ದೇವರಹಿಪ್ಪರಗಿ: ಇಂದಿನ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾತ್ಮಕ ಹಾಗೂ ಪ್ರಯತ್ನಶೀಲರಾದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಕೆಸರಟ್ಟಿ ಶಂಕರಲಿಂಗಮಠದ ಸೋಮಲಿಂಗ ಮಹಾರಾಜರು ಹೇಳಿದರು.
ತಾಲ್ಲೂಕಿನ ಕೆಸರಟ್ಟಿ ಗ್ರಾಮದ ಶಿವಶಂಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಜರುಗಿದ ಕೊಂಡಗೂಳಿ ವಲಯ ಮಟ್ಟದ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿ ಮಾತನಾಡಿದರು.
ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಎಮ್.ಎನ್.ಒಡೆಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಎಸ್.ಹಿರೇಕುರುಬರ ಮಾತನಾಡಿದರು.
ಕೊಂಡಗೂಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾವಲಬಿ ಸೋಲಾಪೂರ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ ಚವ್ಹಾಣ, ಮುಖ್ಯಶಿಕ್ಷಕಿ ಮಧುಮತಿ ತೋಟದ, ಬಿ.ಡಿ.ಮುಲ್ಲಾ, ಶಂಕರರಾವ್ ಕುಲಕರ್ಣಿ, ಚಂದು ನಾಯಕ್, ಜಿ.ಬಿ.ಹೊಕ್ಕುಂಡಿ, ಎಸ್.ಎಸ್.ಕುಂಬಾರ, ಮಹಾಂತೇಶ ಮಮದಾಪೂರ, ಜೆ.ಎಸ್.ಸಿಂದಗಿ, ಶೈಲಾ ಕೆಂಭಾವಿ, ರಾಜು ನಾಯಕ, ಬಾಬುರಾವ ಬಿರಾದಾರ, ಎಸ್.ಎಸ್.ಹಾದಿಮನಿ ಹಾಗೂ ಮಕ್ಕಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

