Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಸಾಂಖ್ಯಿಕ ತಜ್ಞ ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನದ ಅಂಗವಾಗಿ ವಿಜಯಪುರ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ನಿರ್ಣಯಗಳನ್ನು ಕೈಗೊಳ್ಳುವಲ್ಲಿ ದತ್ತಾಂಶಗಳ ಬಳಕೆ ಎಂಬ ಘೋಷವಾಕ್ಯದೊಂದಿಗೆ ಸಾಂಖ್ಯಿಕ ದಿನ ಆಚರಣೆ ಮಾಡಲಾಯಿತು.ಬುಧವಾರ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಎನ್.ಕೆ.ಗೋಠೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಯೋಜನೆಗಳನ್ನು ರೂಪಿಸಲು ಅಂಕಿ-ಅಂಶಗಳು ಮಹತ್ವದ ಪಾತ್ರ ವಹಿಸುತ್ತವೆ. ಯಾವುದೇ ಕೆಲಸವನ್ನು ಮಾಡಲು ಮೊದಲಿಗೆ ಯೋಜನೆಯನ್ನು ಹಾಕಿಕೊಳ್ಳಬೇಕು. ಯೋಚನೆ, ಯೋಜನೆಯಿಂದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.ವ್ಹಿವ್ಹಿಎಸ್ ಭನಸಿಲ್ ವ್ಹಿಠಲದಾಸ ದರಬಾರ ಪದವಿ ಮಹಾ ವಿದ್ಯಾಲಯದ ಉಪನ್ಯಾಸಕ ಆನಂದ ಕುಲಕರ್ಣಿ ನಿರ್ಣಯ ಕೈಗೊಳ್ಳುವಲ್ಲಿ ದತ್ತಾಂಶಗಳ ಬಳಕೆ (Use of Data for Decision Making) ಕುರಿತು ಉಪನ್ಯಾಸ ನೀಡಿ, ನಮ್ಮ ದಿನನಿತ್ಯದ ಜೀವನದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರವನ್ನು ಹೇಗೆ ಉಪಯೋಗಿಸುತ್ತೆವೆ ಎಂಬುವುದನ್ನು ನೈಜ ಉದಾಹರಣೆಗಳೊಂದಿಗೆ ವಿವರಿಸಿ ಸವಿಸ್ತಾರವಾಗಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಬಸವನ ಬಾಗೇವಾಡಿ ತಾಲ್ಲೂಕಿನ…
ವಿಜಯಪುರ: ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯಲ್ಲಿ ಮಂಗಳವಾರ ೧೫ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿದ್ದು, ಬಾಕಿ ಉಳಿದ ಲಿಂಗತ್ವ ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಿ ಗೃಹಲಕ್ಷ್ಮೀ ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ಸರ್ಕಾರ ಮಹಿಳೆಯರ ಸರಿಸಮಾನವಾಗಿ ಲಿಂಗತ್ವ ಅಲ್ಪಸಂಖ್ಯಾಥರನ್ನೂ ಗೃಹಲಕ್ಷ್ಮೀ ಫಲಾನುಭವಿಗಳೆಂದು ಪರಿಗಣಿಸಿ ಅವರ ಖಾತೆಗಳಿಗೂ ಸಹ ಹಣ ಜಮೆ ಮಾಡಲು ನಿರ್ಧರಿಸಿದೆ. ಜಿಲ್ಲೆಯಲ್ಲಿ ೨೫೦೦ಕ್ಕೂ ಹೆಚ್ಚು ಲಿಂಗತ್ವ ಅಲ್ಪಸಂಖ್ಯಾತರಿದ್ದು, ಸಧ್ಯ ೨೬೦ ಜನರು ಮಾತ್ರು ಗುರುತಿನ ಚೀಟಿ ಹೊಂದಿದ್ದು, ಅವರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಹ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾಡಳಿತ ನೀಡುವ ಗುರುತಿನ ಚೀಟಿ ಪಡೆದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದರೆ ಅವರ ಖಾತೆಗೂ ಮಾಸಿಕ ಎರಡು ಸಾವಿರ ರೂ. ಜಮೆಯಾಗಲಿದ್ದು, ಈ ಯೋಜನೆಯಡಿ ಜಿಲ್ಲೆಯ ಎಲ್ಲ ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲಾಡಳಿತದಿಂದ ಗುರುತಿನ ಚೀಟಿ ಪಡೆದು ಅರ್ಜಿ ಸಲ್ಲಿಸಿ ಸದುಪಯೋಗ ಪಡೆದುಕೊಳ್ಳುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲೆಯಲ್ಲಿನ ಗ್ರಾಮೀಣ ಪ್ರದೇಶಗಳಿಗೂ ಬಿಎಸ್‌ಎನ್‌ಎಲ್ ೪ಜಿ ಸೇವೆಗಳನ್ನು ತ್ವರಿತವಾಗಿ ಒದಗಿಸಲು ಆದ್ಯತೆ ಮೇರೆಗೆ ಕಾರ್ಯನಿರ್ವಹಿಸುವಂತೆ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಬಿಎಸ್‌ಎನ್‌ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಸೋಮವಾರ ನಡೆದ ಬಿಎಸ್‌ಎನ್‌ಎಲ್ ಟೆಲಿಕಾಂ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಅವಳಿ ಜಿಲ್ಲೆಯ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ಹಾಗೂ ಬೆಂಬಲ ನೀಡುವುದಾಗಿ ಅವರು ಭರವಸೆ ನೀಡಿದರು.ಬಿಎಸ್‌ಎನ್‌ಎಲ್‌ನ ಡಿಜಿಎಂ ರವೀಂದ್ರ ಜಂಬಗಿ ಅವರು ಮಾತನಾಡಿ, ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ೪ಜಿ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ದಿಪಡಿಸಲಾಗಿದೆ. ಇದನ್ನು ಸುಲಭವಾಗಿ ೫ಜಿಗೆ ಉನ್ನತೀಕರಿಸಬೇಕಾಗಿದ್ದು, ಮುಂದಿನ ೧೦ ತಿಂಗಳೊಳಗೆ ಜಿಲ್ಲೆಯಾದ್ಯಂತೆ ೩೪೩ ಹೊಸ ೪ಜಿ ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗುತ್ತಿದೆ ಎಂದರು.ಸಭೆಯಲ್ಲಿ ಉಪ ಮಹಾಪ್ರಬಂಧಕ ಅರವಿಂದ ಸಕಟೆ, ಎಜಿಎಂ ಎ.ವ್ಹಿ.ಮಹಾಜನ್, ಮುಖ್ಯ ಲೆಕ್ಕಾಧಿಕಾರಿ ಎ.ಎಂ.ಪಾಟೀಲ, ಎಜಿಎಂ ಎಸ್.ಎಂ.ರಾಠೋಡ, ವಿ.ಡಿ.ನಾಯಕ, ಲೆಕ್ಕಾಧಿಕಾರಿ ರಾಮಪ್ಪ ಹೂಗಾರ ಸಭೆಯಲ್ಲಿ ಉಪಸ್ಥಿತರಿದ್ದರು.
ವಿಜಯಪುರ: ಜಿಲ್ಲೆಯ ಎಲ್ಲ ಶೈಕ್ಷಣಿಕ ವಲಯಗಳಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಆಯ್ಕೆ ಮಾಡಿಕೊಂಡ ೧೦೦ ಶ್ರವಣ ನ್ಯೂನ್ಯತೆ ಹೊಂದಿರುವ ಸಿಡಬ್ಲೂಎಸ್‌ಎನ್ ಮಕ್ಕಳಿಗೆ ಬೆಂಗಳೂರಿನ ‘ವಿ ಹಿಯರ್’ ಸಂಸ್ಥೆ ಸಹಯೋಗದಲ್ಲಿ ಸಾಧನ-ಸಲಕರಣೆ ವಿತರಣಾ ಶಿಬಿರ ವಿಜಯಪುರ ನಗರದ ಗಾಂಧಿ ಚೌಕ್ ಹತ್ತಿರವಿರುವ ಸರಕಾರಿ ಬಾಲಕಿಯರ ಪ್ರೌಢ ಶಾಲೆ ಶಾರದಾ ಭವನದಲ್ಲಿ ಜುಲೈ ೧೨ ರಂದು ಬೆಳಿಗ್ಗೆ ೯-೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಸಿಂದಗಿ ಪಟ್ಟಣದ ರಿಸನಂ.೭೫೧ರ ಪೈಕಿ ೧-೦೦ ಎಕರೆ ಜಮೀನಿನಲ್ಲಿ ಶೀಥಲ ಗೃಹ ನಿರ್ಮಾಣ ಮಾಡಲು ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಿಂದಗಿ ಇವರಿಗೆ ಜಮೀನು ಮಂಜೂರಿಸಲು ಉದ್ಧೇಶಿಸಿದೆ.ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆಯ ಮೂವತ್ತು ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ವಿಜಯಪುರ: ಜಿಲ್ಲೆಯ ತಿಕೋಟ ತಾಲೂಕಿನ ಹೊನವಾಡ ಗ್ರಾಮದಲ್ಲಿ, ತಾಳಿಕೋಟೆ ತಾಲೂಕಿನ ಕಲಕೇರಿ ಹಾಗೂ ತುರಕನಗೇರಿ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜುಲೈ ೧೭ರವರೆಗೆ ಮೊಹರಂ ಹಬ್ಬ ಆಚರಣೆ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.
ಜು.೧೩ರಂದು ರಾಷ್ಟ್ರೀಯ ಲೋಕ್ ಅದಾಲತ್ | ಜಿಲ್ಲಾ ನ್ಯಾಯಾಧೀಶ ಶಿವಾಜಿ ನಲವಡೆ ಸುದ್ದಿಗೋಷ್ಠಿ ವಿಜಯಪುರ: ಜಿಲ್ಲೆಯಾದ್ಯಂತ ಇರುವ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಜುಲೈ ೧೩ ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಈ ಅದಾಲತ್‌ನಲ್ಲಿ ಕಕ್ಷಿದಾರರು ಭಾಗವಹಿಸಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಕ್ಕೆ ಅವಕಾಶವಿರುವುದರಿಂದ ಈ ಅದಾಲತ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಶಿವಾಜಿ ಅನಂತ ನಲವಡೆ ಅವರು ತಿಳಿಸಿದರು.ಬುಧವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಎಡಿಆರ್ ಕಟ್ಟಡದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರವಾನ್ವಿತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಎಲ್ಲ ವರ್ಗದ ಕಕ್ಷಿದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ತಾಲೂಕಾ ನ್ಯಾಯಾಲಯಗಳಲ್ಲಿ ಜುಲೈ ೧೩ ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ರಾಜಿಗೆ ಒಳಪಡಬಹುದಾದ ವ್ಯಾಜ್ಯ…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ) – ಜಯಶ್ರೀ.ಜೆ.ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:೯೪೪೯೨೩೪೧೪೨ ದೇವರು ನಮಗೆ ನೂರ್ಕಾಲ ಸೊಗಸಾದ ಜೀವನ ಕರುಣಿಸಿದ್ದಾನೆ. ಸಂತಸದ ಜೀವನಕ್ಕೆ ಬೇಕಾದುದ್ದೆಲ್ಲವನ್ನೂ ನಾವು ಜಗಕೆ ಕಾಲಿಡುವ ಮುನ್ನವೇ ನಮಗಾಗಿ ಸೃಷ್ಟಿಸಿದ್ದಾನೆ. ಹಸಿರುಟ್ಟ ಭೂರಮೆ, ಜಗವ ಬೆಳಗುವ ರವಿಚಂದ್ರರು, ಸುಳಿದು ಸೂಸುವ ತಂಗಾಳಿ, ಉಲಿವ ನಲಿವ ಹಕ್ಕಿ ಪಕ್ಕಿ ಒಂದೇ ಎರಡೇ. ಎರಡು ಕಣ್ಣು ಸಾಲದು ನಿಸರ್ಗದ ಸೊಬಗನ್ನು ತುಂಬಿಸಿಕೊಳ್ಳಲು. ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಅನುಭವಿಸುವ ಆನಂದಿಸುವ ಅವಕಾಶವು ನಮಗಿದೆ. ಒಳ್ಳೆಯದನ್ನು ಮಾಡಿ,ನೋಡಿ ಹೇಳಿ, ಕೇಳಿ ದಿವ್ಯ ಭವ್ಯ ಜೀವನ ಅನುಭವಿಸಲು ಭಗವಂತ ಅನುವು ಮಾಡಿಕೊಟ್ಟಿದ್ದಾನೆ. ಅಂದರೆ ಸಾತ್ವಿಕ ಜೀವನ ಸಾಗಿಸುವುದಕ್ಕೆ ಈ ಜಗದಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಆದರೆ ನಾವು ಒಳ್ಳೆಯದನ್ನು ಮಾಡದೆ, ನೋಡದೆ ಕುರುಡರಂತೆ ಕೆಟ್ಟದ್ದರ ಹಿಂದೆ ಓಡುತ್ತಿದ್ದೇವೆ. ಅಮೂಲ್ಯವಾದ ಬದುಕಿನ ನಿಜ ಸಿರಿ ಸಂಪದದ ಬೆಲೆ ತಿಳಿಯದೆ ಒದ್ದಾಡುತ್ತಿದ್ದೇವೆ.ತನು, ಮನ, ನಿಸ್ಸೀಮವಾದ ಬುದ್ಧಿಮತ್ತೆಯ ಸಾಮರ್ಥ್ಯ, ಭಾವದ ಬೆಲೆ ಗುರುತಿಸದೆ ಜಗದ ಎಲ್ಲ ಆಸ್ತಿಯನ್ನು ನಮ್ಮದಾಗಿಸಿಕೊಳ್ಳುವ ಹುಚ್ಚು…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಆ ಕುಟುಂಬ ತನ್ನ ಮನೆಯ ಯಜಮಾನನನ್ನು ಕಳೆದುಕೊಂಡಿತ್ತು, ಮತ್ತೊಂದು ಕುಟುಂಬ ತನ್ನ ಮನೆಯ ಪ್ರೀತಿಯ ಮಗನನ್ನು… ಒಬ್ಬ ಹೆಣ್ಣು ಮಗಳು ತಾನು ಮದುವೆಯಾದ ಪತಿಯನ್ನು ಕಳೆದುಕೊಂಡರೆ ಆ ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಅದು ಸುಮಾರು ನಾಲ್ಕು ವರ್ಷಗಳ ಹಿಂದಿನ ದುರ್ಘಟನೆ. ಪೂರ್ವ ಮಿಜೋರಾಂನ ಗ್ಯಾಲ್ವನ್ ಕಣಿವೆಯಲ್ಲಿ ದುಷ್ಟ ಕೆಂಪು ಚೀನಿಯರ ಬರ್ಬರ ಕೃತ್ಯವು ಸುಮಾರು 20 ಜನ ಭಾರತೀಯ ಮಿಲಿಟರಿ ಪಡೆಯ ಯೋಧರನ್ನು ಬಲಿ ತೆಗೆದುಕೊಂಡ ಹೃದಯವಿದ್ರಾವಕ ಘಟನೆ ದೇಶದ ಜನರ ರಕ್ತವನ್ನು ಕುದಿಯುವಂತೆ ಮಾಡಿತ್ತು. ಜೂನ್ 15 2020ರ ಮಧ್ಯರಾತ್ರಿ 4300 ಮೀಟರ್ ಎತ್ತರದ (14000ಫೀಟ್ ) ಎತ್ತರದಲ್ಲಿರುವ ಆಕ್ಸಿಜನ್ ಕೊರತೆ ಇರುವ, ಶೂನ್ಯ ತಾಪಮಾನವಿರುವ, ಕಡಿದಾದ ಕಲ್ಲು ಮತ್ತು ಹಿಮದ ಬೆಟ್ಟಗಳ, ವಿಚಿತ್ರ ತಿರುವುಗಳನ್ನು ಹೊಂದಿರುವ ಪರ್ವತ ಶ್ರೇಣಿಯ ಮಗ್ಗುಲಲ್ಲಿಯೇ ರಭಸವಾಗಿ ಹರಿಯುವ ಗ್ಯಾಲ್ವನ್ ನದಿಯ ಆಳವಾದ ಕಣಿವೆಯಲ್ಲಿ ಭಾರತೀಯ ಮಿಲಿಟರಿ ಪಡೆಯ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯವದು.…
ಧಾರವಾಡ: ಉತ್ತರದ ಸಂಗೀತವನ್ನು ದಕ್ಷಿಣಕ್ಕೆ ತಂದ ಪ್ರಮುಖರಲ್ಲಿ ಒಬ್ಬರಾದ ಮತ್ತು ತಮ್ಮ ಶಿಷ್ಯ ಪರಂಪರೆಯ ಮೂಲಕ ಧಾರವಾಡಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ತವರು ಎನ್ನುವ ಖ್ಯಾತಿ ತಂದುಕೊಡುವಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡಿದ, ಗಾನಯೋಗಿ ಪಂಚಾಕ್ಷರ ಗವಾಯಿಗಳವರ ಪುಣ್ಯಸ್ಮರಣೆ ‘ಗುರು ಗುಣಗಾನ’ ಕವಿಗೋಷ್ಠಿ, ಕಾವ್ಯಗಾಯನ ಮತ್ತು ನೃತ್ಯ ನಮನವನ್ನು ಒಳಗೊಂಡ ಸಮಾರಂಭವು ದಿನಾಂಕ: ೧೪ ಜುಲೈ ೨೦೨೪ ಸಂಜೆ ೪-೦೦ ಗಂಟೆಗೆ ಧಾರವಾಡದ ರಂಗಾಯಣದಲ್ಲಿ ಗದುಗಿನ ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಆಯೋಜಿಸಿದೆ.ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಗದಗ ಇವರು ಅಧ್ಯಕ್ಷತೆ ವಹಿಸಿಕೊಳ್ಳುವರು ಶ್ರೀಮತಿ ಮೃಣಾಲ ಜೋಶಿ ಅಧ್ಯಕ್ಷರು, ಸಂಸ್ಕೃತಿ ಶಿಶು ಮಂದಿರ, ಧಾರವಾಡ, ಪ್ರಕಾಶ ಬಾಳಿಕಾಯಿ ವ್ಯವಸ್ಥಾಪಕರು, ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ ಡಾ. ಎ. ಎಲ್ ದೇಸಾಯಿ, ಸಹಾಯಕ ಉಪನ್ಯಾಸಕರು ಕ. ವಿ. ವಿ. ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯ, ಧಾರವಾಡ ಅತಿಥಿಗಳಾಗಿ ಭಾಗವಹಿಸುವರು. ಡಾ. ಪಂ. ಪು. ಸೇವಾ ಸಮಿತಿಯ…
