ವಿಜಯಪುರ: ತಮಿಳುನಾಡಿನ ಚೈನ್ನೈನಲ್ಲಿ ಆ.೩೧ರಿಂದ ಸೆ.೧ರವರೆಗೆ ನಡೆದ ಖೇಲೋ ಇಂಡಿಯಾ ಮಹಿಳಾ ಲೀಗ್ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ವಿಜಯಪುರದ ೦೭ ಮಹಿಳಾ ಸೈಕ್ಲಿಸ್ಟ್ಗಳು ಸಾಧನೆ ಮಾಡಿ ಪದಕವನ್ನು ಪಡೆದಿದ್ದು, ಇವರ ಸಾಧನೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳು ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಖೇಲೋ ಇಂಡಿಯಾ ಮಹಿಳಾ ಲೀಗ್ ರೋಡ್ ಸೈಕ್ಲಿಂಗ್ ಕಿರಿಯ ಬಾಲಕಿಯರ ವಿಭಾಗದಲ್ಲಿ ಕೋಕಿಲಾ ಚವ್ಹಾಣ (ಬಂಗಾರ), ಜ್ಯೊತಿ ರಾಠೋಡ (ಬೆಳ್ಳಿ) ಹಾಗೂ ದೀಪಿಕಾ ಫಡತರೆ (ಕಂಚು) ಪಡೆದಿದ್ದಾರೆ.
ಕಿರಿಯ ಮಹಿಳಾ ವಿಭಾಗದಲ್ಲಿ ಪಾಯಲ್ ಚವ್ಹಾಣ (ಬಂಗಾರ) ಹಾಗೂ ಆರಾಧನಾ ಸಂತೋಷ (ಬೆಳ್ಳಿ), ಅಕ್ಷತಾ ಭೂತನಾಲ ಹಾಗೂ ಅಕ್ಷತಾ ಬಿರಾದಾರ (ಕಂಚು) ಪಡೆದಿದ್ದಾರೆ. ಸೈಕ್ಲಿಂಗ್ ತರಬೇತಿದಾರರಾದ ಶ್ರೀಮತಿ ಅಲ್ಕಾ ಎನ್.ಫಡತರೆ, ಅನಂತ ದೇಸಾಯಿ, ಖೇಲೋ ಇಂಡಿ ತರಬೇತಿದಾರರಾದ ರಮೇಶ ರಾಠೋಡ ಮತ್ತು ಕಚೇರಿ ಅಧೀಕ್ಷಕರಾದ ಎಸ್.ಬಿ.ಕಡಕಲ್ ಅವರು ಉಪಸ್ಥಿತರಿದ್ದರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಸೈಕ್ಲಿಂಗ್ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್ಗಳ ಸಾಧನೆ
Related Posts
Add A Comment
