ಶಿಕ್ಷಕ ದಿನೋತ್ಸವ ಸಮೀತಿಗೆ ಶಿಕ್ಷಕ ಜಿತ್ತಿ ರೂ.1 ಲಕ್ಷ ದೇಣಿಗೆ
ವಿಜಯಪುರ: ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯದ ಶಿಕ್ಷಕ ದಿನೋತ್ಸವ ಸಮೀತಿಗೆ ಅಲಿಯಾಬಾದ ಗ್ರಾಮದ ಜಾಧವನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಜಿಓಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ ಜಿತ್ತಿ ಅವರ ತಂದೆ ದಿ.ತುಕಾರಾಂ ಜಿತ್ತಿ ಅವರ ಸ್ಮರಣಾರ್ಥವಾಗಿ ಸೆ.5 ರಂದು ನಗರದ ಸಂಗನಬಸವ ಸಮುದಾಯ ಭವನದಲ್ಲಿ ನಡೆದ ಶಿಕ್ಷಕ ದಿನಾಚರಣೆ ಸಂದರ್ಭದಲ್ಲಿ ₹ 1 ಲಕ್ಷ ದೇಣಿಗೆಯನ್ನು ಸಮೀತಿಗೆ ನೀಡಿದರು.
ದೇಣಿಗೆ ಚೆಕ್ ನೀಡಿ ಮಾತನಾಡಿದ ಚಂದ್ರಶೇಖರ ನಮ್ಮ ತಂದೆಯವರ ಸ್ಮರಣಾರ್ಥವಾಗಿ ನೀಡಿದ ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಪ್ರತಿ ವರ್ಷ ಬರುವ ಬಡ್ಡಿ ಹಣದಲ್ಲಿ ಶಿಕ್ಷಕ ದಿನಾಚರಣೆ ನಡೆಯುವ ಈ ಕಾರ್ಯಕ್ರಮಕ್ಕೆ ಸದುಪಯೋಗವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಸವಲಿಂಗ ಸ್ವಾಮೀಜಿ, ಬಿಇಓ ಪ್ರಮೋದಿನಿ ಬಳೋಲಮಟ್ಟಿ, ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪುರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೊಸಲಗಿ, ಪ್ರಾಥಮಿ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಪ್ರೌಢ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಶಿವರಾಜ ಬಿರಾದಾರ, ಝಡ್.ಐ.ಇಂಡಿಕಾರ, ಅಶೋಕ ಬಜಂತ್ರಿ, ಪುಷ್ಪಾ ಗಚ್ಚಿನಮಠ, ಗಜಾನಂದ ಜುಂಜರವಾಡ ಇದ್ದರು.

