ದೇವರಹಿಪ್ಪರಗಿ: ವ್ಯಕ್ತಿ ಶಾಶ್ವತವಲ್ಲ, ಆದರೆ ವ್ಯಕ್ತಿತ್ವ ಮತ್ತು ವ್ಯಕ್ತಿಯ ವಿಚಾರಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ಸಾವಿತ್ರಿ ಬಾತಾಖಾನೆ ಹೇಳಿದರು.
ತಾಲ್ಲೂಕಿನ ಸಾತಿಹಾಳ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗುರುವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಯಾಳವಾರ, ಸಾತಿಹಾಳ, ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಮಾತನಾಡಿದರು. ಇಂದು ನೀವು ಕೇವಲ ಕಾರ್ಯಕರ್ತೆಯರಲ್ಲ, ಶಿಕ್ಷಕಿಯರು. ನೀವು ಮಾಡಿದ ಒಳ್ಳೆಯ ಕೆಲಸಗಳು, ಮಕ್ಕಳಿಗೆ ನೀಡಿದ ಶಾಲಾ ಪೂರ್ವಶಿಕ್ಷಣ ಮಕ್ಕಳಲ್ಲಿ ಅಚ್ಚಳಿಯದೇ ಉಳಿಯುತ್ತದೆ ಎಂದರು.
ಕಾರ್ಯಕರ್ತೆಯರಾದ ವಿಜಯಲಕ್ಷ್ಮಿ ಹಿಪ್ಪರಗಿ, ಸುನಂದಾ ಅಗ್ನಿ ಮಾತನಾಡಿದರು.
ಉಜ್ವಲ ಸಂಸ್ಥೆಯ ಶಿಕ್ಷಣ ಯಾತ್ರೆಯ ಸಂಯೋಜಕ ಸಾಗರ್ ಘಾಟಗೆ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಈಗ ಗಮನಾರ್ಹ ಬದಲಾವಣೆಗಳಾಗುತ್ತಿದ್ದು ಇದಕ್ಕೆ ವಲಯ ಮೇಲ್ವಚಾರಕರ ಸತತ ಪ್ರಯತ್ನವೇ ಮುಖ್ಯಕಾರಣವಾಗಿದೆ ಎಂದರು.
ಉಜ್ವಲ ಸಂಸ್ಥೆಯ ಗೌಡಪ್ಪ ಬಿರಾದಾರ, ಅಕ್ಕಮ್ಮ ಬಿರಾದಾರ, ಮಾದೇವಿ ಹಿರೇಮಠ, ಸೂಗಮ್ಮಾ ಸಜ್ಜನ, ಶಹಿನಾಜ್ ತಾಂಬೋಳಿ, (ಸಾತಿಹಾಳ), ಅನಸೂಬಾಯಿ ಬಿರಾದಾರ(ಭೈರವಾಡಗಿ), ಕಸ್ತೂರಿ ಹಿಪ್ಪರಗಿ(ಮಾರ್ಕಬ್ಬಿನಹಳ್ಳಿ), ಶರಣಮ್ಮ ಬಿರಾದಾರ(ಕಡಕೋಳ),ಬಿ.ಬಿ.ಪಾಟೀಲ, ರೇಣುಕಾ ಸಂಗಣ್ಣವರ, ನೀಲಮ್ಮ ಹಿರೇಮಠ, ಸುನಂದಾ ಅಗ್ನಿಹೋತ್ರಿ, ನೀಲಮ್ಮ ಸಂಗ್ಮದ್ ಸೇರಿದಂತೆ ವಲಯದ ಎಲ್ಲ ಕಾರ್ಯಕರ್ತೆಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

