ವಿಜಯಪುರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವಿಜಯಪುರ ವತಿಯಿಂದ ನಗರದ ಹೊರವಲಯದ ಎನ್‌ಎಚ್೫೦, ಇಬ್ರಾಹಿಂಪುರ ರಿಂಗ್ ರೋಡ್‌ನಲ್ಲಿರುವ ಎಂ.ಜಿ.ಕರ‍್ಸ್. ಪ್ರೈ. ಲಿಮಿಟೆಡ್‌ನಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್, ಟೀಮ್ ಲೀಡರ್, ಸಿ.ಆರ್.ಇ, ಟೆಕ್ನೀಶಿಯನ್ ಮತ್ತು ರಿಸಪ್ಸೇನಿಸ್ಟ್ ಹುದ್ದೆಗಳಿಗೆ ಸೆಪ್ಟಂಬರ್ ೮ರ ಬೆಳಿಗ್ಗೆ ೧೦.೩೦ ಗಂಟೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ. ಐಟಿಐ, ಡಿಪ್ಲೋಮಾ, ಪಿಯುಸಿ ಮತ್ತು ಯಾವುದೇ ಪದವಿ ಪಾಸಾದ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸ್ವ-ವಿವರದೊಂದಿಗೆ ನೇರ ಸಂದರ್ಶನಕ್ಕೆ ಭಾಗವಹಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ೭೦೯೦೦೦೧೬೯೧ಸಂಖ್ಯೆಗೆ ಹಾಗೂ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
