಬೀದಿ, ಬೀದಿಗಳಲ್ಲಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಉಪಯೋಗಿಸಿ ತಿಂಡಿ/ಊಟ ಮಾಡುವವರಿಗೂ ಈ ನಿಯಮ ಅನ್ವಯ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

