Author: editor.udayarashmi@gmail.com

ಸ್ವಚ್ಚತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅನುಸೂಯ ತೆರದಾಳ ಸಲಹೆ ಮುದ್ದೇಬಿಹಾಳ: ತಾಲೂಕಿನ ತಂಗಡಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಹಾಗೂ ಡೆಂಗ್ಯೂ ಕುರಿತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.ಈ ವೇಳೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯ ತೆರದಾಳ ಮಾತನಾಡಿ, ಎಲ್ಲೆಡೆ ಡೆಂಗ್ಯೂ ಜ್ವರ ಹರಡುತ್ತಿರುವುದರಿಂದ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಸೊಳ್ಳೆಗಳನ್ನು ನಿರ್ಮೂಲನೆ ಮಾಡಬೇಕು. ಡೆಂಗ್ಯೂ ಹರಡುವುದನ್ನು ನಿಯಂತ್ರಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಆರೋಗ್ಯ ಇಲಾಖೆಯಿಂದ ಲಾರ್ವಾ ಸಮೀಕ್ಷೆಯನ್ನು ನಡೆಸುವುದರ ಜೊತೆಗೆ ಜನರಿಗೆ ಆರೋಗ್ಯ ಶಿಕ್ಷಣ ನೀಡುತ್ತಿದೆ. ಮಳೆಗಾಲದಲ್ಲಿ ಸೋಂಕು ಹೆಚ್ಚಾಗಿ ಹರಡುವುದರಿಂದ ಇವುಗಳನ್ನು ಶುಚಿಗೊಳಿಸಿ, ಸೊಳ್ಳೆ ಮೊಟ್ಟೆ ಇಡಲು ಅವಕಾಶವಿರದಂತೆ ಸಾರ್ವಜನಿಕರು ನೋಡಿಕೊಳ್ಳಬೇಕು. ಹಗಲಿನಲ್ಲಿ ಸೊಳ್ಳೆ ಕಚ್ಚದಂತೆ ಎಚ್ಚರ ವಹಿಸಬೇಕು. ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ಗಳ ಮುಚ್ಚಳವನ್ನು ಭದ್ರವಾಗಿ ಮುಚ್ಚಬೇಕು. ಪಾತ್ರೆ ಹಾಗೂ ಬಿಂದಿಗೆಗಳಲ್ಲಿ ಹೆಚ್ಚು ದಿನ ನೀರು ಸಂಗ್ರಹಿಸಿಡಬಾರದು. ಮನೆಯ ಸುತ್ತಲು ಹಾಗೂ ತಾರಸಿ ಮೇಲೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು…

Read More

ವಿಜಯಪುರ: ಪಕ್ಷ ಸಂಘಟನೆಯಲ್ಲಿ ಹೋರಾಟ ಮಾಡುತ್ತ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಶ್ರಮಿಸಿರುವ ಬಿಜೆಪಿ ರಾಜ್ಯ ವಕ್ತಾರ, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗೋಪಾಲ ಘಟಕಾಂಬಳೆ ಆಗ್ರಹಿಸಿದ್ದಾರೆ.ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ ಅವರು ಅಲ್ಪ ಸಮಯದಲ್ಲೇ ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ವಿಧಾನಸಭಾ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿ ಅವರ ಗೆಲುವಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆಮಾಡಿ ಸಾಮಾಜಿಕ ಪ್ರಾತಿನಿಧ್ಯ ಕೊಡೆಬೇಕು ಎಂದು ಪ್ರಕಟಣೆಯಲ್ಲಿ ಗೋಪಾಲ ಘಟಕಾಂಬಳೆ ತಿಳಿಸಿದ್ದಾರೆ.

Read More

ಇಂಡಿ: ಬೈಕ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರರೀರ್ವರೂ ಮೃತಪಟ್ಟ ಘಟನೆ ಇಂಡಿ ತಾಲೂಕಿನ ರೂಗಿ ಕ್ರಾಸ್ ಬಳಿ ಸಂಭವಿಸಿದೆ.ಮೃತರನ್ನು ನಾದ ಗ್ರಾಮದ ಸಿದ್ದು ಬಿರಾದಾರ (೨೭) ಮತ್ತು ಲಾಳಸಂಗಿ ಗ್ರಾಮದ ನಾಗೇಶ ನಾವಿ (೨೭) ಎಂದು ಗುರುತಿಸಲಾಗಿದೆ.ರೂಗಿ ಕ್ರಾಸ್ ಬಳಿಯ ಸುಗಲಮ್ಮತಾಯಿ ಮಠದ ಮುಂದೆ ಈ ಅವಘಡ ಸಂಭವಿಸಿದ್ದು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರನ್ನು ಇಂಡಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

Read More

ಇಂಡಿ: ತನ್ನ ಪಾಲಿನ ಆಸ್ತಿ ಕೊಡದಿದ್ದಕ್ಕೆ ಕುಪಿತಗೊಂಡ ಮಗನೋರ್ವ ಸ್ವಂತ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂಡಿ ತಾಲೂಕಿನ ಚಿಕ್ಕಮಣೂರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.ಮೃತನನ್ನು ಲಕ್ಷ್ಮಣ್ ಮ್ಯಾಗೇರಿ (೬೫) ಎಂದು ಗುರುತಿಸಲಾಗಿದ್ದು ಪ್ರಕಾಶ್ ಮ್ಯಾಗೇರಿ (೩೩) ಯೇ ಕೊಲೆ ಮಾಡಿದ ಮಗನಾಗಿದ್ದಾನೆ ಎಂದು ತಿಳಿದು ಬಂದಿದೆ.ಪ್ರಕಾಶ್ ಮ್ಯಾಗೇರಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾg. ಈ ಕುರಿತು ಇಂಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಇಂಡಿಯಲ್ಲಿ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿ ನಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟನೆ ಇಂಡಿ: ಇಲ್ಲಿಯ ನಿಂಬೆಗೆ ಭೌಗೋಲಿಕ ಸೂಚ್ಯಾಂಕ ದೊರೆತಿದ್ದು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯ ನಿಂಬೆಗೆ ಚೆನ್ನಾಗಿ ಬೆಲೆ ದೊರೆಯುತ್ತಿದ್ದು ರಾಜ್ಯ ಮತ್ತು ದೇಶದಲ್ಲಿ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ಭಾರಿ ಬೇಡಿಕೆ ಇದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಮಂಗಳವಾರ ಪಟ್ಟಣದ ರೈಲ್ವೆ ಸ್ಟೇಷನ ರಸ್ತೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಮತ್ತು ಎಸ್.ಡಬ್ಲೂ.ಎ.ಆರ್.ಡಿಎಸ್ ಸಂಸ್ಥೆ ಸಹಯೋಗದೊಂದಿಗೆ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿ ನಿಂಬೆ ಬೆಳೆಗಾರರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಕೋಲ್ಡ ಸ್ಟೋರೆಜ್: ಇಂಡಿಯ ಕೃಷಿ ವಿಜ್ಞಾನದಲ್ಲಿ ಕೇಂದ್ರದಲ್ಲಿ ಮೂರು ಎಕರೆ, ಇಲ್ಲವೆ ನಿಂಬೆ ಅಭಿವೃದ್ದಿ ಮಂಡಳಿಗೆ ಸರಕಾರ ಜಾಗ ನೀಡಿದ್ದು, ಅಲ್ಲಿ ಮೂರು ಎಕರೆ, ಇಲ್ಲವೆ ಬೂದಿಹಾಳ ಹತ್ತಿರ ಔದ್ಯೋಗಿಕ ವಸಹಾತು ನಿರ್ಮಿಸುತ್ತಿದ್ದು, ಅಲ್ಲಿ ಮೂರು ಎಕರೆ ಯಾವದಾದರೂ ಒಂದು ಕಡೆ ಜಾಗ ನೀಡಿ ಶೀಘ್ರದಲ್ಲಿಯೇ ಕೋಲ್ಡ್ ಸ್ಟೋರೆಜ್ ನಿರ್ಮಿಸಲಾಗುವದು…

Read More

ಬಸವನಬಾಗೇವಾಡಿಯಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತ ವಿಚಾರಗೋಷ್ಠಿ ಬಸವನಬಾಗೇವಾಡಿ: ತೋಟಗಾರಿಕೆ ಬೆಳೆ ಸೇರಿದಂತೆ ಇತರೇ ಬೆಳೆಗಳಿಗೆ ರೋಗ ಬಂದರೆ ಕೀಟಗಳು ತಾರತಮ್ಯ ಮಾಡದೇ ಎಲ್ಲ ಬೆಳೆಗಳನ್ನು ತಿನ್ನುತ್ತವೆ. ಅದಕ್ಕಾಗಿ ರೈತರು ಯಾವುದೇ ಬೆಳೆ ಇರಲಿ ಬರತಕ್ಕಂತಹ ಕೀಟಗಳನ್ನು ಯಾವ ತರಹ ನಿರ್ವಹಣೆ ಮಾಡಬೇಕೆಂಬುವದರ ಕುರಿತು ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ರಾಮನಗೌಡ ಎಸ್.ಎಚ್. ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಬಸವನಬಾಗೇವಾಡಿಯ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ಧಾರವಾಡದ ಬಿ.ಆರ್.ಮೈಕ್ರೊನ್ಯೂಟ್ರಿಯಂಟ್ಸ ಪ್ರೈ.ಲಿ. ಹಾಗೂ ಎಸ್.ಎಸ್.ವಿ.ಬಯೋಸೈನ್ಸನ್ ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳಲ್ಲಿ ಸಮಗ್ರ ಕೀಟ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಕೀಟಗಳನ್ನು ನಾಶ ಮಾಡುವುದಕ್ಕಾಗಿ ದುಬಾರಿಯಾದ ಯಥೇಚ್ಛವಾಗಿ ರಾಸಾಯನಿಕ ಕೀಟನಾಶಕಗಳನ್ನು ಖರೀದಿಸಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಬೆಳೆ ಬೆಳೆಯುವದಕ್ಕೆ ಸಾಕಷ್ಟು ಖರ್ಚು…

Read More

ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ಸೇರಿದಂತೆ ಉಕ ಭಾಗದ ರೈಲ್ವೆ ಅಭಿವೃದ್ಧಿ ಬೇಡಿಕೆಗಳಿಗಾಗಿ ಮನವಿ ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿ, ವಿಜಯಪುರ ನಗರದಲ್ಲಿ ರೈಲ್ವೆ ಮೇಲ್ಸೆತುವೆ ನಿರ್ಮಾಣ ಸೇರಿದಂತೆ ಉತ್ತರ ಕರ್ನಾಟಕ ಭಾಗದ ರೈಲ್ವೆ ಅಭಿವೃದ್ಧಿ ಬೇಡಿಕೆಗಳ ಕುರಿತು ಮನವಿ ಪತ್ರ ನೀಡಿ ಚರ್ಚಿಸಿದರು.ವಿಜಯಪುರ ನಗರವು ಸುಮಾರು ೧೦ ಲಕ್ಷ ಜನಸಂಖ್ಯೆ ಹೊಂದಿದ್ದು, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಹುಟಗಿ-ಗದಗ ನಡುವೆ ಡಬ್ಬಿಂಗ್ ಟ್ರಾö್ಯಕ್ ಮತ್ತು ರೈಲ್ವೆ ವಿದ್ಯುದೀಕರಣಗೊಳ್ಳುವುದರಿಂದ ಈ ಮಾರ್ಗದಲ್ಲಿ ವಂದೇ ಭಾರತ್ ಮತ್ತು ಇತರೆ ಸೂಪರ್ ಪಾಸ್ಟ್ ರೈಲುಗಳು ಸಂಚರಿಸುವ ಸಾಧ್ಯತೆಯಿದೆ. ಹೀಗಾಗಿ ವಿಜಯಪುರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಶನ್ ಸ್ಕಿಮ್ ಅಡಿಯಲ್ಲಿ ಮೇಲ್ದರ್ಜೆಗೆ ಏರಿಸಿದರೆ, ರೈಲು ನಿಲ್ದಾಣ ನವೀಕರಣ, ಪ್ರಯಾಣಿಕರಿಗೆ ಸೌಕರ್ಯ, ಪ್ರಯಾಣಿಕರ ಮಾರ್ಗದರ್ಶಿ ಸೂಚನಾ ಫಲಕಗಳ ಅಳವಡಿಕೆ ಮಾಡಲು ಅನುಕೂಲವಾಗುತ್ತದೆ.ಅದೇ ರೀತಿ ನಗರದ ಮುಖ್ಯ ರೈಲು ನಿಲ್ದಾಣದಿಂದ…

Read More

ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಮೊಹರಂ ಪ್ರಯುಕ್ತ ಜರುಗಿದ ಶಾಂತಿಸಭೆ ದೇವರಹಿಪ್ಪರಗಿ: ಮೊಹರಂ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದರ ಮೂಲಕ ಪ್ರತಿಯೊಬ್ಬರು ಸಾಂಪ್ರದಾಯಿಕ ಸೌಹಾರ್ದತೆಯನ್ನು ಮುಂದುವರೆಸಬೇಕು ಎಂದು ಪಿ.ಎಸ್.ಐ ಬಸವರಾಜ ತಿಪ್ಪಾರೆಡ್ಡಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬುಧವಾರ ಮೊಹರಂ ಪ್ರಯುಕ್ತ ಜರುಗಿದ ಶಾಂತಿಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪಟ್ಟಣ ಹಿಂದಿನಿಂದಲೂ ಶಾಂತಿ, ಸುವ್ಯವಸ್ಥೆ, ಸೌಹಾರ್ದತೆ, ಭಾತೃತ್ವಕ್ಕೆ ಹೆಸರಾಗಿದೆ. ಇಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ. ಅದಾಗ್ಯೂ ಇಲಾಖೆಯ ನಿರ್ದೇಶನದಂತೆ ಸಭೆ ನಡೆಸಬೇಕಾಗುತ್ತದೆ. ಸಾರ್ವಜನಿಕರ ಹಿತರಕ್ಷಣೆಕ್ಕಾಗಿ ಇಲಾಖೆ ಕೈಗೊಳ್ಳುವ ಎಲ್ಲಾ ಮುಂಜಾಗ್ರತಾ ಕ್ರಮಗಳಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.ನಾಗರೀಕರ ಪರವಾಗಿ ಮಹಿಬೂಬ್ ಹುಂಡೇಕಾರ ,ಶ್ರೀಧರ ನಾಡಗೌಡ, ಮಾತನಾಡಿದರು.ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಬಶೀರ್‌ಅಹ್ಮದ್ ಬೇಪಾರಿ, ಕಾಶೀನಾಥ ಬಜಂತ್ರಿ, ನಾಮ ನಿರ್ದೇಶಿತ ಸದಸ್ಯ ಸುನೀಲ ಕನಮಡಿ, ವಿನೋದ ಪಾಟೀಲ, ಮಲ್ಲನಗೌಡ ಪಾಟೀಲ, ಪ್ರಕಾಶ ಗುಡಿಮನಿ, ಪ್ರಕಾಶ ತಳಕೇರಿ, ಹುಸೇನ್ ಗೌಂಡಿ, ಅಕ್ಬರ್ ಬಾಗವಾನ, ನಬಿಲಾಲ್, ದೇವರಾಜ ಬಿರಾದಾರ, ಎಮ್.ಎಸ್.ಮೆಟಗಾರ, ಸಿಬ್ಬಂದಿ ಸಂಜೀವ ತಳವಾರ, ರಾಮನಗೌಡ ಬಿರಾದಾರ ಸಹಿತ ಇತರರು…

Read More

ವಿಜಯಪುರ: ಮೃದು ಮನಸ್ಸಿನ ಮಕ್ಕಳಿಗೆ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸಿ ತಿದ್ದಿ ತೀಡಿ ಶಿಕ್ಷಣ ನೀಡಿ ಅವರ ಜೀವನವನ್ನು ನಿರ್ಮಿಸುವ ಶಿಕ್ಷಕರೇ ಧನ್ಯರು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಎನ್.ಎಚ್. ನಾಗೂರ ಹೇಳಿದರು.ತಾಲ್ಲೂಕಿನ ತಿಡಗುಂದಿಯ ಕಾಯಕಯೋಗಿ ಗ್ರಾಮೀಣ ಸಂಸ್ಥೆ ಮಾನಸ ಗಂಗೋತ್ರಿ ವಸತಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ಸಹಯೋಗದಲ್ಲಿ ಬುಧವಾರ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಏರ್ಪಡಿಸಿದ ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಗುರು ಪರಂಪರೆಗೆ ಹೆಚ್ಚು ಮಹತ್ವ ಕೊಟ್ಟಿರುವವರು ನಾವು, ಸಮಾಜ ಅತೀ ಹೆಚ್ಚು ಗೌರವ ಕೊಡುವ ಕ್ಷೇತ್ರ ನಮ್ಮ ಶಿಕ್ಷಕರ ಕ್ಷೇತ್ರವಾಗಿದೆ. ಶಾಲೆಯು ಜೀವಂತ ದೇವರ ಗುಡಿ ಎಂದು ಸಮಾಜವು ನಂಬಿದೆ. ಕಡುಬಡತನದ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಅವರ ಜೀವನ ಉಜ್ವಲಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಯಲ್ಲಿ ಉತ್ತಮ ಪರಿಸರ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಮುಖ್ಯೋಪಾಧ್ಯಾಯರದ್ದಾಗಿದೆ. ಸರ್ಕಾರಿ ಶಾಲೆಗಳಲ್ಲಿ…

Read More

ವಿಜಯಪುರ: ಸಾಮಾಜಿಕ ನೆರವು ಯೋಜನೆಗಳಿಗೆ ಸಂಬಂಧಿಸಿದಂತೆ ಪಿಂಚಣಿದಾರರು ತಮ್ಮಕುಂದು ಕೊರತೆ ನೋಂದಾಯಿಸಲು,ಪಿಂಚಣಿ ಕುರಿತ ಮಾಹಿತಿ ಪಡೆಯಲು ಹಾಗೂ ಮಾಹಿತಿ ಹಂಚಿಕೊಳ್ಳಲುಜಿಲ್ಲೆಯ ೧೩ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಒಂದು ಬಾರಿ ಪಿಂಚಣಿ ದಿನವನ್ನು ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಯಶಸ್ವಿಯಾಗಿ ಜುಲೈ ೨೦ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ೧೩ ಗ್ರಾಮ ಪಂಚಾಯತಿಗಳಲ್ಲಿ ಪಿಂಚಣಿ ದಿನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ತಿಳಿಸಿದ್ದಾರೆ.ಅಂದು ಬೆಳಗ್ಗೆ ೧೧ ಗಂಟೆಗೆ ವಿಜಯಪುರದ ಗ್ರೇಡ್-೨ ತಹಶೀಲ್ದಾರ ಅವರು ಕನ್ನೂರಿನ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ, ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ್ ಅವರು ಕಂಬಗಿ ಗ್ರಾಮ ಪಂಚಾಯತಿಯಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಟಕ್ಕಳಕಿಯ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ,ಬಸವನ ಬಾಗೇವಾಡಿ ತಹಸೀಲ್ದಾರ್ ಅವರು ಯರನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪಿಂಚಣಿ ದಿನ ನಡೆಸಲಿದ್ದಾರೆ.ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ಆಲಮಟ್ಟಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ, ಕೊಲ್ಹಾರ ತಹಶೀಲ್ದಾರ್ ಅವರು, ಕೂಡಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಮುದ್ದೇಬಿಹಾಳ…

Read More